ಉಡುಪಿ ಜಿಪಂನಿಂದ ಎಲ್ಲಾ ಗ್ರಾಪಂಗಳಿಗೆ ಕೋವಿಡ್-19 ಕಿಟ್

Update: 2020-05-30 15:33 GMT

ಉಡುಪಿ, ಮೇ 30: ಉಡುಪಿ ಜಿಪಂನಿಂದ ಜಿಲ್ಲೆಯ ಎಲ್ಲಾ 158 ಗ್ರಾಪಂ ಗಳಿಗೆ ಕೋವಿಡ್-19 ಕಿಟ್‌ಗಳ ವಿತರಣೆ ಅಂಗವಾಗಿ ಅಲೆವೂರು ಮತ್ತು ಬಡಗಬೆಟ್ಟು ಗ್ರಾಪಂಗಳಿಗೆ ಅಧ್ಯಕ್ಷ ದಿನಕರಬಾಬು ಶನಿವಾರ ಮಣಿಪಾಲದ ಜಿಪಂ ಸಭಾಂಗಣದಲ್ಲಿ ಸಾಂಕೆೀತಿಕವಾಗಿ ಕಿಟ್‌ಗಳನ್ನು ವಿತರಿಸಿದರು.

ಪ್ರತಿ ಕಿಟ್‌ನಲ್ಲಿ ಪಂಚಾಯತ್‌ಗಳಿಗೆ 60 ಮಾಸ್ಕ್ (ಇವುಗಳನ್ನು ಜಿಲ್ಲೆಯ ಸ್ವಸಹಾಯ ಸಂಘದ ಸದಸ್ಯರು ತಯಾರಿಸಿದ್ದಾರೆ) ಫೇಸ್ ಶೀಲ್ಡ್ 3 (ಬ್ರಹ್ಮ ಕುಮಾರಿ ಸಮಾಜದಿಂದ ಕಡಿಮೆ ವೆಚ್ಚದಲ್ಲಿ ತಯಾರಿಕೆ), 4 ಗಾಗಲ್‌ಗಳು, 3 ಬಟ್ಟೆಯ ಎಪ್ರಾನ್ ಮತ್ತು ಮಳೆಗಾಲದಲ್ಲಿ ಧರಿಸಬಹು ದಾದ 3ಎಪ್ರಾನ್‌ಗಳು ಮತ್ತು ಅಬಕಾರಿ ಇಲಾಖೆಯಿಂದ ತಯಾರಿಸಿದ 4 ಸ್ಯಾನಿಟೈಸೆರ್ ಬಾಟಲ್‌ಗಳು, ರಬ್ಬರ್ ಗ್ಲೌಸ್‌ಗಳು 10 ಜೊತೆ ಅಲ್ಲದೇ ಇವುಗಳೊಂದಿಗೆ 2ಜೊತೆ ಗಮ್ ಬೂಟ್ ಖರೀದಿ ಮತ್ತು ಸೋಪ್ ಮತ್ತು ಬ್ಲೀಚಿಂಗ್ ಪೌಡರ್ ಖರೀದಿಗೆ ಅನುದಾನ ನೀಡಲಾಗಿದೆ.

ಜಿಲ್ಲೆಯ ಎಲ್ಲಾ ಗ್ರಾಪಂಗಳಲ್ಲಿ ಕಾರ್ಯ ನಿರ್ವಹಿಸುವ ನೌಕರರು, ಸ್ವಚ್ಚತಾ ಕೆಲಸಗಾರರು ಮತ್ತು ಎಲ್‌ಎಲ್‌ಆರ್‌ಎಂ ಸಿಬ್ಬಂದಿಗಳಿಗೆ ಇವುಗಳನ್ನು ವಿತರಿಸ ಲಾಗುವುದು. ಜಿಲ್ಲಾ ಸ್ವಚ್ಛ ಭಾರತ್ ಮಿಷನ್ ವತಿಯಿಂದ ಸುರಕ್ಷಾ ಕಿಟ್‌ಗಳನ್ನು ಸರಬರಾಜು ಮಾಡಲಾಗುತ್ತಿದೆ. ಇದೇ ಸಂದರ್ಭದಲ್ಲಿ ಸ್ವಚ್ಛ ಭಾರತ್ ಮಿಷನ್ ವತಿಯಿಂದ ಹೊರತಂದ ಫ್ಲಿಪ್ ಚಾರ್ಟ್ ಮತ್ತು ಕ್ಯಾಲೆಂಡರ್‌ಗಳನ್ನು ಅಧ್ಯಕ್ಷ ದಿನಕರ ಬಾಬು ಬಿಡುಗಡೆಗೊಳಿಸಿದರು.

ಉಪಾಧ್ಯಕ್ಷೆ ಶೀಲಾ ಶೆಟ್ಟಿ, ಸ್ಥಾಯಿ ಸಮಿತಿಗಳ ಅಧ್ಯಕ್ಷರಾದ ಶೋಭಾ ಜಿ ಪುತ್ರನ್, ಪ್ರತಾಪ್ ಹೆಗ್ಡೆ ಮಾರಾಳಿ,ಸುಮಿತ್ ಶೆಟ್ಟಿ, ಜಿಪಂ ಸಿಇಓ ಪ್ರೀತಿ ಗೆಹ್ಲೋಟ್, ಉಪಕಾರ್ಯದರ್ಶಿ ಕಿರಣ್ ಫಡ್ನೇಕರ್, ಮುಖ್ಯ ಯೋಜನಾ ಧಿಕಾರಿ ಶ್ರೀನಿವಾಸ ರಾವ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News