ಕದ್ರಿ ಆಸರೆ ಫ್ರೆಂಡ್ಸ್ ನಿಂದ ಮನೆ ಹಸ್ತಾಂತರ

Update: 2020-05-29 17:44 GMT

ಮಂಗಳೂರು, ಮೇ 29 : ನಗರದ ಕದ್ರಿ ಕ್ರಿಕೆಟರ್ಸ್‌ ಕ್ಲಬ್ (ರಿ)ನ ಅಂಗ ಸಂಸ್ಥೆಯಾದ ಆಸರೆ ಫ್ರೆಂಡ್ಸ್ ಕದ್ರಿ ವತಿಯಿಂದ ನಗರದ ಮಂಕಿಸ್ಟಾಂಡ್ ಬಳಿಯ ಆರ್ಥಿಕವಾಗಿ ಹಿಂದುಳಿದ ಕುಟುಂಬವೊಂದಕ್ಕೆ ಸುಮಾರು 2.75 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾದ ‘ಆಸರೆ ನಿಲಯ’ ಮನೆಯ ಹಸ್ತಾಂತರ ಕಾರ್ಯಕ್ರಮವು ಶುಕ್ರವಾರ ನಡೆಯಿತು.

ಆಸರೆ ಫ್ರೆಂಡ್ಸ್ ಪರವಾಗಿ ಮೇಯರ್ ದಿವಾಕರ್ ಪಾಂಡೇಶ್ವರ್ ನೂತನ ಮನೆಯ ಚಾವಿಯನ್ನು ಮೀನಾಕ್ಷಿ ಬಂಗೇರ-ಎ.ಉಮೇಶ್ ದಂಪತಿಗೆ ಹಸ್ತಾಂತರಿಸಿದರು. ಶಾಸಕ ವೇದವ್ಯಾಸ ಕಾಮತ್, ಮನಪಾ ಸದಸ್ಯ ಪ್ರೇಮನಂದ ಶೆಟ್ಟಿ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ, ಬಿರುವೆರ್ ಕುಡ್ಲ ಅಧ್ಯಕ್ಷ ಉದಯ ಪೂಜಾರಿ ಬಳ್ಳಾಲ್ಬಾಗ್, ಉದ್ಯಮಿಗಳಾದ ಲಕ್ಷ್ಮೂಶ ಭಂಡಾರಿ, ರತ್ನಾಕರ್ ಜೈನ್, ಚಿತ್ರ ನಿರ್ಮಾಪಕ ಕಿಶೋರ್ ಡಿ.ಶೆಟ್ಟಿ, ಅಶೋಕ್ ಕುಮಾರ್ ಡಿ.ಕೆ, ದಿನೇಶ್ ದೇವಾಡಿಗ, ಗೋಕುಲ್ ಕದ್ರಿ, ಅಮೃತ ವಿ.ಕದ್ರಿ ಪಾಲ್ಗೊಂಡಿದ್ದರು.ಕದ್ರಿ ಕ್ರಿಕೆಟರಸ್ ಕ್ಲಬ್‌ನ ಅಧ್ಯಕ್ಷ ದೀಪಕ್ ಸಾಲಿಯಾನ್, ಉಪಾಧ್ಯಕ್ಷ ಗೌರವ ಕದ್ರಿ, ಕಾರ್ಯದರ್ಶಿ ಹರೀಶ್ ದೇವಾಡಿಗ, ಜೊತೆ ಕಾರ್ಯದರ್ಶಿ ದೀಪಕ್ ಶೆಟ್ಟಿ, ನಿಕಟಪೂರ್ವ ಅಧ್ಯಕ್ಷ ಧನರಾಜ್ ಎನ್.ಡಿ, ಆಸರೆ ಫ್ರೆಂಡ್ಸ್ ಅಧ್ಯಕ್ಷ ದಿನೇಶ್ ಕದ್ರಿ, ಕಾರ್ಯದರ್ಶಿ ಮಂಜುನಾಥ್ ದೇವಾಡಿಗ ಉಪಸ್ಥಿತರಿದ್ದರು.

ಕದ್ರಿ ಕ್ರಿಕೆಟರ್ಸ್‌ ಕ್ಲಬ್ನ ಗೌರವಾಧ್ಯಕ್ಷ ಮೋಹನ್ ಕೊಪ್ಪಳ ಕದ್ರಿ ಸ್ವಾಗತಿಸಿದರು. ವಿ.ಜೆ. ಮಧುರಾಜ್ ಗುರುಪುರ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News