ಜೂ.4ರಿಂದ ಬಾಬರಿ ಮಸೀದಿ ಧ್ವಂಸ ಆರೋಪಿಗಳ ಹೇಳಿಕೆಗಳ ದಾಖಲಾತಿ

Update: 2020-05-28 16:16 GMT

ಲಕ್ನೋ, ಮೇ 28: ಬಾಬರಿ ಮಸೀದಿ ಧ್ವಂಸ ಪ್ರಕರಣದ ವಿಚಾರಣೆಯನ್ನು ನಡೆಸುತ್ತಿರುವ ವಿಶೇಷ ಸಿಬಿಐ ನ್ಯಾಯಾಲಯವು ಬಿಜೆಪಿ ನಾಯಕರಾದ ಎಲ್.ಕೆ.ಅಡ್ವಾಣಿ, ಮುರಳಿ ಮನೋಹರ ಜೋಶಿ ಮತ್ತು ಉಮಾ ಭಾರತಿ ಸೇರಿದಂತೆ ಆರೋಪಿಗಳ ಹೇಳಿಕೆಗಳನ್ನು ಜೂನ್ 4ರಿಂದ ದಾಖಲಿಸಿಕೊಳ್ಳಲಿದೆ.

ಜೂ.4ರಿಂದ ಆರೋಪಿಗಳನ್ನು ನ್ಯಾಯಾಲಯದಲ್ಲಿ ಹಾಜರುಪಡಿಸುವ ಪ್ರಕ್ರಿಯೆಯನ್ನು ಆರಂಭಿಸುವಂತೆ ವಿಶೇಷ ನ್ಯಾಯಾಧೀಶ ಎಸ್.ಕೆ. ಯಾದವ ಅವರು ಗುರುವಾರ ಪ್ರತಿವಾದಿ ಪರ ವಕೀಲರಿಗೆ ಸೂಚಿಸಿದರು.

ನ್ಯಾಯಾಲಯವು ಸಿಆರ್‌ಪಿಸಿಯ ಕಲಂ 313ರಡಿ ಆರೋಪಿಗಳ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಿದ್ದು,ಅವರಿಗೆ ತಮ್ಮ ಅಮಾಯಕತೆಯ ಬಗ್ಗೆ ಹೇಳಿಕೊಳ್ಳಲು ಅವಕಾಶ ದೊರೆಯಲಿದೆ.

ವಿಚಾರಣೆಯ ಈ ಹಂತದಲ್ಲಿ ಆರೋಪಿಗಳ ವಿರುದ್ಧ ಸಿಬಿಐ ಸಂಗ್ರಹಿಸಿರುವ ಸಾಕ್ಷಾಧಾರಗಳನ್ನು ಅವರಿಗೆ ವಿವರಿಸಲಾಗುವುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News