ಕಲ್ಲಡ್ಕ: ತುರ್ತು ರಕ್ತದಾನ ಶಿಬಿರ

Update: 2020-05-29 17:47 GMT

ಬಂಟ್ವಾಳ, ಮೇ 29: ಝಮಾನ್ ಬಾಯ್ಸ್ ಕಲ್ಲಡ್ಕ ಮತ್ತು ಬ್ಲಡ್ ಡೋನರ್ಸ್ ಮಂಗಳೂರು ಜಂಟಿ ಸಹಭಾಗಿತ್ವದಲ್ಲಿ ಇಂಡಿಯನ್ ರೆಡ್ ಕ್ರಾಸ್ ಬ್ಲಡ್ ಬ್ಯಾಂಕ್ ಮಂಗಳೂರು   ಇದರ ಸಹಕಾರದೊಂದಿಗೆ ಮರ್ಹೂಂ ಯೂಸುಫ್ ಹಾಜಿ ಹಜಾಜ್ ಕಲ್ಲಡ್ಕ ಹಾಗೂ ಮರ್ಹೂಂ ಅಝ್ಮಾನ್ (ಅಪ್ಪು) ಸ್ಮರಣಾರ್ಥವಾಗಿ ಬ್ಲಡ್ ಡೋನರ್ಸ್ ಮಂಗಳೂರು ಇದರ 238ನೇ ತುರ್ತು ರಕ್ತದಾನ ಶಿಬಿರ ಶುಕ್ರವಾರ ಕಲ್ಲಡ್ಕ ಕೆ.ಸಿ ರೋಡ್ ನಲ್ಲಿರುವ ಝಮಾನ್ ಬಾಯ್ಸ್ ಕಚೇರಿಯಲ್ಲಿ ಜರುಗಿತು.

ಝಮಾನ್ ಬಾಯ್ಸ್ ಕಲ್ಲಡ್ಕ ಇದರ ಉಪಾಧ್ಯಕ್ಷ ಆರಿಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪಿಎಫ್ಐ ಕಲ್ಲಡ್ಕ ಡಿವಿಜನ್ ಅಧ್ಯಕ್ಷ ಸಿದ್ದೀಕ್ ಪನಮಾ ಕಾರ್ಯಕ್ರಮ ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ಉದ್ಯಮಿ ಸಿದ್ದೀಕ್ ಜಿಎಸ್, ಪಿಎಫ್ಐ ಗೋಲ್ತಮಜಲು ಅಧ್ಯಕ್ಷ ಸಿದ್ದೀಕ್ ಮದಕ, ಮಂಗಳೂರು ಇಂಡಿಯನ್ ರೆಡ್ ಕ್ರಾಸ್ ಉಸ್ತುವಾರಿ ಪ್ರವೀಣ್, ಬ್ಲಡ್ ಡೋನರ್ಸ್ ಮಂಗಳೂರು ಅಧ್ಯಕ್ಷ ಸಿದ್ದೀಕ್ ಮಂಜೇಶ್ವರ, ಝಮಾನ್ ಬಾಯ್ಸ್ ಕಲ್ಲಡ್ಕ ಕೋಶಾಧಿಕಾರಿ ನೌಫಲ್, ಮಾಜಿ ಅಧ್ಯಕ್ಷ ಫಾರೂಕ್ ಕಲ್ಲಡ್ಕ, ಕರೀಂ ಕಲ್ಲಡ್ಕ, ಸಜ್ಜಾದ್ ಉದ್ಯಮಿ, ಫಾರೂಕ್ ಬಿಗ್ ಗ್ಯಾರೇಜ್, ಕಾರ್ಯನಿರ್ವಾಹಕರು ಬ್ಲಡ್ ಡೋನರ್ಸ್ ಮಂಗಳೂರು (ರಿ) ಉಪಸ್ಥಿತರಿದ್ದರು.

ಜಿಲ್ಲೆಯ ಹಲವು ಆಸ್ಪತ್ರೆಗಳಿಂದ ನಿರಂತರವಾಗಿ ಕ್ಯಾನ್ಸರ್ ಬಾಧಿತ ಮಕ್ಕಳಿಗೆ, ತಲಸ್ಸೇಮಿಯಾ ರೋಗಿಗಳಿಗೆ , ಅಪಘಾತದ ತುರ್ತು ಚಿಕಿತ್ಸೆಗಳಿಗೆ ಹಾಗೂ ಗರ್ಭಿಣಿಯರಿಗೆ ನಿರಂತರವಾಗಿ ರಕ್ತದ ಬೇಡಿಕೆ ಬರುತ್ತಿದ್ದು ರಕ್ತ ನಿಧಿಗಳಲ್ಲಿ ರಕ್ತದ ಅಭಾವ ಇದೆ. ಇದನ್ನು ಮನಗಂಡು ಕೊರೋನ ಹಿನ್ನೆಲೆಯಲ್ಲಿ ಸಕಲ ಸುರಕ್ಷತೆಯಿಂದ ತುರ್ತು ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಯಿತು.

ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ನಡೆಸಿದ ಕಲ್ಲಡ್ಕನಿಶಾಂತ್ ಎಂಬ ಯುವಕನ ಪ್ರಾಣ ರಕ್ಷಿಸಲು ಕೊನೆವರೆಗೆ ಪ್ರಯತ್ನಿಸಿದ ಮುಹಮ್ಮದ್, ಝಾಯಿದ್ ತೌಸೀಫ್, ಶಮೀರ್, ಆರಿಫ್, ಮುಖ್ತಾರ್, ಮತ್ತು ಅಫ್ರಿದ್ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಅಲ್ಲದೆ ಬ್ಲಡ್ ಡೋನರ್ಸ್ ಮಂಗಳೂರು ಇದರ ವತಿಯಿಂದ ಜರುಗಿದ ಕ್ವಿಜ್ ಸ್ಪರ್ಧೆಯ ವಿಜೇತರಿಗೆ ಬಹುಮಾನವನ್ನು ಈ ವೇಳೆ ವಿತರಿಸಲಾಯಿತು. 

ಕಾರ್ಯಕ್ರಮಕ್ಕೆ ಹನೀಫ್ ಹಾಜೀ ಗೋಲ್ತಮಜಲು ಹಜಾಜ್, ಇಂತಿಯಾಜ್ ಗೋಳ್ತಮಜಲು ಭೇಟಿ ನೀಡಿ ಶುಭ ಹಾರೈಸಿದರು. ಬ್ಲಡ್ ಡೋನರ್ಸ್ ಮಂಗಳೂರು ಇದರ ಕಾರ್ಯನಿರ್ವಾಹಕರಾದ, ಇರ್ಫಾನ್ ಕಲ್ಲಡ್ಕ, ಜಮಾಲ್ ಕಲ್ಲಡ್ಕ, ಫಾರೂಕ್ ಆತೂರು, ಶಾಹುಲ್ ಹಮೀದ್ ಕಾಶಿಪಟ್ನ,  ಇಮ್ರಾನ್  ಉಪ್ಪಿನಂಗಡಿ, ಹಫೀಝ್  ಒಮಾನ್, ದಾವೂದ್ ಬಜಾಲ್,  ಲತೀಫ್ ಎಚ್ ಎಸ್ ಎ ಉಪ್ಪಿನಂಗಡಿ, ನಿಝಾಮುದ್ದೀನ್ ಉಪ್ಪಿನಂಗಡಿ, ಝಮಾನ್ ಬಾಯ್ಸ್ ಕಲ್ಲಡ್ಕ ಇದರ ಶಹೀದ್ ಕೆ.ಕೆ, ಅಬ್ದುರ್ರಹ್ಮಾನ್ ಕಲ್ಲಡ್ಕ, ಜಮಾಲ್ ನಾಚಿ ಕಲ್ಲಡ್ಕ, ನಝ್ಮೀರ್ ಕಲ್ಲಡ್ಕ, ಇಕ್ಬಾಲ್ ಕಲ್ಲಡ್ಕ, ತೌಫಿಕ್ ಕಲ್ಲಡ್ಕ, ಆಬಿದ್ ಕಲ್ಲಡ್ಕ, ಹೈದರ್ ಕಲ್ಲಡ್ಕ ಸಹಕರಿಸಿದರು.

ಕಾರ್ಯಕ್ರಮದಲ್ಲಿ ನೂರಕ್ಕೂ ಹೆಚ್ಚು ಯುವಕರುರಕ್ತದಾನ ಮಾಡಿದರು. ಬ್ಲಡ್ ಡೋನರ್ಸ್ ಮಂಗಳೂರು ಇದರ ಮಾಧ್ಯಮ ಸಲಹೆಗಾರ ಅಬ್ದುಲ್ ರಝಾಕ್ ಸಾಲ್ಮರ ಕಾರ್ಯಕ್ರಮದ ನಿರೂಪಿಸಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News