ಮನೆಯಿಂದ ಹೊರಗೆ ಹೋದ ವ್ಯಕ್ತಿ ನಾಪತ್ತೆ

Update: 2020-05-28 16:52 GMT

ಮಂಗಳೂರು, ಮೇ 28: ನಗರ ಹೊರವಲಯದ ವಾಮಂಜೂರಿನ ಜೋಸೆಫ್ ಡಿಸೋಜ (68) ಎಂಬವರು ಮೇ 24ರಂದು ತನ್ನ ಮನೆಯಿಂದ ಹೊರಗೆ ಹೋದವರು ವಾಪಸ್ ಮನೆಗೆ ಬಾರದೆ ಕಾಣೆಯಾದ ಬಗ್ಗೆ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.

ಇವರಿಗೆ ಮರೆವು ಖಾಯಿಲೆ ಇರುವುದರಿಂದ ನೆನಪಿನ ಶಕ್ತಿ ಇರುವುದಿಲ್ಲ. 168 ಅಡಿ ಎತ್ತರದ ಬಿಳಿ ಮೈ ಬಣ್ಣದ, ಸಾಧಾರಣ ಮೈಕಟ್ಟಿನ, ಉದ್ದ ಮುಖದ ಇವರು ಕನ್ನಡ, ತುಳು, ಹಿಂದಿ, ಕೊಂಕಣಿ ಮಾತನಾಡುತ್ತಾರರೆ. ಈ ವ್ಯಕ್ತಿಯ ಬಗ್ಗೆ ಮಾಹಿತಿ ದೊರಕಿದ್ದಲ್ಲಿ ದೂ.ಸಂ: 0824-2220535ನ್ನು ಸಂಪರ್ಕಿಸಲು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News