ಉಡುಪಿ: ಒಂದೇ ದಿನದಲ್ಲಿ 73 ಕೊರೋನ ಪಾಸಿಟಿವ್ ಪತ್ತೆ

Update: 2020-06-01 13:04 GMT

ಉಡುಪಿ, ಜೂ.1: ಉಡುಪಿ ಜಿಲ್ಲೆಯಲ್ಲಿ ಸೋಮವಾರ ಒಂದೇ ದಿನದಲ್ಲಿ ಒಟ್ಟು 73 ಕೋವಿಡ್-19 ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ಈ ಮೂಲಕ ಉಡುಪಿ ಜಿಲ್ಲೆ ಕೊರೋನ ವೈರಸ್ ಸೋಂಕಿತರ ಪತ್ತೆಯಲ್ಲಿ ದಾಖಲೆಯನ್ನೇ ಬರೆದಿದೆ.

ಒಂದೇ ದಿನದಲ್ಲಿ 73 ಪಾಸಿಟಿವ್ ಪ್ರಕರಣಗಳು ಪತ್ತೆಯಾಗುವ ಮೂಲಕ ಜಿಲ್ಲೆಯಲ್ಲಿ ಕಾಣಿಸಿಕೊಂಡ ಸೋಂಕಿತರ ಒಟ್ಟು ಸಂಖ್ಯೆ 260ಕ್ಕೇರಿದೆ. ಈಗ 195 ಸಕ್ರಿಯ ಪ್ರಕರಣ ಜಿಲ್ಲೆಯಲ್ಲಿದ್ದು, 64 ಮಂದಿ ಚಿಕಿತ್ಸೆಯ ಬಳಿಕ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಮುಂಬೈಯಿಂದ ಬಂದ ಒಬ್ಬರು ಪಾಸಿಟಿವ್ ಇದ್ದ ವ್ಯಕ್ತಿ ಹೃದಯಾಘಾತದಿಂದ ನಿಧನರಾಗಿದ್ದರು.

ಈಗಿರುವ 195 ಕೊರೋನ ಸೋಂಕಿತರು ಜಿಲ್ಲೆಯ ಉಡುಪಿ, ಕುಂದಾಪುರ ಹಾಗೂ ಕಾರ್ಕಳದ ಕೋವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News