ಉಡುಪಿ ಜಿಲ್ಲೆಯಲ್ಲಿ 59.2ಮಿ.ಮೀ.ಮಳೆ

Update: 2020-06-01 15:26 GMT

ಉಡುಪಿ, ಜೂ.1: ಅರಬಿ ಸಮುದ್ರದಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ಜಿಲ್ಲೆಯಲ್ಲಿ ನಿನ್ನೆ ಸಂಜೆಯಿಂದ ಉತ್ತಮ ಮಳೆಯಾಗುತ್ತಿದೆ. ಇಂದು ಜಿಲ್ಲೆಯಾದ್ಯಂತ ಮೋಡ ಮುಸುಕಿದ ವಾತಾವರಣವಿದ್ದು ಆಗಾಗ ಮಳೆ ಸುರಿದೆ. ಇಂದು ಬೆಳಗ್ಗೆ 8:30ಕ್ಕೆ ಮುಕ್ತಾಯಗೊಂಡಂತೆ ಹಿಂದಿನ 24 ಗಂಟೆಗಳಲ್ಲಿ ಉಡುಪಿ ಜಿಲ್ಲೆಯಲ್ಲಿ ರಾಸರಿ 59.2ಮಿ.ಮೀ. ಮಳೆ ಬಿದ್ದಿದೆ.

ಈ ಅವಧಿಯಲ್ಲಿ ಉಡುಪಿಯಲ್ಲಿ 57.1ಮಿ.ಮೀ., ಕುಂದಾಪುರದಲ್ಲಿ 74.7ಮಿ.ಮೀ. ಹಾಗೂ ಕಾರ್ಕಳದಲ್ಲಿ 38.5ಮಿ.ಮೀ. ಮಳೆಯಾಗಿದೆ. ಈ ದಿನದಂದು ಜಿಲ್ಲೆಯ ಸಾಮಾನ್ಯ ಮಳೆ 14.5ಮಿ.ಮೀ ಆಗಿದೆ.

ನಿನ್ನೆ ಗಾಳಿ-ಮಳೆಯೊಂದಿಗೆ ಸಿಡಿಲು ಬಡಿದು ಬ್ರಹ್ಮಾವರ ತಾಲೂಕು ಬಾಳ್ಕುದ್ರು ಗ್ರಾಮದ ಅಮಾಣಿ ಪೂಜಾರ್ತಿ ಮನೆಗೆ ಸಿಡಿಲು ಬಡಿದು ಭಾಗಶ: ಹಾನಿಯಾಗಿದ್ದು 30,000 ರೂ.ನಷ್ಟವಾಗಿದೆ. ಅದೇ ರೀತಿ ಕುಂದಾಪುರ ತಾಲೂಕು ಹೆಂಗವಳ್ಳಿ ಗ್ರಾಮದ ಸಂತೋಷ ಶೆಟ್ಟಿಯವರ ಮನೆಯ ಕೊಟ್ಟಿಗೆಗೆ ಸಿಡಿಲು ಬಡಿದು ಅಲ್ಲಿದ್ದ ಎರಡು ದನ ಹಾಗೂ ಒಂದು ಕರು ಅಸುನೀಗಿದೆ. ನಷ್ಟದ ಪ್ರಮಾಣ ಒಂದು ಲಕ್ಷ ರೂ.ಎಂದು ಅಂದಾಜಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News