ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಇಬ್ಬರು ಉದ್ಯೋಗಿಗಳಿಗೆ ಕೊರೋನ ಸೋಂಕು

Update: 2020-05-30 10:28 GMT

ಹೊಸದಿಲ್ಲಿ: ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಮುಖ್ಯ ಕಾರ್ಯಾಲಯದಲ್ಲಿ ಕರ್ತವ್ಯದಲ್ಲಿದ್ದ ಕನಿಷ್ಠ ಇಬ್ಬರು ಉದ್ಯೋಗಿಗಳಿಗೆ ಕೋವಿಡ್-19 ಸೋಂಕು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಅವರ ಜತೆಗೆ ಸಂಪರ್ಕದಲ್ಲಿದ್ದ ಕಚೇರಿಯ ಇತರ ಸಿಬ್ಬಂದಿಗಳನ್ನು 14 ದಿನಗಳ ಕಾಲ ಸ್ವಯಂ ಕ್ವಾರಂಟೈನಿಗೊಳಗಾಗುವಂತೆ ಸೂಚಿಸಲಾಗಿದೆ.

ಸಚಿವಾಲಯದ ಕಾನೂನು ಘಟಕದಲ್ಲಿ ಕರ್ತವ್ಯ ನಿರ್ವಹಿಸುವ ಒಬ್ಬರು ಅಧಿಕಾರಿ ಹಾಗೂ ಸೆಂಟ್ರಲ್ ಯುರೋಪ್ ವಿಭಾಗದ ಕನ್ಸಲ್ಟೆಂಟ್ ಒಬ್ಬರ ವೈದ್ಯಕೀಯ ವರದಿ ಪಾಸಿಟಿವ್ ಆಗಿದೆ ಎಂದು ತಿಳಿದು ಬಂದಿದೆ. ಸಚಿವಾಲಯದ ಕಾನೂನು ಹಾಗೂ ಸೆಂಟ್ರಲ್ ಯುರೋಪ್ ವಿಭಾಗಗಳಲ್ಲಿ ಸ್ಯಾನಿಟೈಸಿಂಗ್ ಕೆಲಸ ನಡೆಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News