​ಮೇ 31ರಿಂದ ಸಂತ ಆಂತೋನಿ ನೊವೆನಾ ಆರಂಭ

Update: 2020-05-30 17:43 GMT

ಮಂಗಳೂರು, ಮೇ 30: ನಗರದ ಜೆಪ್ಪು ಸಂತ ಆಂತೋನಿ ಆಶ್ರಮದ ವತಿಯಿಂದ ನಡೆಯುವ ಸಂತ ಆಂತೋನಿ ಅವರ ವಾರ್ಷಿಕ ಹಬ್ಬ ಹಾಗೂ ಅದಕ್ಕೆ ಸಂಬಂಧಪಟ್ಟ 13 ದಿನಗಳ ನೊವೆನಾಗಳಿಗೆ ಮೇ 31ರಂದು ಚಾಲನೆ ಸಿಗಲಿದೆ.

ಮೇ 31ರಂದು ಬೆಳಗ್ಗೆ 7 ಗಂಟೆಗೆ ಕೊಂಕಣಿಯಲ್ಲಿ ಬಲಿಪೂಜೆ ಹಾಗೂ ನೊವೆನಾವನ್ನು ಮಂಗಳೂರು ಕ್ರೈಸ್ತ ಧರ್ಮಪ್ರಾಂತದ ವಿಕಾರ್ ಜೆರಾಲ್ ಮೊನ್ಸಿಂಜೋರ್ ಮ್ಯಾಕ್ಸಿಂ ನೊರೊನ್ಹಾ ಚಾಲನೆ ನೀಡಲಿದ್ದಾರೆ. ಸಂಜೆ 7ಕ್ಕೆ ಇಂಗ್ಲಿಷ್‌ನಲ್ಲಿ ಬಲಿಪೂಜೆ ಹಾಗೂ ನೊವೆನಾ ನಡೆಯಲಿದೆ. ಹೀಗೆ ಜೂ.13ರ ತನಕ ಬೆಳಗ್ಗೆ 7ಕ್ಕೆ ಕೊಂಕಣಿ ಹಾಗೂ ಸಂಜೆ 7ಕ್ಕೆ ಇಂಗ್ಲಿಷ್ ಭಾಷೆಯಲ್ಲಿ ನೊವೆನಾಗಳು ಸಾಗಲಿದೆ.

ಜೂ.13ರಂದು ಬೆಳಗ್ಗೆ 7ಕ್ಕೆ ಕೊಂಕಣಿಯಲ್ಲಿ ಮಂಗಳೂರು ಬಿಷಪ್ ಡಾ. ಪೀಟರ್ ಪಾವ್ಲ್ ಸಲ್ಡಾನಾ ಬಲಿಪೂಜೆ ಹಾಗೂ ನೊವೆನಾದ ನೇತೃತ್ವ ವಹಿಸಲಿದ್ದಾರೆ. ಸಂಜೆ 6ಕ್ಕೆ ಇಂಗ್ಲಿಷ್‌ನಲ್ಲಿ ನಿವೃತ್ತ ಬಿಷಪ್ ಡಾ. ಅಲೋಶಿಯಸ್ ಪಾವ್ಲ್ ಡಿಸೋಜ ನೇತೃತ್ವ ವಹಿಸಲಿದ್ದಾರೆ. ನೊವೆನಾ ಹಾಗೂ ಬಲಿಪೂಜೆಯ ನೇರ ಪ್ರಸಾರವನ್ನು ಆಶ್ರಮದ ೇಸ್‌ಬುಕ್ ಹಾಗೂ ಯೂಟ್ಯೂಬ್ ಚಾನೆಲ್‌ನಲ್ಲಿ ವೀಕ್ಷಿಸಬಹುದು ಎಂದು ಆಶ್ರಮದ ನಿರ್ದೇಶಕ ಡಾ.ಒನಿಲ್ ಡಿಸೋಜ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News