ದ್ವಿತೀಯ ಪಿಯುಸಿ: ಮೌಲ್ಯಮಾಪನ ಪ್ರಕ್ರಿಯೆ ಆರಂಭ

Update: 2020-05-28 15:20 GMT

ಮಂಗಳೂರು, ಮೇ 28: ಕೊರೋನ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ವೌಲ್ಯ ಮಾಪನವನ್ನು ಬಹಿಷ್ಕರಿಸುವುದಾಗಿ ಮಂಗಳವಾರವಷ್ಟೇ ಹೇಳಿಕೆ ನೀಡಿದ್ದ ದ.ಕ ಜಿಲ್ಲಾ ಪ.ಪೂ.ಕಾ ಪ್ರಾಚಾರ್ಯರ ಮತ್ತು ದ.ಕ ಜಿಲ್ಲಾ ಪ.ಪೂ.ಕಾ ಉಪನ್ಯಾಸಕರ ಸಂಘವು ಮೇ 28ರಿಂದ ವೌಲ್ಯಮಾಪನ ಮಾಡುವುದಾಗಿ ಬುಧವಾರ ತಿಳಿಸಿತ್ತು. ಅದರಂತೆ ಗುರುವಾರ ನಗರದ 6 ಕೇಂದ್ರಗಳಲ್ಲಿ ವೌಲ್ಯಮಾಪನ ಪ್ರಕ್ರಿಯೆ ಆರಂಭಗೊಂಡಿದೆ.

ನಗರದ ಅಲೋಶಿಯಸ್ ಕಾಲೇಜು, ಶಾರದಾ ಕಾಲೇಜು, ಮಧುಸೂದನ ಕುಶೆ ಕಾಲೇಜು, ಆಗ್ನೆಸ್ ಕಾಲೇಜು, ರಾಮಕೃಷ್ಣ ಕಾಲೇಜಿನಲ್ಲಿ 7 ವಿಷಯಗಳಿಗೆ ಸಂಬಂಧಿಸಿ ವಾರ್ಷಿಕ ಪರೀಕ್ಷೆಯ ವೌಲ್ಯಮಾಪನ ಪ್ರಕ್ರಿಯೆಯನ್ನು ಉಪಮುಖ್ಯ ವೌಲ್ಯ ಮಾಪಕರು ಆರಂಭಿಸಿದ್ದಾರೆ

ಕೊರೋನ ಹಿನ್ನೆಲೆಯಲ್ಲಿ ಆತಂಕದ ಮಧ್ಯೆ ವೌಲ್ಯಮಾಪನ ನಡೆಸಲು ಅಸಾಧ್ಯ ಎಂದು ಸಂಘದ ಮುಖಂಡರು ವೌಲ್ಯಮಾಪನ ಬಹಿಷ್ಕರಿಸಲು ಮುಂದಾಗಿದ್ದರು. ಈ ಮಧ್ಯೆ ದ.ಕ.ಜಿಲ್ಲಾಧಿಕಾರಿ ಸಂಘದ ಮುಖಂಡರ ಜೊತೆ ಮಾತುಕತೆ ನಡೆಸಿ ಬೇಡಿಕೆಯನ್ನು ಈಡೇರಿಸುವುದಾಗಿ ಭರವಸೆ ನೀಡಿದ್ದರು. ಅದರಂತೆ ಗುರುವಾರ ವೌಲ್ಯಮಾಪನ ಪ್ರಕ್ರಿಯೆ ಅರಂಭಗೊಂಡಿದ್ದು, ಶುಕ್ರವಾರ ವೌಲ್ಯಮಾಪನ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News