ಬ್ಲಡ್ ಡೋನರ್ಸ್ ನಿಂದ ಕಲ್ಲಡ್ಕದಲ್ಲಿ ತುರ್ತು ರಕ್ತದಾನ ಶಿಬಿರ: 115 ಯುನಿಟ್ ರಕ್ತ ಸಂಗ್ರಹ

Update: 2020-05-30 06:22 GMT

ಕಲ್ಲಡ್ಕ: ಝಮಾನ್ ಬಾಯ್ಸ್ (ರಿ) ಕಲ್ಲಡ್ಕ ಹಾಗೂ ಬ್ಲಡ್ ಡೋನರ್ಸ್ ಮಂಗಳೂರು(ರಿ) ಜಂಟಿ ಸಹಭಾಗಿತ್ವದಲ್ಲಿ ಇಂಡಿಯನ್ ರೆಡ್ ಕ್ರಾಸ್ ಬ್ಲಡ್ ಬ್ಯಾಂಕ್ ಮಂಗಳೂರು   ಇದರ ಸಹಕಾರದೊಂದಿಗೆ ಮರ್ಹೂಂ ಯೂಸುಫ್ ಹಾಜಿ ಹಜಾಜ್ ಕಲ್ಲಡ್ಕ ಹಾಗೂ ಮರ್ಹೂಂ ಅಝ್ಮಾನ್ (ಅಪ್ಪು) ಸ್ಮರಣಾರ್ಥವಾಗಿ ಬ್ಲಡ್ ಡೋನರ್ಸ್ ಮಂಗಳೂರು ಇದರ 238ನೇ ರಕ್ತದಾನ ಶಿಬಿರ ದಿನಾಂಕ  ಮೇ 29 ರಂದು ಕೆ.ಸಿ ರೋಡ್ ಸೂರಜ್ ಕಾಂಪ್ಲೆಕ್ಸ್ ನಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಝಮಾನ್ ಬಾಯ್ಸ್ ಕಲ್ಲಡ್ಕ (ರಿ) ಉಪಾಧ್ಯಕ್ಷ ಆರಿಸ್ ಕಲ್ಲಡ್ಕ ವಹಿಸಿದ್ದರು. ಉದ್ಘಾಟನೆಯನ್ನು ಪಿಎಫ್ಐ ಕಲ್ಲಡ್ಕ ಡಿವಿಜನ್ ಅಧ್ಯಕ್ಷ ಸಿದ್ದಿಕ್ ಪನಾಮ ನೆರವೇರಿಸಿದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಉದ್ಯಮಿ ಸಿದ್ದಿಕ್ ಜಿಎಸ್, ಪಿಎಫೈ ಗೋಳ್ತಮಜಲು ಅಧ್ಯಕ್ಷ ಸಿದ್ದಿಕ್ ಮದಕ, ಇಂಡಿಯನ್ ರೆಡ್ ಕ್ರಾಸ್ ಇದರ ಮಂಗಳೂರು ಉಸ್ತುವಾರಿ ಪ್ರವೀಣ್, ಬ್ಲಡ್ ಡೋನರ್ಸ್ ಮಂಗಳೂರು ಅಧ್ಯಕ್ಷ ಸಿದ್ದೀಕ್ ಮಂಜೇಶ್ವರ, ಝಮಾನ್‌ ಬಾಯ್ಸ್ ಕಲ್ಲಡ್ಕ ಕೋಶಾಧಿಕಾರಿ ನೌಫಲ್, ಫಾರೂಕ್ ಕಲ್ಲಡ್ಕ, ಕರೀಂ ಕಲ್ಲಡ್ಕ, ಉದ್ಯಮಿ ಸಜ್ಜಾದ್, ಫಾರೂಕ್ ಬಿಗ್ ಗ್ಯಾರೇಜ್ ಉಪಸ್ಥಿತರಿದ್ದರು.

ಕೋವಿಡ್ ವೇಳೆಯಲ್ಲಿ ಜಿಲ್ಲೆಯ ಹಲವು ಆಸ್ಪತ್ರೆಗಳಿಂದ ನಿರಂತರವಾಗಿ ಕ್ಯಾನ್ಸರ್ ಬಾಧಿತ ಮಕ್ಕಳಿಗೆ, ತಲಸ್ಸೇಮಿಯಾ ರೋಗಿಗಳಿಗೆ, ಅಪಘಾತದ ಗಾಯಾಳುಗಳ ತುರ್ತು ಚಿಕಿತ್ಸೆಗಳಿಗೆ ಹಾಗೂ ಗರ್ಭಿಣಿಯರಿಗೆ ನಿರಂತರವಾಗಿ ರಕ್ತದ ಬೇಡಿಕೆ ಬರುತ್ತಿದ್ದು ರಕ್ತ ನಿಧಿಗಳಲ್ಲಿ ರಕ್ತದ ಅಭಾವ ಬಹಳಷ್ಟಿತ್ತು. ಇದನ್ನು ಮನಗಂಡ ಬ್ಲಡ್ ಡೋನರ್ಸ್ ರಕ್ತದಾನ ಶಿಬಿರ ಏರ್ಪಡಿಸಿತ್ತು.

ಕಾರ್ಯಕ್ರಮದಲ್ಲಿ ಗೂಡಿನಬಳಿಯ ಸಾಹಸಿ ಯುವಕರಾದ ಮುಹಮ್ಮದ್, ಝಾಯಿದ್ ತೌಸೀಫ್, ಶಮೀರ್, ಆರಿಫ್, ಮುಖ್ತಾರ್, ಮತ್ತು ಅಫ್ರಿದ್ ಗೂಡಿನಬಳಿ ಅವರನ್ನು ಸನ್ಮಾನಿಸಲಾಯಿತು. ಅಲ್ಲದೇ, ಬ್ಲಡ್ ಡೋನರ್ಸ್ ಮಂಗಳೂರು (ರಿ) ಇದರ ವತಿಯಿಂದ ಜರುಗಿದ ಕ್ವಿಝ್ ಸ್ಪರ್ಧೆಯ ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು.

ಕಾರ್ಯಕ್ರಮಕ್ಕೆ ಹನೀಫ್ ಹಾಜೀ ಗೋಲ್ತಮಜಲು ಹಜಾಜ್, ಇಂತಿಯಾಜ್ ಗೋಳ್ತಮಜಲು ಭೇಟಿ ನೀಡಿ ಶುಭ ಹಾರೈಸಿದರು.

ಬ್ಲಡ್ ಡೋನರ್ಸ್ ಮಂಗಳೂರು (ರಿ) ಇದರ ಕಾರ್ಯನಿರ್ವಾಹಕರಾದ, ಇರ್ಫಾನ್ ಕಲ್ಲಡ್ಕ, ಜಮಾಲ್ ಕಲ್ಲಡ್ಕ, ಫಾರೂಕ್ ಆತೂರು, ಶಾಹುಲ್ ಹಮೀದ್ ಕಾಶಿಪಟ್ನ, ಇಮ್ರಾನ್  ಉಪ್ಪಿನಂಗಡಿ, ಹಫೀಝ್  ಒಮಾನ್, ದಾವೂದ್ ಬಜಾಲ್,  ಲತೀಫ್ ಎಚ್.ಎಸ್.ಎ ಉಪ್ಪಿನಂಗಡಿ, ನಿಝಾಮುದ್ದೀನ್ ಉಪ್ಪಿನಂಗಡಿ, ಝಮಾನ್ ಬಾಯ್ಸ್ ಕಲ್ಲಡ್ಕ (ರಿ) ಇದರ ಶಹೀದ್ ಕೆ.ಕೆ, ಅಬ್ದುರ್ರಹ್ಮಾನ್ ಕಲ್ಲಡ್ಕ, ಜಮಾಲ್ ನಾಚಿ ಕಲ್ಲಡ್ಕ, ನಝ್ಮೀರ್ ಕಲ್ಲಡ್ಕ, ಇಕ್ಬಾಲ್ ಕಲ್ಲಡ್ಕ, ತೌಫಿಕ್ ಕಲ್ಲಡ್ಕ, ಆಬಿದ್ ಕಲ್ಲಡ್ಕ, ಹೈದರ್ ಕಲ್ಲಡ್ಕ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ನೂರಕ್ಕೂ ಹೆಚ್ಚು ಸ್ಥಳೀಯ ಯುವಕರು ರಕ್ತದಾನ ಮಾಡಿದರು.

ಬ್ಲಡ್ ಡೋನರ್ಸ್ ಮಂಗಳೂರು (ರಿ) ಇದರ ಮಾಧ್ಯಮ ಸಲಹೆಗಾರ ಅಬ್ದುಲ್ ರಝಾಕ್ ಸಾಲ್ಮಾರ ಕಾರ್ಯಕ್ರಮದ ನಿರೂಪಿಸಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News