ಹಲ್ಲೆ ಪ್ರಕರಣ : ವಿದ್ಯಾರ್ಥಿ ಮನೆಗೆ ಭೇಟಿ ನೀಡಿದ ಟಿಪ್ಪು ಅಭಿಮಾನಿ ಮಹಾ ವೇದಿಕೆ

Update: 2020-05-30 17:32 GMT

ಮಂಗಳೂರು : ಸಾಲೆತ್ತೂರು ಕಾಡುಮಠದಲ್ಲಿ ವಿದ್ಯಾರ್ಥಿಗೆ ಹಲ್ಲೆ ನಡೆಸಿದ ಘಟನೆಯ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಟಿಪ್ಪು ಸುಲ್ತಾನ್ ಅಭಿಮಾನಿಗಳ ಮಹಾ ವೇದಿಕೆಯ ದ.ಕ.ಜಿಲ್ಲಾ ಸಮಿತಿಯು ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿ ಆಹಾರ ಸಾಮಗ್ರಿಗಳನ್ನು ವಿತರಿಸಿದರು.

ಯುವಕನ ತಂದೆ ಜೊತೆ ಮಾತುಕತೆ ನಡೆಸಿದ ಬಳಿಕ ಕರ್ನಾಟಕ ರಾಜ್ಯ ಟಿಪ್ಪು ಸುಲ್ತಾನ್ ಅಭಿಮಾನಿಗಳ ಮಹಾವೇದಿಕೆಯ ದ.ಕ.ಜಿಲ್ಲಾ ಅಧ್ಯಕ್ಷ ಇಸ್ಮಾಯಿಲ್ ಶಾಫಿ ಬಬ್ಬುಕಟ್ಟೆ ಮಾತನಾಡಿ ನಮ್ಮ ಸಂಘಟನೆಯಿಂದ ಕಾನೂನಾತ್ಮಕ ಹೋರಾಟಕ್ಕೆ ಸಂಪೂರ್ಣವಾಗಿ ಮನೆಯವರಿಗೆ ಬೆಂಬಲ ನೀಡುತ್ತೇವೆ. ಬಿಹಾರ, ಉತ್ತರ ಪ್ರದೇಶದಲ್ಲಿ ನಡೆಯುವ ಇಂತಹ ಕೃತ್ಯಗಳು ನಮ್ಮ ದ.ಕ.ಜಿಲ್ಲೆಯಲ್ಲಿ ನಡೆಯಬಾರದು, ಈ ಕೃತ್ಯವನ್ನು ಎಲ್ಲಾ ಸಂಘ ಸಂಸ್ಥೆಗಳು ಒಗ್ಗೂಡಿ ವಿರೋಧಿಸಬೇಕು, ಹಲ್ಲೆ ಮಾಡಿದವರಿಗೆ ಶಿಕ್ಷೆಯಾಗುವವರೆಗೆ ನಾವು ಉಗ್ರ ಹೋರಾಟ ಮಾಡುತ್ತೇವೆ ಎಂದರು.

ಕರ್ನಾಟಕ ರಾಜ್ಯ ಟಿಪ್ಪು ಸುಲ್ತಾನ್ ಅಭಿಮಾನಿಗಳ ಮಹಾವೇದಿಕೆಯ ಗೌರವಾಧ್ಯಕ್ಷ ಡಿ.ಐ.ಅಬೂಬಕರ್ ಕೈರಂಗಳ ಮಾತನಾಡಿ ಅಮಾಯಕ ಯುವಕನ ಮೇಲಿನ ಹಲ್ಲೆ ಅಕ್ಷಮ್ಯ ಅಪರಾಧ, ನಮ್ಮ ಸಂಘಟನೆ ಇದನ್ನು ಸಹಿಸುವುದಿಲ್ಲ ಬಲವಾಗಿ ಖಂಡಿಸುತ್ತೇವೆ, ಮುಂದಿನ ದಿನಗಳಲ್ಲಿ ಇಂತಹ ಘಟನೆ ಮರುಕಳಿಸಬಾರದು, ನಾವು ಶಾಂತಿ ಪ್ರಿಯರಾಗಿದ್ದೇವೆ, ಅಮಾಯಕನ ಯುವಕನಿಗೆ ತಕ್ಕ ನ್ಯಾಯ ಸಿಗಬೇಕು, ಆರೋಪಿಗೆ ಶಿಕ್ಷೆಯಾಗಬೇಕೆಂದು ಹೇಳಿದರು.

ಕರ್ನಾಟಕ ರಾಜ್ಯ ಟಿಪ್ಪು ಸುಲ್ತಾನ್ ಅಭಿಮಾನಿಗಳ ಮಹಾವೇದಿಕೆಯ ದ.ಕ.ಜಿಲ್ಲಾ ಸಮಿತಿಯ ಉಪಾಧ್ಯಕ್ಷ ಮುನೀರ್ ಅಸೈಗೋಲಿ, ಪ್ರಧಾನ ಕಾರ್ಯದರ್ಶಿ ನಿಸಾರ್ ಫರಂಗಿಪೇಟೆ, ಮಾದ್ಯಮ ಕಾರ್ಯದರ್ಶಿ ಅಶ್ರಫ್ ಸಖಾಫಿ ಕುರ್ನಾಡು, ಜಿಲ್ಲಾ ಕಾನೂನು ಸಲಹಾ ಸಂಚಾಲಕರು ಆರ್.ಕೆ. ಮದನಿ ಅಮ್ಮೆಂಬಳ, ಜಿಲ್ಲಾ ಸಂಚಾಲಕ ಸಲೀಂ ಮೇಗಾ, ಸಂಘಟನಾ ಕಾರ್ಯದರ್ಶಿ ಕರೀಂ ಬೊಳ್ಳಾಯಿ, ಕಾರ್ಯಕಾರಿ ಸದಸ್ಯರಾದ ಮೊಹಮ್ಮದ್ ಆಲಿ ವಲವೂರು ಹಾಗೂ ಇರಾ ಪಂಚಾತ್ ಸದಸ್ಯರಾದ ಇಬ್ರಾಹಿಂ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News