ಜನಾಂಗೀಯ ಸಮಾನತೆಗೆ ಗೂಗಲ್ ಬೆಂಬಲ

Update: 2020-06-01 14:56 GMT

ಮಿನಪೊಲಿಸ್ (ಅಮೆರಿಕ), ಜೂ. 1: ಪೊಲೀಸರ ಬಂಧನ ಕಾರ್ಯಾಚರಣೆಯ ವೇಳೆ ಕರಿಯ ವ್ಯಕ್ತಿಯೋರ್ವ ಮೃತಪಟ್ಟಿರುವುದನ್ನು ಪ್ರತಿಭಟಿಸುತ್ತಿರುವ ಅಮೆರಿಕದ ಆಫ್ರಿಕನ್ ಅಮೆರಿಕನ್ ಸಮುದಾಯಕ್ಕೆ ಆಲ್ಫಾಬೆಟ್ ಇಂಕ್ ಮತ್ತು ಗೂಗಲ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಂದರ ಪಿಚೈ ಬೆಂಬಲ ವ್ಯಕ್ತಪಡಿಸಿದ್ದಾರೆ. ದುಃಖ, ಕೋಪ, ಬೇಸರ ಮತ್ತು ಹೆದರಿಕೆಗಳನ್ನು ಅನುಭವಿಸುತ್ತಿರುವ ಸಮುದಾಯವು ಏಕಾಂಗಿಯಲ್ಲ ಎಂದು ಅವರು ಹೇಳಿದ್ದಾರೆ.

ಅದೇ ವೇಳೆ, ಗೂಗಲ್ ಮತ್ತು ಯೂಟ್ಯೂಬ್ ಹೋಮ್‌ಪೇಜ್‌ಗಳಲ್ಲಿ ಪ್ರದರ್ಶಿಸಲಾಗಿರುವ ಕಪ್ಪು ರಿಬ್ಬನನ್ನು ಅವರು ಟ್ವಿಟರ್‌ನಲ್ಲಿ ಅನಾವರಣಗೊಳಿಸಿದರು. ಇದು ಜನಾಂಗೀಯ ಸಮಾನತೆಗೆ ನನ್ನ ಕಂಪೆನಿ ನೀಡುತ್ತಿರುವ ಬೆಂಬಲವನ್ನು ತೋರಿಸುತ್ತದೆ ಎಂದು ಅವರು ಹೇಳಿದರು.

‘‘ಪೊಲೀಸ್ ಕಾರ್ಯಾಚರಣೆಯಲ್ಲಿ ಮೃತಪಟ್ಟ ಜಾರ್ಜ್ ಫ್ಲಾಯ್ಡ್, ಬ್ರೆವೋನಾ ಟೇಲರ್, ಅಹ್ಮೌದ್ ಆರ್ಬರಿ ಹಾಗೂ ಧ್ವನಿಯಿರದ ಇತರರ ನೆನಪಿಸುತ್ತಾ ಹಾಗೂ ಕರಿಯ ಸಮುದಾಯಕ್ಕೆ ಬೆಂಬಲ ಸೂಚಿಸುತ್ತಾ, ಜನಾಂಗೀಯ ಸಮಾನತೆಗೆ ನಾವು ನೀಡುತ್ತಿರುವ ಬೆಂಬಲವನ್ನು ಯುಎಸ್ ಗೂಗಲ್ ಮತ್ತು ಯೂಟ್ಯೂಬ್‌ಗಳ ಮೂಲಕ ನಾವು ಬಹಿರಂಗಪಡಿಸಿದ್ದೇವೆ’’ ಎಂದು ಸುಂದರ ಪಿಚೈ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News