ಕಾಸರಗೋಡು: ಇಂದು ಮೂವರಿಗೆ ಕೋವಿಡ್ ಪಾಸಿಟಿವ್

Update: 2020-05-30 14:35 GMT

ಕಾಸರಗೋಡು : ಜಿಲ್ಲೆಯಲ್ಲಿ ಶನಿವಾರ ಮೂವರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಮೇ 19ರಂದು ಕುವೈತ್ ನಿಂದ ಆಗಮಿಸಿದ್ದ ಪಿಲಿಕೋಡ್ ನಿವಾಸಿಯಾಗಿರುವ 33 ವರ್ಷದ ವ್ಯಕ್ತಿಗೆ, ಮೇ 17ರಂದು ದುಬೈಯಿಂದ ಆಗಮಿಸಿದ್ದ ಮಧೂರು ನಿವಾಸಿಯಾಗಿರುವ 68 ವರ್ಷದ ವ್ಯಕ್ತಿಗೆ, ಮೇ 21ರಂದು ಮಹಾರಾಷ್ಟ್ರ ದಿಂದ ಬಂದಿದ್ದ 29 ವರ್ಷದ ಚೆಮ್ನಾಡ್ ನಿವಾಸಿಗೆ ಸೋಂಕು ತಗಲಿದೆ.

ಜಿಲ್ಲೆಯಲ್ಲಿ ಒಟ್ಟು 3,595 ಮಂದಿ ನಿಗಾದಲ್ಲಿದ್ದಾರೆ. ಮನೆಗಳಲ್ಲಿ 2987 ಮಂದಿ, ಆಸ್ಪತ್ರೆಗಳಲ್ಲಿ 608 ಮಂದಿ ನಿಗಾದಲ್ಲಿದ್ದಾರೆ. 413 ಮಂದಿ ಶನಿವಾರ ತಮ್ಮ ನಿಗಾ ಅವಧಿ ಪೂರ್ಣಗೊಳಿಸಿದ್ದಾರೆ. ಶನಿವಾರ ನೂತನವಾಗಿ 343 ಮಂದಿಯನ್ನು ಐಸೊಲೇಷನ್ ವಾರ್ಡಿಗೆ ದಾಖಲಿಸಲಾಗಿದೆ.

ಜಿಲ್ಲೆಯಲ್ಲಿ 6902 ಮಂದಿಯ ಸ್ಯಾಂಪಲ್ ತಪಾಸಣೆಗೆ ಕಳುಹಿಸಲಾಗಿದೆ. 6020 ಮಂದಿಯ ತಪಾಸಣೆ ನೆಗೆಟಿವ್ ಆಗಿದೆ. 419 ಮಂದಿಯ ಫಲಿತಾಂಶ ಲಭಿಸಿಲ್ಲ. ಜಿಲ್ಲೆಯಲ್ಲಿ ಈಗ ಒಟ್ಟು 73 ಮಂದಿ ಕೋವಿಡ್ ರೋಗಿಗಳಿದ್ದಾರೆ ಎಂದು ವೈದ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News