ಆರೋಗ್ಯ ಸೇತು ಆ್ಯಪ್ ಬಗ್ ಕಂಡು ಹಿಡಿಯುವವರಿಗೆ 4 ಲಕ್ಷ ರೂ. ಬಹುಮಾನ ಘೋಷಿಸಿದ ಸರಕಾರ

Update: 2020-05-30 08:18 GMT

ಹೊಸದಿಲ್ಲಿ: ಭಾರತ ಸರಕಾರ ತನ್ನ ಕೋವಿಡ್-19 ಕಾಂಟಾಕ್ಟ್ ಟ್ರ್ಯಾಕಿಂಗ್ ಆ್ಯಪ್  ಆರೋಗ್ಯ ಸೇತು ಅನ್ನು ಓಪನ್ ಸೋರ್ಸ್ ಮಾಡಿದೆ. ಜತೆಗೆ ಒಂದು ಬಗ್ ಬೌಂಟಿ ಪ್ರೋಗ್ರಾಂ ಅನ್ನೂ ಸರಕಾರ ಘೋಷಿಸಿದೆ. ಇದರನ್ವಯ ಈ ಆ್ಯಪ್‍ನಲ್ಲಿರುವ ಲೋಪದೋಷಗಳನ್ನು ಕಂಡು ಹಿಡಿದವರಿಗೆ ರೂ. 4 ಲಕ್ಷ ತನಕದ ನಗದು ಬಹುಮಾನ ದೊರೆಯಲಿದೆ.

ಈ ಕುರಿತಂತೆ ಜ್ಞಾನವಿರುವ ಯಾರೇ ಆದರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಬಹುದಾಗಿದೆ, ಆಸಕ್ತರು bugbounty@nic.in  ಈ ವಿಳಾಸಕ್ಕೆ ಇಮೇಲ್ ಮಾಡಿ ಸಬ್ಜೆಕ್ಟ್ ಜಾಗದಲ್ಲಿ 'ಸೆಕ್ಯುರಿಟಿ ವಲ್ನರೆಬಿಲಿಟಿ ರಿಪೋರ್ಟ್' ಎಂದು ಬರೆಯಬೇಕಿದೆ. ಆರೋಗ್ಯ ಸೇತು ಆ್ಯಪ್ ಇದರ ಮೂಲ ಕೋಡ್‍ಗೆ ಸುಧಾರಣೆ ತರುವ ನಿಟ್ಟಿನಲ್ಲಿ ಸಲಹೆ ಕೂಡ ನೀಡಬಹುದಾಗಿದ್ದು  ಈ ನಿಟ್ಟಿನಲ್ಲಿ ಇಮೇಲ್ ಕಳುಹಿಸುವಾಗ ಸಬ್ಜೆಕ್ಟ್ ಲೈನ್‍ನಲ್ಲಿ 'ಕೋಡ್ ಇಂಪ್ರೂವ್ಮೆಂಟ್' ಎಂದು ಬರೆಯಬೇಕಿದೆ.

ಅನುಮೋದಿತ ವರದಿಗಳನ್ನು ನೀಡಿದವರಿಗೆ ಅದರ ಬಗ್ಗೆ  ಮಾಹಿತಿ ನೀಡಲಾಗುವುದು. ಆದರೆ ತಾವು ಆ್ಯಪ್‍ನಲ್ಲಿನ ಲೋಪದೋಷಗಳ ಕುರಿತಾದ ಮಾಹಿತಿಯ ಇಮೇಲ್‍ನಲ್ಲಿನ ವಿವರಗಳನ್ನು ಆ ಲೋಪವನ್ನು ಪರಿಹರಿಸುವ ತನಕ ಇತರರಿಗೆ ಯಾರೂ ತಿಳಿಸುವ ಹಾಗಿಲ್ಲ. ಅಂತೆಯೇ ಈ ಬಗ್ ಬೌಂಟಿ ಪ್ರೋಗ್ರಾಂನಲ್ಲಿ ಆರೋಗ್ಯ ಸೇತು ತಂಡ, ನ್ಯಾಷನಲ್ ಇನ್ಫಾರ್ಮೆಟಿಕ್ಸ್ ಸೆಂಟರ್ ಹಾಗೂ ವಿದ್ಯುನ್ಮಾನ ಮತ್ತು ಐಟಿ ಸಚಿವಾಲಯದ ಉದ್ಯೋಗಿಗಳು ಭಾಗವಹಿಸುವ ಹಾಗಿಲ್ಲ.

ಆ್ಯಪ್‍ನಲ್ಲಿನ ಲೋಪದೋಷಗಳನ್ನು ಎತ್ತಿ ತೋರಿಸಿದವರಿಗೆ ತಲಾ ಲೋಪಕ್ಕೆ ಒಂದು ಲಕ್ಷ ನಗದು ಬಹುಮಾನ ಹಾಗೂ  ಮೂಲ ಕೋಡ್ ಸುಧಾರಣೆ ನಿಟ್ಟಿನಲ್ಲಿನ ಅನುಮೋದಿತ ಸಲಹೆಗಳಿಗೆ ರೂ. 1 ಲಕ್ಷ ತನಕ ಬಹುಮಾನ ದೊರೆಯಲಿದೆ.

ಮೇ 27ರಂದು ಆರಂಭಗೊಂಡ ಬಗ್ ಬೌಂಟಿ ಕಾರ್ಯಕ್ರಮ ಜೂನ್ 26ರ ತನಕ ಮುಂದುವರಿಯಲಿದೆ. ಸಂಪೂರ್ಣ ವಿವರಗಳು ಹಾಗೂ ನಿಯಮಗಳು ಇಲ್ಲಿ ಲಭ್ಯ- https://innovate.mygov.in/aarogyasetu-bug-bounty/#tab1

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News