ಭಾರತದೊಂದಿಗಿನ ಗಡಿ ವಿವಾದ: ಅಮೆರಿಕದ ಮಧ್ಯಸ್ಥಿಕೆ ಪ್ರಸ್ತಾಪ ತಿರಸ್ಕರಿಸಿದ ಚೀನಾ

Update: 2020-05-29 09:39 GMT

ಹೊಸದಿಲ್ಲಿ,ಮೇ 29: ಗಡಿ ವಿವಾದದ ಬಗ್ಗೆ ಉದ್ವಿಗ್ನತೆ ಹೆಚ್ಚುತ್ತಿರುವುದರಿಂದ ಭಾರತ ಹಾಗೂ ಚೀನಾದ ನಡುವೆ ಮಧ್ಯಸ್ಥಿಕೆ ವಹಿಸುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ  ಪ್ರಸ್ತಾಪವನ್ನು ಚೀನಾ ತಿರಸ್ಕರಿಸಿದೆ.

ಚೀನಾ ಹಾಗೂ ಭಾರತ ಸಂವಾದ ಹಾಗೂ ಸಮಾಲೋಚನೆ ಮೂಲಕ ಸಮಸ್ಯೆಗಳನ್ನು ಸೂಕ್ತವಾಗಿ ಪರಿಹರಿಸಿಕೊಳ್ಳಲು ಸಮರ್ಥವಾಗಿವೆ ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ.

ಬುಧವಾರ ಅತ್ಯಂತ ಅಚ್ಚರಿಯ ಹೆಜ್ಜೆಯೊಂದರಲ್ಲಿ ಡೊನಾಲ್ಡ್ ಟ್ರಂಪ್ ಭಾರತ ಹಾಗೂ ಚೀನಾದ ನಡುವಿನ ಗಡಿ ವಿವಾದದ ಕುರಿತು ಮಧ್ಯಸ್ಥಿಕೆ ವಹಿಸುವ ಆಫರ್‌ನ್ನು ಮುಂದಿಟ್ಟಿದ್ದರು.

ಮಿಲಿಟರಿ ನಿಲುವನ್ನು ಪರಿಹರಿಸಲು ಮೂರನೇ ವ್ಯಕ್ತಿಯಿಂದ ಹಸ್ತಕ್ಷೇಪವನ್ನು ಉಭಯ ದೇಶಗಳು ಬಯಸುವುದಿಲ್ಲ ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಝಾವೊ ಲಿಜಿಯಾನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News