ಅನಿವಾಸಿ ಕನ್ನಡಿಗರ ಒಕ್ಕೂಟದಿಂದ ಗೂಡಿನಬಳಿ ಯುವಕರಿಗೆ ಅಭಿನಂದನೆ

Update: 2020-05-29 15:14 GMT

ಮಂಗಳೂರು : ನದಿಗೆ ಹಾರಿದ ಯುವಕನನ್ನು ರಕ್ಷಿಸಲು ಯತ್ನಿಸಿ ಸಾಹಸ ಮೆರೆದ ಗೂಡಿನಬಳಿ ಯುವಕರನ್ನು ಅನಿವಾಸಿ ಕನ್ನಡಿಗರ ಒಕ್ಕೂಟ (AKO) ಅಭಿನಂದಿಸಿದೆ.

ಇಂದು ಪ್ರಪಂಚವೇ ಕೊರೋನ ವೈರಸ್ ಗೆ ಹೆದರಿ ಜೀವಿಸುತ್ತಿರುವ ಈ ಸಮಯದಲ್ಲಿಯೂ ಮಾನವೀಯತೆ ಮೆರೆದ ಯುವಕರು, ಕಲ್ಲಡ್ಕದ ನಿಶಾಂತ್ ಎಂಬ ಯುವಕ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಲು ಪ್ರಯತ್ನಿಸಿದಾಗ ಗೂಡಿನಬಳಿಯ ಮುಹಮ್ಮದ್, ಸಮೀರ್, ಝಾಯಿದ್ , ಆರಿಫ್, ಮುಕ್ತಾರ್, ತೌಸೀಫ್ ರವರು ತಮ್ಮ ಜೀವನವನ್ನು ಪಣಕ್ಕಿಟ್ಟು ನದಿಗೆ ಹಾರಿ ಆ ಯುವಕನನ್ನು ನದಿಯಿಂದ ದಡಕ್ಕೆ ಸೇರಿಸಿ ಪ್ರಥಮ ಚಿಕಿತ್ಸಾ ವಿಧಾನಗಳನ್ನು ನೀಡುವುದರ ಮೂಲಕ ಪ್ರಾಣವನ್ನು ರಕ್ಷಿಸಲು ಪ್ರಯತ್ನಿಸಿದ್ದರು.

ಈ ಸಂದರ್ಭ ಹಫೀಝ್ ಅವರ ಪಾತ್ರವೂ ಮಹತ್ವ ಪೂರ್ಣವಾಗಿತ್ತು. ಮೊದಲು ನೇತ್ರಾವತಿ ವೀರರ ಮನೆ ಬಾಗಿಲಿಗೆ ತೆರಳಿ ವಿಷಯ ತಿಳಿಸಿ, ಆ ನಿರ್ದಿಷ್ಟ ಸ್ಥಳವನ್ನು ಸೂಚಿಸಿದ್ದು ಹಫೀಝ್ ಆಗಿದ್ದರು. ಈ ಹುಡುಗನಿಗೂ ತಮ್ಮೆಲ್ಲರ ಮೆಚ್ಚುಗೆ ಇರಲಿ. ಈ ನೇತ್ರಾವತಿ ವೀರರಿಗೆ ಅನಿವಾಸಿ ಕನ್ನಡಿಗರ ಒಕ್ಕೂಟ ಅಭಿನಂದನೆ ಸಲ್ಲಿಸುತ್ತದೆ.

ಮುಸಲ್ಮಾನರು ಈದುಲ್ ಫಿತ್ರ್ ಆಚರಿಸುವ ದಿನದಂದು ನಡೆದ ಘಟನೆಯು ಇಸ್ಲಾಮ್ ಜಗತ್ತಿಗೆ ಶಾಂತಿ, ಸೌಹಾರ್ದತೆ, ತ್ಯಾಗವನ್ನು ನೆನಪಿಸುವ ಮಾನವೀಯತೆಯ ಸಂದೇಶವನ್ನು ನೀಡಿದ್ದಾರೆ. ಇಡೀ ನಾಡು ಹೆಮ್ಮೆಪಡುವಂತಹ ಇವರ ಸೇವೆಯು ಶ್ಲಾಘನೀಯ ಎಂದು ಅನಿವಾಸಿ ಕನ್ನಡಿಗರ ಒಕ್ಕೂಟದ ಅಧ್ಯಕ್ಷ ಅಬ್ದುಲ್ ರಶೀದ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News