ಆರ್ಥಿಕ ಸಹಾಯದ ನಿರೀಕ್ಷೆಯಲ್ಲಿ ಕಾಶಿಪಟ್ಣದ ಯುವಕ

Update: 2020-05-27 17:58 GMT

ಮಂಗಳೂರು, ಮೇ 27: ಬೆಳ್ತಂಗಡಿ ತಾಲೂಕಿನ ಕಾಶಿಪಟ್ಣ ಸಮೀಪದ ದರ್ಖಾಸು ಮನೆಯ ನಿವಾಸಿ ಮುಹಮ್ಮದ್ ಹನೀಫ್ (36) ಎಂಬವರು ಕಳೆದ ಎರಡು ವರ್ಷದಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಚಿಕಿತ್ಸೆ ಸಹಿತ ಕುಟುಂಬವನ್ನು ಸಲಹುವ ಸಲುವಾಗಿ ಇದೀಗ ದಾನಿಗಳಿಂದ ಆರ್ಥಿಕ ಸಹಾಯದ ನಿರೀಕ್ಷೆಯಲ್ಲಿದ್ದಾರೆ.

 ವೃತ್ತಿಯಲ್ಲಿ ಸುಮಾರು 15 ವರ್ಷಗಳಿಂದ ಲಾರಿ ಮತ್ತು ಬಸ್‌ಗಳಲ್ಲಿ ಚಾಲಕನಾಗಿದ್ದ ದುಡಿಯುತ್ತಿದ್ದ ಹನೀಫ್‌ಗೆ ಪತ್ನಿ ಮತ್ತು 4 ವರ್ಷದ ಗಂಡು ಮಗು ಇದೆ. ಎರಡು ವರ್ಷದ ಹಿಂದೆ ಅಚಾನಕ್ ಆಗಿ ಕೈ ಕಾಲಿನಲ್ಲಿ ಚಲನಾಶಕ್ತಿಯನ್ನು ಕಳೆದುಕೊಂಡ ಹನೀಫ್ ಆ ಬಳಿಕ ಮಂಗಳೂರು, ಬೆಂಗಳೂರು, ಕಲ್ಲಿಕೋಟೆ, ಉಡುಪಿಯ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದರು. ಆದರೆ ಗುಣಮುಖರಾಗಲಿಲ್ಲ. ಒಂದು ವರ್ಷ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದರೂ ಕೂಡ ರೋಗದ ಮೂಲ ಗೊತ್ತಾಗಲಿಲ್ಲ. ಅತ್ತ ರೋಗದಿಂದ ಮುಕ್ತಿ ಸಿಗಲಿಲ್ಲ. ಇತ್ತ ಕೆಲಸಕ್ಕೆ ಹೋಗಲಾಗದೆ ಹಾಸಿಗೆ ಹಿಡಿದಿದ್ದಾರೆ. ಇವೆಲ್ಲದರ ಮಧ್ಯೆ ಮನೆಯಲ್ಲಿ ಬಡತನವಿದೆ. ಹೆಂಡತಿ ಮತ್ತು ಮಗುವಿನ ದಿನವಹಿ ಖರ್ಚುಗಳಲ್ಲದೆ ತನ್ನ ಔಷಧದ ಖರ್ಚಿಗೂ ಹಣ ಹೊಂದಿಸಲಾಗದೆ ತೀವ್ರ ಸಂಕಷ್ಟದಲ್ಲಿರುವ ಹನೀಫ್ ಇದೀಗ ಅನಿವಾರ್ಯವಾಗಿ ದಾನಿಗಳು ನೆರವು ಕೋರಿದ್ದಾರೆ.

ಹಾಗಾಗಿ ದಾನಿಗಳು ‘ಮುಹಮ್ಮದ್ ಹನೀಫ್ ಕಾಶಿಪಟ್ಣ, ಕಾರ್ಪೊರೇಶನ್ ಬ್ಯಾಂಕ್ ಖಾತೆ ಸಂ: 520101039301271, ಐಎಫ್‌ಎಸ್‌ಸಿ ನಂ: ಸಿಒಆರ್‌ಪಿ 0000231, ಶಿರ್ತಾಡಿ ಶಾಖೆ, ಬೆಳ್ತಂಗಡಿ, ದ.ಕ.ಜಿಲ್ಲೆ- ಈ ಖಾತೆಗೆ ಸಹಾಯಧನ ಕಳುಹಿಸಬಹುದು. ಹೆಚ್ಚಿನ ಮಾಹಿತಿಗೆ ಹನೀಫ್ (ಮೊ.ಸಂ: 9663124121) ಅವರನ್ನು ಸಂಪರ್ಕಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News