ಉಡುಪಿ : ಎರಡು ತಿಂಗಳ ನಂತರ ರಸ್ತೆಗಿಳಿದ ಖಾಸಗಿ ಬಸ್‌ಗಳು

Update: 2020-06-01 17:26 GMT

ಉಡುಪಿ, ಜೂ.1: ಕೋವಿಡ್- 19 ಲಾಕ್‌ಡೌನ್‌ನಿಂದಾಗಿ ಕಳೆದ ಎರಡು ತಿಂಗಳುಗಳಿಂದ ಸ್ಥಗಿತಗೊಂಡಿದ್ದ ಖಾಸಗಿ ಬಸ್ ಸಂಚಾರವು ಇಂದು ಉಡುಪಿ ಜಿಲ್ಲೆಯಾದ್ಯಂತ ಪುನಾರಂಭಗೊಂಡಿದೆ. ಸುಮಾರು ಶೇ.25ರಷ್ಟು ಸರ್ವಿಸ್ ಹಾಗೂ ಸಿಟಿಬಸ್‌ಗಳು ವಿವಿಧ ಮಾರ್ಗಗಳಲ್ಲಿ ಸಂಚಾರ ನಡೆಸಿವೆ.

ಉಡುಪಿ- ಮಂಗಳೂರು ಮಧ್ಯೆ ಒಟ್ಟು ಆರು ವೇಗದೂತ ಬಸ್‌ಗಳು ಓಡಾಟ ನಡೆಸಿದ್ದು, 20ನಿಮಿಷಗಳಿಗೊಮ್ಮೆ ಒಂದರಂತೆ ಬಸ್‌ಗಳು ಸಂಚರಿಸಿದವು. ಅದೇ ರೀತಿ ಉಡುಪಿ- ಕುಂದಾಪುರ ಮಾರ್ಗದಲ್ಲಿ 15 ನಿಮಿಷಗಳಿ ಗೊಂದು ಬಸ್ ಓಡಾಟ ನಡೆಸಿದೆ. ಉಡುಪಿ -ಮಂಗಳೂರು ಮಾರ್ಗದಲ್ಲಿ ಸಂಚರಿಸಿದ ಸುಮಾರು ಐದಾರು ಲೋಕಲ್ ಸರ್ವಿಸ್ ಬಸ್‌ಗಳ ಪೈಕಿ ಕೆಲವು ಬಸ್‌ಗಳು ಮಾತ್ರ ಮಂಗಳೂರಿಗೆ ತೆರಳಿದರೆ, ಇನ್ನು ಕೆಲವು ಬಸ್‌ಗಳು ಪಡು ಬಿದ್ರೆಯಿಂದ ವಾಪಾಸ್ಸು ಬಂದವು.

ಅದೇ ರೀತಿ ಹೆಬ್ರಿ, ಕಾರ್ಕಳ, ಸಿದ್ಧಾಪುರ, ಬ್ರಹ್ಮಾವರ ಸೇರಿದಂತೆ ಗ್ರಾಮೀಣ ಪ್ರದೇಶಕ್ಕೂ ಬಸ್‌ಗಳು ಓಡಾಟ ನಡೆಸಿದವು. ಮೊದಲ ದಿನ ವಾಗಿರುವುದರಿಂದ ಪ್ರಯಾಣಿಕರ ಸಂಖ್ಯೆ ತೀರಾ ವಿರಳವಾಗಿರುವುದು ಕಂಡುಬಂತು. ನಿಲ್ದಾಣದಲ್ಲಿ ಬಸ್‌ಗಳ ಸ್ಯಾನಿಟೈಸ್‌ಗೆ ಬೇಕಾದ ವ್ಯವಸ್ಥೆ ಯನ್ನು ಕಲ್ಪಿಸಲಾಗಿತ್ತು. ಪ್ರಯಾಣಿಕರಿಗೆ ಮಾಸ್ಕ್ ಕಡ್ಡಾಯ ಮಾಡಲಾಗಿತ್ತು.

ಉಡುಪಿ ನಗರದಲ್ಲಿರುವ ಒಟ್ಟು 85 ಸಿಟಿಬಸ್‌ಗಳ ಪೈಕಿ 25 ಬಸ್‌ಗಳು ಇಂದು ಸಂಚಾರ ಆರಂಭಿಸಿವೆ. ಉಡುಪಿ- ಮಣಿಪಾಲಕ್ಕೆ 5-10ನಿಮಿಷ ಕ್ಕೊಂದು, ಉಡುಪಿ-ಮಲ್ಪೆಗೆ 10ನಿಮಿಷಕ್ಕೊಂದು ಮತ್ತು ಗ್ರಾಮಾಂತರ ಪ್ರದೇಶ ಗಳಿಗೆ ಅರ್ಧ ಗಂಟೆಗೆ ಒಂದರಂತೆ ಬಸ್‌ಗಳು ಓಡಾಟ ನಡೆಸಿವೆ.

ಪ್ರತಿ ಟ್ರಿಪ್ ಮುಗಿಸಿ ಬರುವ ಬಸ್ಸನ್ನು ಸಿಟಿಬಸ್ ನಿಲ್ದಾಣದಲ್ಲಿಯೇ ಸ್ಯಾನಿ ಟೈಸ್ ಮಾಡುತ್ತಿರುವ ದೃಶ್ಯ ಕಂಡುಬಂತು. ಬೆಳಗ್ಗಿನ ಸಮಯ ಹೊರತು ಪಡಿಸಿ ದರೆ ಉಳಿದ ಇಡೀ ದಿನ ಬಸ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆ ತೀರಾ ವಿರಳವಾಗಿ ರುವುದಾಗಿ ತಿಳಿದುಬಂದಿದೆ. ಸುರಕ್ಷಿತ ಅಂತರ, ಮಾಸ್ಕ್ ಧಾರಣೆ ಮತ್ತು ಸ್ಯಾನಿಟೈಸರ್‌ಗೆ ಪ್ರತಿಯೊಂದು ಬಸ್‌ಗಳಲ್ಲಿ ಆದ್ಯತೆ ನೀಡಲಾಗಿತ್ತು. ಬೆಳಗ್ಗೆ 7ಗಂಟೆಯಿಂದ ಆರಂಭಗೊಂಡ ಬಸ್ ಸಂಚಾರ ಸಂಜೆ 7ಗಂಟೆಯವರೆಗೆ ನಡೆಯಿತು.

ಹೆಚ್ಚುವರಿ ಸರಕಾರಿ ಬಸ್ ಓಡಾಟ

ಲಾಕ್‌ಡೌನ್ ಇನ್ನಷ್ಟು ಸಡಿಲಿಕೆ ಹಿನ್ನೆಲೆಯಲ್ಲಿ ಕೆಎಸ್‌ಆರ್‌ಟಿಸಿಯು ಇನ್ನುಷ್ಟು ಹೆಚ್ಚುವರಿ ಬಸ್‌ಗಳನ್ನು ರಸ್ತೆಗೆ ಇಳಿಸಿವೆ. ಮಂಗಳೂರು -ಉಡುಪಿ ಬಸ್‌ಗಳ ಸಂಖ್ಯೆಯನ್ನು ಆರರಿಂದ ಎಂಟಕ್ಕೇರಿಸಲಾಗಿದೆ.

ಅದೇ ರೀತಿ ಉಡುಪಿ-ಹೆಬ್ರಿ-ಶಿವಮೊಗ್ಗ ಎಂಟು ಬಸ್, ಚಿಕ್ಕಮಗಳೂರು ಎರಡು, ಕುಂದಾಪುರ ನಾಲ್ಕು, ಕಾರ್ಕಳ ಮೂರು, ಕಾರವಾರ ಒಂದು, ಉಡುಪಿ -ಧರ್ಮಸ್ಥಳ ಒಂದು ಬಸ್‌ಗಳು ಓಡಾಟ ನಡೆಸುತ್ತಿವೆ. ಮಂಗಳೂರು - ಉಡುಪಿ ಮಾರ್ಗದಲ್ಲಿ ವೋಲ್ವೋ ಬದಲು ಸಾರಿಗೆ ಬಸ್‌ಗಳು ಸಂಚರಿಸು ತ್ತಿವೆ. ಹೆಚ್ಚಿನ ಪ್ರಯಾಣಿಕರಿಲ್ಲದಿದ್ದರೂ ಸಾರ್ವಜನಿಕರಿಗೆ ಅನುಕೂಲವಾಗುವ ಉದ್ದೇಶದಿಂದ ಹೆಚ್ಚುವರಿ ಬಸ್‌ಗಳನ್ನು ಆರಂಭಿಸಿ ದ್ದೇವೆಂದು ಕೆಎಸ್‌ಆರ್‌ಟಿಸಿ ಉಡುಪಿ ಡಿಪೋ ವ್ಯವಸ್ಥಾಪದ ಉದಯ ಕುಮಾರ್ ಶೆಟ್ಟಿ ತಿಳಿಸಿದ್ದಾರೆ.

ಸುರಕ್ಷಿತ ಅಂತರವೇ ಇಲ್ಲ

ಉಡುಪಿ- ಮಂಗಳೂರು ಮಾರ್ಗವಾಗಿ ಸಂಚರಿಸುತ್ತಿದ್ದ ಖಾಸಗಿ ವೇಗದೂತ ಬಸ್‌ಗಳಲ್ಲಿ ಸುರಕ್ಷಿತ ಅಂತರ ಕಾಪಾಡದೆ ಸರಕಾರದ ನಿಯಮವನ್ನು ಉಲ್ಲಂಘಿ ಸುತ್ತಿರುವುದು ಕಂಡುಬಂತು. ಬಸ್ಸಿನ ಸೀಟಿನ ಸಾಮರ್ಥ್ಯದ ಶೇ.50ರಷ್ಟು ಪ್ರಯಾಣಿಕರಿಗೆ ಮಾತ್ರ ಅವಕಾಶ ನೀಡುವಂತೆ ಷರತ್ತು ವಿಧಿಸಲಾಗಿತ್ತು. ಆದರೆ ಕೆಲವು ಬಸ್‌ಗಳಲ್ಲಿ ಪ್ರಯಾಣಿ ಕರು ಸುರಕ್ಷಿತ ಅಂತರ ಕಾಯ್ದುಕೊಳ್ಳದೆ ಎಲ್ಲ ಸೀಟುಗಳಲ್ಲಿ ಭರ್ತಿಯಾಗಿ ಪ್ರಯಾಣಿಸಿದರು. ಈ ರೀತಿ ನಿಯಮ ಮೀರಿ ಸಂಚರಿಸುತ್ತಿದ್ದ ಬಸ್ಸನ್ನು ಹೆಜಮಾಡಿ ಚೆಕ್‌ಪೋಸ್ಟ್ ಬಳಿ ತಡೆದ ಪೊಲೀಸರು, ನಿರ್ವಾಹಕರಿಗೆ ಸೂಚನೆ ನೀಡಿದರು.

ಇದೇ ರೀತಿಯ ಸನ್ನಿವೇಶ ಕುಂದಾಪುರ-ಉಡುಪಿ ನಡುವೆ ಸಂಚರಿಸುವ ಖಾಸಗಿ ಬಸ್‌ಗಳಲ್ಲೂ ಕಂಡುಬಂದವು. ನಿರ್ವಾಹಕರು ಬಸ್‌ನಲ್ಲಿದ್ದ ಎಲ್ಲಾ ಸೀಟುಗಳು ಭರ್ತಿಯಾಗುವರೆಗೆ ಕಾದಿದ್ದು, ಇದನ್ನು ಪ್ರಶ್ನಿಸಿದ ಪ್ರಯಾಣಿಕರಿಗೆ ದಬಾಯಿಸಿ ಬಾಯಿ ಮುಚ್ಚಿಸುತಿದ್ದ ದೃಶ್ಯಗಳೂ ಕಂಡುಬಂದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News