ದ.ಕ.ಜಿಲ್ಲೆ: ಮುಂಬೈಯಿಂದ ಬಂದಿದ್ದ 14 ಮಂದಿಗೆ ಕೊರೋನ ಸೋಂಕು ದೃಢ

Update: 2020-05-30 17:40 GMT

ಮಂಗಳೂರು, ಮೇ 30: ದ.ಕ.ಜಿಲ್ಲೆಯಲ್ಲಿ ಶನಿವಾರ ಕೊರೋನ ಸೋಂಕಿನ 14 ಪ್ರಕರಣಗಳು ದೃಢಪಟ್ಟಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 119ಕ್ಕೇರಿದೆ. ಆ ಪೈಕಿ ದ.ಕ.ಜಿಲ್ಲಾ ಮೂಲದ 113 ಮತ್ತು ಹೊರ ರಾಜ್ಯ ಹಾಗೂ ಹೊರ ಜಿಲ್ಲೆಗೆ ಸೇರಿದ 6 ಪ್ರಕರಣಗಳಿವೆ.

ಶನಿವಾರ ದೃಢಗೊಂಡ 14 ಪ್ರಕರಣಗಳ ಪೈಕಿ 9 ಪುರುಷರು ಮತ್ತು 3 ಮಹಿಳೆಯರು ಹಾಗೂ ಒಬ್ಬ ಬಾಲಕ ಹಾಗೂ ಒಬ್ಬ ಬಾಲಕಿ ಸೇರಿದ್ದಾರೆ. 14 ಮಂದಿಯ ಪೈಕಿ 13 ಮಂದಿ ಮುಂಬೈಯಿಂದ ಬಂದವರಾಗಿದ್ದಾರೆ. ಒಬ್ಬ ಬಾಲಕನಿಗೆ ಪಿ-947ರ ದ್ವಿತೀಯ ಸಂಪರ್ಕದಿಂದ ಸೋಂಕು ದೃಢಗೊಂಡಿವೆ.

ಮೇ 19ರಂದು ಮುಂಬೈಯಿಂದ ಮಂಗಳೂರಿಗೆ ಆಗಮಿಸಿದ್ದ 20 ಮತ್ತು 21 ವರ್ಷದ ಇಬ್ಬರು ಯುವಕರು, ಮೇ 21ರಂದು ಮುಂಬೈಯಿಂದ ಮಂಗಳೂರಿಗೆ ಆಗಮಿಸಿದ್ದ 24 ಮತ್ತು 38 ವರ್ಷದ ಇಬ್ಬರು ಯುವಕರು ಹಾಗೂ 48 ವರ್ಷದ ವ್ಯಕ್ತಿ, ಮೇ 18ರಂದು ಮುಂಬೈಯಿಂದ ಮಂಗಳೂರಿಗೆ ಆಗಮಿಸಿದ್ದ 38 ವರ್ಷದ ಮಹಿಳೆ ಮತ್ತು 11 ವರ್ಷದ ಬಾಲಕಿ, ಮೇ 15ರಂದು ಮುಂಬೈಯಿಂದ ಮಂಗಳೂರಿಗೆ ಆಗಮಿಸಿದ್ದ 26 ವರ್ಷದ ಮಹಿಳೆ, ಮೇ 17ರಂದು ಮುಂಬೈಯಿಂದ ಮಂಗಳೂರಿಗೆ ಆಗಮಿಸಿದ್ದ 33 ವರ್ಷದ ಹೆಂಗಸು, ಮೇ 19ರಂದು ಮುಂಬೈಯಿಂದ ಮಂಗಳೂರಿಗೆ ಆಗಮಿಸಿದ 54 ವರ್ಷದ ಗಂಡಸು, ಮೇ 21ರಂದು ಮುಂಬೈಯಿಂದ ಮಂಗಳೂರಿಗೆ ಆಗಮಿಸಿದ 24 ವರ್ಷದ ಯುವಕ, ಮೇ 17ರಂದು ಮುಂಬೈಯಿಂದ ಮಂಗಳೂರಿಗೆ ಆಗಮಿಸಿದ್ದ 31 ವರ್ಷದ ಯುವಕ, ಮೇ 22ರಂದು ಮುಂಬೈಯಿಂದ ಮಂಗಳೂರಿಗೆ ಆಗಮಿಸಿದ್ದ 61 ವರ್ಷದ ಗಂಡಸಿಗೆ ಸೋಂಕು ದೃಢಗೊಂಡಿದೆ. ಕ್ವಾರಂಟೈನ್ ಕೇಂದ್ರದಲ್ಲಿದ್ದ ಇವರಿಗೆ ಸೋಂಕು ದೃಢಗೊಳ್ಳುತ್ತಲೇ ವೆನ್ಲಾಕ್‌ಗೆ ದಾಖಲಿಸಲಾಗಿದೆ.

ಸೋಮೇಶ್ವರ ಗ್ರಾಮದ ಪಿಲಾರ್ ನಿವಾಸಿಯಾಗಿದ್ದ ಪಿ-947ರ ದ್ವಿತೀಯ ಸಂಪರ್ಕದಿಂದ 17 ವರ್ಷ ಪ್ರಾಯದ ಬಾಲಕನಿಗೆ ಶನಿವಾರ ಸೋಂಕು ದೃಢಗೊಂಡಿದ್ದು, ಅವರನ್ನು ಕೂಡ ವೆನ್ಲಾಕ್‌ಗೆ ದಾಖಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News