ಮೇ 30: ವಿದ್ಯುತ್ ಸಂಪರ್ಕ ಕಡಿತ

Update: 2020-05-28 16:29 GMT

ಮಂಗಳೂರು, ಮೇ 28: ಮುಲ್ಕಿ ಫೀಡರ್‌ನಲ್ಲಿ ನಿರ್ವಹಣಾ ಕಾಮಗಾರಿ ನಡೆಯಲಿರುವುದರಿಂದ ಮೇ 30ರಂದು ಬೆಳಗ್ಗೆ 10ರಿಂದ ಸಂಜೆ 4ರವರೆಗೆ ಕಾರ್ನಾಡು, ಗೇರುಕಟ್ಟೆ, ಕಿಲ್ಪಾಡಿ, ಕೆಂಪುಗುಡ್ಡೆ, ವಿಜಯ ಕಾಲೇಜು ರಸ್ತೆ, ಮಾನಂಪಾಡಿ, ಅಕ್ಕಸಾಲಿಗರ ಕೇರಿ, ಪಂಚಮಹಲ್ ರಸ್ತೆ ಹಾಗೂ ಸುತ್ತಮುತ್ತಲಿನ ಎಲ್ಲಾ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ಕಡಿತಗೊಳ್ಳಲಿದೆ.

ಕಳವಾರು ಫೀಡರ್‌ನಲ್ಲಿ ನಿರ್ವಹಣಾ ಕಾಮಗಾರಿ ನಡೆಯಲಿರುವುದರಿಂದ ಮೇ 30ರ ಬೆಳಗ್ಗೆ 10ರಿಂದ ಅಪರಾಹ್ನ 3:30ರವರೆಗೆ ಕಳವಾರು ಚರ್ಚ್, ಜೋಕಟ್ಟೆ, ಕೆಂಜಾರು, ಆಶ್ರಯ ಕಾಲೊನಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳ್ಳಲಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News