5 ಭಾರತೀಯ ಶಾಂತಿಪಾಲಕರಿಗೆ ವಿಶ್ವಸಂಸ್ಥೆಯ ಮರಣೋತ್ತರ ಪ್ರಶಸ್ತಿ

Update: 2020-05-27 18:01 GMT

ವಿಶ್ವಸಂಸ್ಥೆ (ನ್ಯೂಯಾರ್ಕ್), ಮೇ 27: ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಯಲ್ಲಿ ಸೇವೆ ಸಲ್ಲಿಸುತ್ತಾ ಕಳೆದ ವರ್ಷ ಹುತಾತ್ಮರಾಗಿರುವ ಐವರು ಭಾರತೀಯ ಸೈನಿಕರಿಗೆ ಪ್ರತಿಷ್ಠಿತ ವಿಶ್ವಸಂಸ್ಥೆ ಪದಕವನ್ನು ಶುಕ್ರವಾರ ಪ್ರದಾನ ಮಾಡಲಾಗುವುದು.

ಐವರು ಭಾರತೀಯರು ಸೇರಿದಂತೆ 83 ಸೇನಾ, ಪೊಲೀಸ್ ಮತ್ತು ನಾಗರಿಕ ಸಿಬ್ಬಂದಿಗೆ ಈ ಗೌರವವನ್ನು ನೀಡಲಾಗುವುದು.

ಶೌರ್ಯಕ್ಕಾಗಿ ಮತ್ತು ಕರ್ತವ್ಯದ ಹಾದಿಯಲ್ಲಿ ಪ್ರಾಣ ತ್ಯಾಗ ಮಾಡಿದವರಿಗಾಗಿ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಮರಣೋತ್ತರವಾಗಿ ನೀಡಲಾಗುತ್ತದೆ.

ವಿಶ್ವಸಂಸ್ಥೆಯ ಶಾಂತಿಪಾಲಕರಾಗಿ ದಕ್ಷಿಣ ಸುಡಾನ್‌ನಲ್ಲಿ ಸೇವೆ ಸಲ್ಲಿಸಿರುವ ಮೇಜರ್ ರವಿ ಇಂದರ್ ಸಿಂಗ್ ಸಂಧು ಮತ್ತು ಸಾರ್ಜಂಟ್ ಲಾಲ್ ಮನೋತ್ರ ತಾರ್ಸಿಮ್; ಲೆಬನಾನ್‌ನಲ್ಲಿ ವಿಶ್ವಸಂಸ್ಥೆಯ ಮಧ್ಯಂತರ ಪಡೆಯಲ್ಲಿ ಸೇವೆ ಸಲ್ಲಿಸಿರುವ ಸಾರ್ಜಂಟ್ ರಮೇಶ್ ಸಿಂಗ್, ವಿಶ್ವಸಂಸ್ಥೆಯ ಸೇನಾ ಹಿಂದೆಗೆತ ವೀಕ್ಷ ಪಡೆಯಲ್ಲಿ ಸೇವೆ ಸಲ್ಲಿಸಿರುವ ಜಾನ್ಶನ್ ಬೆಕ್ ಮತ್ತು ಕಾಂಗೊದಲ್ಲಿ ವಿಶ್ವಸಂಸ್ಥೆಯ ಆಡಳಿತ ಸ್ಥಿರೀಕರಣ ಯೋಜನೆಯಲ್ಲಿ ನಾಗರಿಕ ಅಧಿಕಾರಿಯಾಗಿ ಕೆಲಸ ಮಾಡಿರುವ ಎಡ್ವರ್ಡ್ ಅಗಪಿಟೊ ಪಿಂಟೊ ಡಾಗ್ ಹಮ್ಮಾರ್ಸ್‌ಜೋಲ್ಡ್ ಪ್ರಶಸ್ತಿ ಮರಣೋತ್ತರವಾಗಿ ಸ್ವೀಕರಿಸಲಿದ್ದಾರೆ.

ಮೇ 29ರಂದು ನಡೆಯಲಿರುವ ಅಂತರ್‌ರಾಷ್ಟ್ರೀಯ ವಿಶ್ವಸಂಸ್ಥೆಯ ಶಾಂತಿಪಾಲಕರ ದಿನಾಚರಣೆ ಸಂದರ್ಭದಲ್ಲಿ ಪ್ರಶಸ್ತಿಯನ್ನು ವಿತರಿಸಲಾಗುವುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News