ವಿವಾದ ಸೃಷ್ಟಿಸಿದ ಸುಪ್ರೀಂ ಕೋರ್ಟ್ ನಲ್ಲಿ ಕೇಂದ್ರದ ವಕೀಲರ ‘ರಣಹದ್ದು’ ಹೇಳಿಕೆ

Update: 2020-05-29 10:02 GMT

ಹೊಸದಿಲ್ಲಿ : ವಲಸೆ ಕಾರ್ಮಿಕರ ದುಸ್ಥಿತಿ ಕುರಿತ ಪ್ರಕರಣದ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಗುರುವಾರ ನಡೆಸುತ್ತಿದ್ದ ವೇಲೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ  ಅವರು, “ಸದಾ ಋಣಾತ್ಮಕತೆಯನ್ನೂ  ಹರಡುವ ವಿನಾಶದ ಪ್ರವಾದಿಗಳು” ಎಂದು ಹೇಳಿರುವುದು ಸಾಮಾಜಿಕ ಜಾಲತಾಣಗಳಲ್ಲಿ ತೀಕ್ಷ್ಣ ಪ್ರತಿಕ್ರಿಯೆಗೆ ಕಾರಣವಾಗಿದೆ.

“ಇದು ಸಂಪೂರ್ಣ  ಸರ್ವಾಧಿಕಾರ ಹಾಗೂ ಸಂವಿಧಾನದ ತ್ಯಾಗಕ್ಕೆ ಮುನ್ನುಡಿ'' ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೇವಾಲ ಖಾರವಾಗಿ  ಟ್ವೀಟ್ ಮಾಡಿದ್ದಾರೆ.

“ಸುಪ್ರೀಂ ಕೋರ್ಟಿನಲ್ಲಿ ಮೋದಿ ಸರಕಾರದ ಹೊಸ ವ್ಯಾಖ್ಯಾನಗಳು- 1.  `ಕೆಲ ಹೈಕೋರ್ಟ್‍ಗಳು ಪರ್ಯಾಯ ಸರಕಾರ ನಡೆಸುತ್ತಿವೆ.' 2.  ಸರಕಾರವನ್ನು ಟೀಕಿಸುವವರು ``ವಿನಾಶದ ಪ್ರವಾದಿಗಳು.'' 3. ಪತ್ರಕರ್ತರೊಬ್ಬರ ಕುರಿತಂತೆ ` ರಣಹದ್ದು ' ಎಂದಿದ್ದಾರೆ, ಇದು  ಸಂಪೂರ್ಣ ಸರ್ವಾಧಿಕಾರ ಮತ್ತು ಸಂವಿಧಾನದ ತ್ಯಾಗಕ್ಕೆ ಮುನ್ನುಡಿ !'' ಎಂದು ತಮ್ಮ ಟ್ವೀಟ್‍ನಲ್ಲಿ ಸುರ್ಜೇವಾಲ ಹೇಳಿದ್ದಾರೆ.

ಗುರುವಾರದ ವಿಚಾರಣೆ  ವೇಳೆ  ಸಾಲಿಸಿಟರ್ ಜನರಲ್ ತಮ್ಮ ವಾದ ಮಂಡಿಸುತ್ತಾ , ”ಈ ದೇಶದಲ್ಲಿ  ವಿನಾಶದ ಪ್ರವಾದಿಗಳು ಎಂದು ಕರೆಯಲ್ಪಡುವ ಕೆಲವೇ ಕೆಲವು ಜನರಿದ್ದಾರೆ, ಅವರು ಕೇವಲ ಋಣಾತ್ಮಕತೆ, ಋಣಾತ್ಮಕತೆ ಹಾಗೂ ಋಣಾತ್ಮಕತೆಯನ್ನು ಹರಡುತ್ತಿರುತ್ತಾರೆ. ಏನು ಮಾಡಲಾಗುತ್ತಿದೆ ಎಂಬುದನ್ನು ಒಪ್ಪಿಕೊಳ್ಳಲೂ ಈ ಸಾಮಾಜಿಕ ಜಾಲತಾಣಗಳಲ್ಲಿ ಬರೆಯುವವರು, ಸಂದರ್ಶನ ನೀಡುವವರಿಗೆ  ಆಗುತ್ತಿಲ್ಲ.  ಸರಕಾರ ಮಾಡುತ್ತಿರುವ ಕೆಲಸವನ್ನು ಒಪ್ಪಿಕೊಳ್ಳುವಷ್ಟು ದೇಶಭಕ್ತಿಯೂ ಅವರಿಗಿಲ್ಲ,'' ಎಂದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News