ಮೇ 1ರಿಂದ 91 ಲಕ್ಷ ವಲಸಿಗ ಕಾರ್ಮಿಕರನ್ನು ಸಾಗಿಸಲಾಗಿದೆ: ಸುಪ್ರೀಂಗೆ ಕೇಂದ್ರ ಉತ್ತರ

Update: 2020-05-28 08:59 GMT

ಹೊಸದಿಲ್ಲಿ,ಮೇ 28: ಮೇ 1ರಂದು ವಿಶೇಷ ರೈಲು ಸೇವೆ ಆರಂಭವಾದ ಬಳಿಕ ಸುಮಾರು 91 ಲಕ್ಷ ವಲಸೆ ಕಾರ್ಮಿಕರನ್ನು ಅವರವರ ರಾಜ್ಯಗಳಿಗೆ ಸಾಗಿಸಲಾಗಿದೆ ಎಂದು ಕೇಂದ್ರ ಸರಕಾರವು ಇಂದು ಸುಪ್ರೀಂಕೋರ್ಟ್‌ಗೆ ತಿಳಿಸಿದೆ.

ಕೇವಲ ಒಬ್ಬ ವಲಸಿಗ ಕಾರ್ಮಿಕ ಉಳಿಯುವ ತನಕವೂ ನಮ್ಮ ಪ್ರಯತ್ನ ಅಥವಾ ರೈಲು ಸೇವೆಯನ್ನು ನಿಲ್ಲಿಸುವುದಿಲ್ಲ ಎಂದು ಸರಕಾರ ಹೇಳಿದೆ.

ವಲಸಿಗರ ದುಃಸ್ಥಿತಿಯ ಬಗ್ಗೆ ಮಂಗಳವಾರ ಪ್ರತಿಕ್ರಿಯಿಸಿದ ಸುಪ್ರೀಂಕೋರ್ಟ್, ರಾಜ್ಯ ಹಾಗೂ ಕೇಂದ್ರ ಸರಕಾರಗಳು ವಲಸಿಗ ಕಾರ್ಮಿಕರಿಗೆ ಸಂಬಂಧಿಸಿ ಸಾಕಷ್ಟು ಲೋಪದೋಷ ಮಾಡಿವೆ. ಸಿಲುಕಿಹಾಕಿಕೊಂಡಿರುವ ಎಲ್ಲರಿಗೂ ತಕ್ಷಣವೇ ಪರಿಹಾರ ನೀಡಬೇಕೆಂದು ಎಲ್ಲ ರಾಜ್ಯಗಳಿಗೆ ನಿರ್ದೇಶನ ನೀಡಿದೆ.

ಕಾಂಗ್ರೆಸ್ ಹಾಗೂ ಸಾಮಾಜಿಕ ಕಾರ್ಯಕರ್ತೆ ಮೇಧಾ ಪಾಟ್ಕರ್ ವಲಸೆ ಕಾರ್ಮಿಕರ ವಿಚಾರಕ್ಕೆ ಸಂಬಂಧಿಸಿ ಅರ್ಜಿಯನ್ನು ಸಲ್ಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News