ಕಲ್ಲಡ್ಕ ನಿಶಾಂತ್ ಮನೆಗೆ ಜಮಾಅತೆ ಇಸ್ಲಾಮೀ ಹಿಂದ್ ನಿಯೋಗ ಭೇಟಿ

Update: 2020-05-28 09:59 GMT

ಬಂಟ್ವಾಳ : ಇತ್ತೀಚಿಗೆ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಕಲ್ಲಡ್ಕದ ನಿಶಾಂತ್‌ನನ್ನು ಬದುಕಿಸಲು, ಸ್ವಂತ ಜೀವವನ್ನೇ ಪಣಕ್ಕಿಟ್ಟು ನದಿಗೆ ಹಾರಿದ ಗೂಡಿನ ಬಳಿಯ ತೌಸೀಫ್‌, ಸಮೀರ್‌, ಮುಹಮ್ಮದ್, ಝಾಹಿದ್‌, ಅಕ್ಕರಂಗಡಿಯ ಆರಿಫ್‌ ಮತ್ತು ಮುಖ್ತಾರ್ ಅವ‌ರ ನಿವಾಸಗಳಿಗೆ ಭೇಟಿ ನೀಡಿದ ಜಮಾಅತೆ ಇಸ್ಲಾಮೀ ಹಿಂದ್‌ ದ.ಕ. ಜಿಲ್ಲಾ ಸಮಿತಿ ಅವರನ್ನು ಅಭಿನಂದಿಸಿತು.

ಬಳಿಕ ಜೀವರಕ್ಷಕ ಹೋರಾಟಗಾರರಿಗೆ ಬೋಳಂಗಡಿ ಜುಮಾ ಮಸೀದಿಯ ಖತೀಬ್ ಮೌಲಾನಾ ಯಹ್ಯಾ ತಂಞಳ್‌ ಮತ್ತು ಜಮಾಅತೆ ಇಸ್ಲಾಮೀ ಹಿಂದ್‌ ದ.ಕ. ಜಿಲ್ಲಾ ಸಾರ್ವಜನಿಕ ಸಂಪರ್ಕ ಸಂಚಾಲಕರಾದ ಅಮೀನ್‌ ಅಹ್ಸನ್‌ರ ನೇತೃತ್ವದ ನಿಯೋಗ ಗೌರವ ಧನ ನೀಡಿ ಸನ್ಮಾನಿಸಿತು.

ನಂತರ ಕಲ್ಲಡ್ಕದ ಬಾಡಿಗೆ ಮನೆಯಲ್ಲಿರುವ ನಿಶಾಂತ್‌ ಕುಟುಂಬವನ್ನೂ ಸಂದರ್ಶಿಸಿದ ನಿಯೋಗ, ಮೃತನ ಕುಟುಂಬಕ್ಕೂ ಸಾಂತ್ವನ ಹೇಳಿ, ಗೌರವ ಧನ ನೀಡಿ ಸಂತೈಸಿತು.

ನಿಯೋಗದಲ್ಲಿ ಸಮಾಜ ಸೇವಾ ಘಟಕ, ಜಮಾಅತೆ ಇಸ್ಲಾಮೀ ಹಿಂದ್ ಮಂಗಳೂರು ಸದಸ್ಯರಾದ ಮುಹಮ್ಮದ್ ಮುಹ್ಸಿನ್, ಸಿದ್ದೀಕ್ ಜಕ್ರಿಬೆಟ್ಟು ಪಾಣೆಮಂಗಳೂರು ಜಮಾಅತ್‌ ಅಧ್ಯಕ್ಷ ಮುಖ್ತಾರ್‌ ಅಹ್ಮದ್‌, ಮುಹಮ್ಮದ್ ಮೆಡಿಕಲ್‌ ಬೋಳಂಗಡಿ, ಅಬ್ದುಲ್ ಶುಕೂರ್ , ಮುಸ್ತಫಾ ಬೋಳಂಗಡಿ, ಅಬ್ದುಲ್ ಸತ್ತಾರ್‌ ಗೂಡಿನಬಳಿ, ಆದಮ್‌ ಸಾಬ್‌ ಅಕ್ಕರಂಗಡಿ, ರಿಝ್ವಾನ್‌ ಬೋಳಂಗಡಿ, ಶಂಶೀರ್ ಮೆಲ್ಕಾರ್‌, ತಮೀಝ್‌ ಕಾರಾಜೆ, ಜಮಾಅತೆ ಇಸ್ಲಾಮಿ ಕಲ್ಲಡ್ಕ ಶಾಖೆಯ ಅಧ್ಯಕ್ಷ ಇಮಾರತ್‌ ಅಲಿ ಹಾಗು ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News