ದ.ಕ.ಜಿಲ್ಲೆ : ಖಾಸಗಿ ಬಸ್‌ಗಳ ಪ್ರಯಾಣ ದರದಲ್ಲಿ ಶೇ.15 ಹೆಚ್ಚಳ

Update: 2020-05-31 17:42 GMT

ಮಂಗಳೂರು, ಮೇ 31: ಕೊರೋನ-ಲಾಕ್‌ಡೌನ್ ಹಿನ್ನೆಲೆಯಲ್ಲಿ ಮಾ.22ರಿಂದ ದ.ಕ.ಜಿಲ್ಲೆಯಲ್ಲಿ ಸ್ಥಗಿತಗೊಂಡಿದ್ದ ಖಾಸಗಿ ಬಸ್ ಸಂಚಾರವು ಜೂ.1ರಿಂದ ಆರಂಭಗೊಳ್ಳಲಿದೆ.

ಜಿಲ್ಲೆಯಲ್ಲಿ ಸುಮರು 320 ಸಿಟಿ ಬಸ್‌ಗಳಿದ್ದು, ಆ ಪೈಕಿ ಮೊದಲ ಹಂತದಲ್ಲಿ ರಾಜ್ಯ ಸರಕಾರದ ಮಾರ್ಗಸೂಚಿ ಪ್ರಕಾರ ಸುಮಾರು 150ರಷ್ಟು ಬಸ್‌ಗಳು ಸಂಚರಿಸಲಿವೆ. ಈ ಮಧ್ಯೆ ಬಸ್ಸಿನಲ್ಲಿ ಪ್ರಯಾಣಿಕರ ಸಂಖ್ಯೆ ಶೇ.50ಕ್ಕೆ ಮಾತ್ರ ಅವಕಾಶವಿರುವುದರಿಂದ ಬಸ್ ಯಾನವು ಮಾಲಕರಿಗೆ ನಷ್ಟವನ್ನುಂಟು ಮಾಡಲಿದೆ. ಹಾಗಾಗಿ ಶೇ.15ರಷ್ಟು ಅಂದರೆ ಕನಿಷ್ಠ ದರ 8 ರೂ. ಇದ್ದುದು 9:50 ರೂ. ಆಗಲಿದೆ. ಆದರೆ ಚಿಲ್ಲರೆ ಸಮಸ್ಯೆ ಎದು ರಾಗದಿರಲಿ ಎಂದು ಕನಿಷ್ಠ ದರ 10 ರೂ. ವಸೂಲಿ ಮಾಡಲು ಸಂಘ ಮುಂದಾಗಿದೆ. ಉಳಿದಂತೆ ಆ ಬಳಿಕದ ಸ್ಟೇಜ್‌ಗೆ ತಲಾ ಒಂದೊಂದು ರೂ. ಹೆಚ್ಚು ಆಗಲಿದೆ ಎಂದು ಬಸ್ ಮಾಲಕರ ಸಂಘದ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News