ರೋಟರಿ ಕ್ಲಬ್‌ನಿಂದ ಕೆಎಂಸಿ ಆಸ್ಪತ್ರೆಗೆ ಕೋವಿಡ್ ಮಾದರಿ ಸಂಗ್ರಹಕ್ಕೆ ಸ್ಮಾರ್ಟ್ ಕಿಯೋಸ್ಕ್ ಕೊಡುಗೆ

Update: 2020-05-28 13:33 GMT

ಉಡುಪಿ, ಮೇ 28: ರೋಟರಿ ಜಿಲ್ಲೆ 3182 ವಲಯ 4ರ ಮಣಿಪಾಲ ಟೌನ್ ರೋಟರಿ ಕ್ಲಬ್ ವತಿಯಿಂದ ಕೋವಿಡ್ ಸ್ವಯಂಚಾಲಿತ ಮಾದರಿ ಸಂಗ್ರಹ ಸಂಚಾರಿ ಘಟಕ (ಸ್ಮಾರ್ಟ್ ಕಿಯೋಸ್ಕ್)ವನ್ನು ಗಣೇಶ್ ನಾಯಕ್ ಅವರು ಮಣಿಪಾಲ ಕೆಎಂಸಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ ಇವರಿಗೆ ಬುಧವಾರ ಮಣಿಪಾಲದಲ್ಲಿ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ರೋಟರಿ ಕ್ಲಬ್ ಮಣಿಪಾಲ ಟೌನ್ ಅಧ್ಯಕ್ಷ ಡಾ.ಶ್ರೀಧರ್, ಸ್ಮಾರ್ಟ್ ಕಿಯೋಸ್ಕ್ ಪರೀಕ್ಷಾ ಘಟಕದಲ್ಲಿ ನಾಗರಿಕರು ಹಾಗು ಅರೋಗ್ಯ ಸಿಬ್ಬಂದಿಗೆ ಪ್ರತ್ಯೇಕ ಅವರಣ, ಪಾರದರ್ಶಕ ಗಾಳಿಯಾಡದ ವಿಭಜಕದಿಂದ ಸೃಷ್ಟಿಸಿದ ಎರಡು ಅವರಣಗಳಿಗೆ ಪ್ರತ್ಯೇಕ ದ್ವಾರದ ವ್ಯವಸ್ಥೆಯಿದ್ದು ಅರೋಗ್ಯ ಕಾರ್ಯಕರ್ತರಿಗೆ ಮತ್ತು ಜನರ ಸಂವಹನಕ್ಕಾಗಿ ಮೈಕ್ ಸ್ಪೀಕರ್ ಇದೆ.ಅರೋಗ್ಯ ಕಾರ್ಯಕರ್ತರ ಸಂಪೂರ್ಣ ಸುರಕ್ಷತೆಯ ದೃಷ್ಟಿಯಿಂದ ಇದನ್ನು ಆಸ್ಪತ್ರೆಗೆ ದೇಣಿಗೆ ನೀಡಲಾಗಿದೆ ಎಂದರು.

ಮಾಜಿ ಜಿಲ್ಲಾ ಗವರ್ನರ್ ಸದಾನಂದ ಛಾತ್ರ, ನಿಯೋಜಿತ ಜಿಲ್ಲಾ ಗವರ್ನರ್ ಡಾ.ಎಚ್.ಜೆ. ಗೌರಿ, ರಾಜಾರಾಮ್ ಭಟ್, ಸಹಾಯಕ ಗವರ್ನರ್ ಡಾ. ಸೇಸಪ್ಪ ರೈ, ಕ್ಲಬ್ ಅಧ್ಯಕ್ಷ ಡಾ.ಶ್ರೀಧರ್,ಕಾರ್ಯದರ್ಶಿ ಜ್ಯೋತಿ ನಾಯಕ್, ಮಾಜಿ ಸಹಾಯಕ ಗವನರ್ರ ಕೆ.ಎಸ್.ಜೈ ವಿಠ್ಠಲ್, ಸದಸ್ಯರಾದ ಸಚ್ಚಿದಾನಂದ ನಾಯಕ್, ದೇವಪ್ಪ ನಾಯಕ್, ಡಾ.ರವೀಂದ್ರನಾಥ್ ನಾಯಕ್, ಆಸ್ಪತ್ರೆಯ ಅಧಿಕಾರಿ ಜಿಬ್ಬು ಥಾವುಸ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News