ಭಟ್ಕಳ ಮೀನುಗಾರರೊಂದಿಗೆ ಸರ್ಕಾರದ ತಾರತಮ್ಯ-ವಸಂತ್ ಖಾರ್ವಿ ಆರೋಪ

Update: 2020-05-29 17:55 GMT

ಭಟ್ಕಳ : ರಾಜ್ಯ ಸರ್ಕಾರ ಭಟ್ಕಳದ ಮೀನುಗಾರರೊಂದಿಗೆ ತಾರತಮ್ಯದ ನೀತಿಯನ್ನು ಅನುಸರಿಸುತ್ತಿದೆ ಎಂದು ಭಟ್ಕಳ ತಾಲೂಕಿನ ಮೀನುಗಾರರ ಮುಖಂಡ ವಸಂತ್ ಖಾರ್ವಿ  ಆರೋಪಿಸಿದರು.

ಶುಕ್ರವಾರ ಬಂದರ್ ನಲ್ಲಿ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಅವರು ಮಾತನಾಡಿದರು. ಸರಕಾರವು ಮೀನುಗಾರರಿಗೆ ಕೋಟಿಗಟ್ಟಲೆ ಅನುದಾನ ವನ್ನು ಬಿಡುಗಡೆ ಮಾಡಿದೆ ಆದರೆ ನಮ್ಮ ಭಟ್ಕಳ ತಾಲೂಕಿನ ಮೀನುಗಾರರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ ಇಂತಹ ತಾರತಮ್ಯವನ್ನು ಸರಕಾರ ಈ ಕೂಡಲೆ ನಿಲ್ಲಿಸಿ ನಮ್ಮ ತಾಲೂಕಿನ ಮೀನುಗಾರರಿಗೆ ನ್ಯಾಯವನ್ನು ಒದಗಿಸಿಕೊಡಬೇಕೆಂದು ಆಗ್ರಹಿಸಿದರು.  

ಕಳೆದ ಎರಡು ತಿಂಗಳುಗಳಿಂದ ಮಿನುಗಾರರು ಯಾವುದೆ ಕೆಲಸವಿಲ್ಲದೆ ದುಸ್ತರ ಬದುಕು ನಡೆಸುತ್ತಿದ್ದು ಒಂದು ಹೊತ್ತಿನ ಊಟಕ್ಕೂ ಪರದಾಡ ಬೇಕಾದಂತರ ಸ್ಥಿತಿ ನಿರ್ಮಾಣವಾಗಿದೆ. ಸರಕಾರ 60 ಕೋಟಿ ರೂ ಗಳನ್ನು ಬೀಡುಗಡೆ ಮಾಡಿದ್ದೆವೆ ಎಂದು ಹೇಳುತ್ತಿದೆ ಆದರೆ ನಮ್ಮ ಪಾಲಿಗೆ ಸರ್ಕಾರಿಂದ 60 ಪೈಸೆಯು ಸಿಕ್ಕಿರುವುದಿಲ್ಲ.  ಹಾಗಾದರೆ ಸರಕಾರದಿಂದ ಬಂದ ಹಣ ಎಲ್ಲಿಗೆ ಹೋಯಿತು ಪ್ರಧಾನಮಂತ್ರಿಯವರ 20 ಲಕ್ಷ ಕೋಟಿ ಪ್ಯಾಕೆಜ್ ನಮ್ಮನ್ನು ಯಾಕೆ ತಲುಪುತ್ತಿಲ್ಲಾ ನಾವು ಮೀನುಗಾರಿಕೆಯನ್ನೆ ನಂಬಿ ಜೀವಿಸುತ್ತಿದ್ದೆವೆ ಆದರೆ ನಮಗೆ ಯಾರು ಸಹಾಯವನ್ನು ಮಾಡುತ್ತಿಲ್ಲಾ ಸರಕಾರ ಎಲ್ಲಾ ಜನಾಂಗದವರಿಗೂ ಅನುಧಾನವನ್ನು ಕೊಡುತ್ತಿದ್ದೆ ಇದಕ್ಕೆ ನಮ್ಮ ವಿರೋಧವಿಲ್ಲ. ಆದರೆ ನಮ್ಮ ತಾಲೂಕಿನ ಮೀನುಗಾರರಿಗೆ ಯಾವುದೆ ಅನುದಾನ ತಲುಪುತ್ತಿಲ್ಲಾ ನಮ್ಮನ್ನು ಯಾಕೆ ಈ ರೀತಿಯಾಗಿ ಶೊಷಣೆ ಮಾಡಲಾಗುತ್ತಿದೆ ನಾವು ಕಡಲ ತಡಿಯಲ್ಲಿ ಸೈನಿಕರಂತೆ ಕೇಲಸ ಮಾಡುವುದರ ಮೂಲಕ ಕೊಷ್ಟಲ್ ಗಾರ್ಡಗಳ ಅರ್ಧದಷ್ಟು ಕೆಲಸವನ್ನು ಕಡೆಮೆ ಮಾಡಿರುತ್ತೆವೆ ಇಂತಹ ನಮ್ಮನ್ನು ತಾರತಮ್ಯದಿಂದ ನೋಡಲಾಗುತ್ತಿದೆ ಮಾಜಿ ಶಾಸಕ ಮಂಕಾಳ ವೈದ್ಯರು ಶಾಸಕರಾಗಿರುವ ಸಂದರ್ಭದಲ್ಲಿ ನಮಗೆ ಅನೇಕ ನೆರವು ದೊರೆತಿದ್ದವು ಆದರೆ ಈಗ ನಮಗೆ ಯಾವುದೆ ಸಹಾಯ ಹಸ್ತ ದೊರೆಯುತ್ತಿಲ್ಲಾ ಇನ್ನು ಸರಕಾರ ನಮಗೆ ಲೈಟ್ ಪೀಶಿಂಗ್ ಮಾಡಬಾರದು ಎಂದು ಹೇಳುತ್ತದೆ ಆದರೆ ಗೋವಾ ಮೀನುಗಾರರು ಇಲ್ಲಿ ಬಂದು ಲೈಟ್ಪಿಶಿಂಗ್ ಮಾಡುವುದರ ಮೂಲಕ ಮೀನಿನ ಸಂತತಿಗಳನ್ನೆ ನಾಶಮಾಡಿದ್ದಾರೆ ಅಲ್ಲದೆ ಕೆಲವು ಪಟ್ಟ ಭದ್ರ ಹಿತಾಸಕ್ತಿಗಳ ಲಾಭಿಗೆ ಮಣಿದು ಸರಕಾರ ನಿರಂತರ ಮಿನುಗಾರಿಕೆಗೆ ಅವಕಾಶ ಮಾಡಿಕೊಟ್ಟಿದೆ ಇದರಿಂದ ಮಿನುಗಳ ಸಂತತಿಗಳು ನಾಶವಾಗುತ್ತಿದೆ ಇದಕ್ಕೆ ಸರಕಾರ ಕಡಿವಾಣ ಹಾಕಬೇಕಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಶ್ರೀಧರ ಮೊಗೇರ್, ಈಶ್ವರ ಮೊಗೇರ್ ನಾರಾಯಣ ಮೊಗೇರ್ ತಿಮ್ಮಪ್ಪ ಖಾರ್ವಿ ಶ್ರೀನಿವಾಸ್ ಖಾರ್ವಿ  ಜಟ್ಟಪ್ಪ ಮೊಗೇರ್ ಮುಂತಾದವರು ಉಪಸ್ಥಿತರಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News