​ಅಕ್ರಮ ಕಸಾಯಿಖಾನೆಗೆ ದಾಳಿ

Update: 2020-05-30 15:35 GMT

ಕುಂದಾಪುರ, ಮೇ 30: ಕೋಡಿಯ ಮುಲ್ಲಾ ಸ್ಟ್ರೀಟ್ ಎಂಬಲ್ಲಿನ ಅಕ್ರಮ ಕಸಾಯಿಖಾನೆಗೆ ಮೇ 30ರಂದು ಬೆಳಗಿನ ಜಾವ ದಾಳಿ ನಡೆಸಿರುವ ಕುಂದಾ ಪುರ ಪೊಲೀಸರು ಸಾವಿರಾರು ರೂ. ವೌಲ್ಯದ ಮಾಂಸವನ್ನು ವಶಪಡಿಸಿ ಕೊಂಡಿದ್ದಾರೆ.

ಕೋಡಿಯ ಅಬ್ದುಲ್ ಲತೀಫ್ ಎಂಬಾತನ ಮನೆಯ ಹಿಂಬದಿಯ ಶೆಡ್ ನಲ್ಲಿ ಅಕ್ರಮವಾಗಿ ದನವನ್ನು ಮಾಂಸಕ್ಕಾಗಿ ಕಡಿಯುತ್ತಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿದ್ದಾರೆ. ದಾಳಿ ವೇಳೆ ಆರೋಪಿ ಅಬ್ದುಲ್ ಲತೀಫ್ ಪರಾರಿಯಾಗಿದ್ದಾನೆ. ಶೆಡ್‌ನಲ್ಲಿದ್ದ 10,500ರೂ. ಮೌಲ್ಯದ ಸುಮಾರು 35 ಕೆ.ಜಿ. ದನದ ಮಾಂಸವನ್ನು ಪೊಲೀಸರು ವಶಪಡಿಸಿಕೊಂಡಿ ದ್ದಾರೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News