ರಕ್ತದಾನಿಗಳ ದಿನಾಚರಣೆ : ಗೌರವ ಪುರಸ್ಕಾರಕ್ಕೆ ಅರ್ಜಿ ಆಹ್ವಾನ

Update: 2020-05-28 16:53 GMT

ಮಂಗಳೂರು, ಮೇ 28: ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ವತಿಯಿಂದ ವಿಶ್ವ ರಕ್ತದಾನಿಗಳ ದಿನಾಚರಣೆಯ ಪ್ರಯುಕ್ತ ರಕ್ತದಾನಿಗಳನ್ನು ಗೌರವಿಸಲಾಗುತ್ತದೆ. 15 ಬಾರಿಗಿಂತ ಅಧಿಕ ರಕ್ತದಾನ ಮಾಡಿದ ವ್ಯಕ್ತಿಗಳು ದಾಖಲೆಗಳೊಂದಿಗೆ ಮಾಹಿತಿ ನೀಡಬಹುದು.

ಒಂದೇ ಕುಟುಂಬದ ಎಲ್ಲಾ ಅರ್ಹ ಸದಸ್ಯರು ರಕ್ತದಾನ ನೀಡಿದ್ದಲ್ಲಿ ಅವರೂ ಕೂಡಾ ಗೌರವಕ್ಕೆ ಪಾತ್ರರಾಗುತ್ತಾರೆ. ರಕ್ತದಾನ ಶಿಬಿರಗಳನ್ನು ಏರ್ಪಡಿಸಿದ ಸಂಘ ಸಂಸ್ಥೆಗಳನ್ನೂ ಪ್ರೋತ್ಸಾಹಿಸಿ ಗೌರವಿಸುವ ಕಾರ್ಯಕ್ರಮವಿದ್ದು, ಅವರು ಕೂಡಾ ದಾಖಲೆಗಳೊಂದಿಗೆ ಅರ್ಜಿ ನೀಡಬಹುದು. ದಾಖಲೆಗಳ ಪರಿಶೀಲನೆ ಮತ್ತು ಆಯ್ಕೆಯ ವಿಧಾನದಲ್ಲಿ ರೆಡ್‌ಕ್ರಾಸಿನ ತೀರ್ಮಾನವೇ ಅಂತಿಮವಾಗಿರುತ್ತದೆ.

ಆಸ್ತಕರು ಜೂ.4ರೊಳಗೆ ಗೌರವ ಕಾರ್ಯದರ್ಶಿ, ಭಾರತೀಯ ರೆಡ್‌ಕ್ರಾಸ್ ಸಂಸ್ಥೆ, ದ.ಕ. ಜಿಲ್ಲಾ ಶಾಖೆ, ರೆಡ್‌ಕ್ರಾಸ್ ಭವನ, ಜಿಲ್ಲಾಧಿಕಾರಿಯ ಕಚೇರಿ ಆವರಣ, ಮಂಗಳೂರು ಇಲ್ಲಿಗೆ ದಾಖಲೆಗಳನ್ನು ನೀಡಬಹುದು. ಮಾಹಿತಿಗೆ ದೂ.ಸಂ: 0824-2423755/ ಸಂಪರ್ಕಿಸಲು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News