OpIndiaಗೆ ನೀಡುತ್ತಿದ್ದ ಜಾಹೀರಾತುಗಳನ್ನು ಹಿಂಪಡೆದ ಹಲವು ಕಂಪೆನಿಗಳು

Update: 2020-05-29 17:02 GMT

ದ್ವೇಷ ಹರಡುವ ಮಾಧ್ಯಮಗಳಿಗೆ ಯಾವುದೇ ಜಾಹೀರಾತು ನೀಡದಂತೆ ಜಾಹೀರಾತುದಾರರನ್ನು ಆಗ್ರಹಿಸುವ ಲಂಡನ್ ಮೂಲದ ‘ಸ್ಟಾಪ್ ಫಂಡಿಂಗ್ ಹೇಟ್’ ಬಲಪಂಥೀಯ ಸುದ್ದಿ ಜಾಲತಾಣ  OpIndiaಗೆ ಯಾವುದೇ ಜಾಹೀರಾತು ನೀಡದಂತೆ ಬೃಹತ್ ಕಂಪೆನಿಗಳನ್ನು ಆಗ್ರಹಿಸಿದೆ.

“ OpIndia ತಾರತಮ್ಯಕಾರಿ ಮತ್ತು ದ್ವೇಷದ ಸುದ್ದಿಗಳಿಂದಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಟೋರಿಯಸ್ ಆಗುತ್ತಿದೆ” ಎಂದು ‘ಸ್ಟಾಪ್ ಫಂಡಿಂಗ್ ಹೇಟ್’ನ ನಿರ್ದೇಶಕ ರಿಚರ್ಡ್ ವಿಲ್ಸನ್ ಹೇಳಿದ್ದಾರೆ ಎಂದು thequint.com ವರದಿ ಮಾಡಿದೆ.

“ಹಲವು ಜನರಿಗಿರುವ ಕಾಳಜಿಯ ಅರಿವು ನಮಗಿದೆ. ‘ನಾವು ಮುಸ್ಲಿಮರನ್ನು ಕೆಲಸಕ್ಕೆ ನೇಮಿಸಿಕೊಳ್ಳುವುದಿಲ್ಲ ಎನ್ನುವ ಹಕ್ಕು ಮುಸ್ಲಿಮೇತರರಿಗೆ ಇದೆ” ಎನ್ನುವ ವರದಿಯನ್ನು ಅದು ಪ್ರಕಟಿಸಿತ್ತು. ಕೆಲ ವರ್ಷಗಳಿಂದ ನಾವು ಹಲವು ತಲೆಬರಹಗಳನ್ನು ನೋಡುತ್ತಿದ್ದೇವೆ. ಆದರೆ ಧರ್ಮದ ಆಧಾರದಲ್ಲಿ ಇಂತಹ ತಾರತಮ್ಯಕಾರಿ ತಲೆಬರಹವನ್ನು ನೋಡಿರುವುದು ವಿರಳ” ಎಂದವರು ಹೇಳಿದರು.

‘ಸ್ಟಾಪ್ ಫಂಡಿಂಗ್ ಹೇಟ್’ ಅಭಿಯಾನದ ಪರಿಣಾಮ ಈಗಾಗಲೇ ನಾಲ್ಕು ಕಂಪೆನಿಗಳು ಒಪಿಇಂಡಿಯಾಗೆ ಜಾಹೀರಾತು ನೀಡುವುದರಿಂದ ಹಿಂದೆ ಸರಿದಿದೆ. ಮಕ್ಕಳ ಆಹಾರದ ‘ಕಿಡ್ಡಿಲಿಶಿಯಸ್’,  'ಲೈವ್ ವೋರ್ಕ್ಸ್' ಮತ್ತು 'ಮುಬಿ' ತಮ್ಮ ಜಾಹೀರಾತುಗಳನ್ನು ಹಿಂದೆಗೆಯುವುದನ್ನು ಖಚಿತಪಡಿಸಿದೆ.

'ಹ್ಯಾರಿ’ಸ್' ಎಂಬ ಕಂಪೆನಿ ಈ ಬಗ್ಗೆ ಪರಿಶೀಲನೆ ನಡೆಸುವುದಾಗಿ ತಿಳಿಸಿದ್ದು, ಅಮೆರಿಕದ ಆನ್ ಲೈನ್ ಜಾಹೀರಾತು ಕಂಪೆನಿ ರೂಬಿಕಾನ್ ಪ್ರಾಜೆಕ್ಟ್ ಜಾಹೀರಾತು ಹಿಂದೆಗೆದುಕೊಳ್ಳುವುದು ಖಚಿತ ಎಂದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News