ಕಾಸರಗೋಡು: ಇಂದು 4 ಮಂದಿಗೆ ಕೊರೋನ ಪಾಸಿಟಿವ್

Update: 2020-05-29 13:57 GMT

ಕಾಸರಗೋಡು : ಜಿಲ್ಲೆಯಲ್ಲಿ ಶುಕ್ರವಾರ 4 ಮಂದಿಗೆ ಕೋವಿಡ್ ಸೋಂಕು ಖಚಿತಗೊಂಡಿದೆ. ಒಬ್ಬರು ರೋಗದಿಂದ ಗುಣಮುಖರಾಗಿದ್ದಾರೆ.

ಮಹಾರಾಷ್ಟ್ರ ದಿಂದ ಆಗಮಿಸಿದ್ದ ಪೈವಳಿಕೆ ನಿವಾಸಿ 42 ವರ್ಷದ ವ್ಯಕ್ತಿ, ಬದಿಯಡ್ಕ ನಿವಾಸಿ 63 ವರ್ಷದ ವ್ಯಕ್ತಿ, ಮಂಗಲ್ಪಾಡಿ ನಿವಾಸಿ 31 ವರ್ಷದ ವ್ಯಕ್ತಿ, ದುಬೈಯಿಂದ ಆಗಮಿಸಿದ 58 ವರ್ಷದ ಉದುಮಾ ನಿವಾಸಿ ಸೋಂಕು ಬಾಧಿತರು.

ಪೈವಳಿಕೆ ನಿವಾಸಿ 28 ವರ್ಷದ ವ್ಯಕ್ತಿ ಶುಕ್ರವಾರ ರೋಗದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಗೊಂಡಿದ್ದಾರೆ. ಇವರು ಉಕ್ಕಿನಡ್ಕ ಕಾಸರಗೋಡು ಮೆಡಿಕಲ್ ಕಾಲೇಜಿನಲ್ಲಿ ದಾಖಲಾಗಿದ್ದರು. ಜಿಲ್ಲೆಯಲ್ಲಿ ಒಟ್ಟು 3665 ಮಂದಿ ನಿಗಾದಲ್ಲಿದ್ದಾರೆ. ಮನೆಗಳಲ್ಲಿ 3081 ಮಂದಿ, ಆಸ್ಪತ್ರೆಗಳಲ್ಲಿ 584 ಮಂದಿ ನಿಗಾದಲ್ಲಿದ್ದಾರೆ. 238 ಮಂದಿ ತಮ್ಮ ನಿಗಾ ಅವಧಿ ಪೂರ್ಣಗೊಳಿಸಿದ್ದಾರೆ. ಶುಕ್ರವಾರ 485 ಮಂದಿ ನೂತನವಾಗಿ ಐಸೊಲೇಷನ್ ವಾರ್ಡಿಗೆ ದಾಖಲಿಸಲಾಗಿದೆ.

ಜಿಲ್ಲೆಯಲ್ಲಿ 6751 ಮಂದಿಯ ಸ್ಯಾಂಪಲ್ ತಪಾಸಣೆಗೆ ಕಳುಹಿಸಲಾಗಿದೆ. 5965 ಮಂದಿಯ ಫಲಿತಾಂಶ ನೆಗೆಟಿವ್ ಆಗಿದೆ. 347 ಮಂದಿಯ ಫಲಿತಾಂಶ ಇನ್ನೂ ಬರಬೇಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News