ಕೇಂದ್ರೀಯ ಸಶಸ್ತ್ರ ಪಡೆ ಕ್ಯಾಂಟೀನ್ ಗಳಲ್ಲಿ ಆಮದು ಉತ್ಪನ್ನಗಳಿಗೆ ಹೇರಿದ್ದ ನಿಷೇಧ ಹಿಂಪಡೆದ ಕೇಂದ್ರ ಸರಕಾರ

Update: 2020-06-01 17:08 GMT

ಹೊಸದಿಲ್ಲಿ,ಜೂ.1: ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆ (ಸಿಎಪಿಎಫ್) ಅಥವಾ ಅರೆ ಮಿಲಿಟರಿ ಪಡೆಗಳ ಕ್ಯಾಂಟೀನ್‌ಗಳಲ್ಲಿ ಜೂನ್ 1ರಿಂದ 1,026 ಆಮದು ಉತ್ಪನ್ನಗಳ ಮಾರಾಟವನ್ನು ನಿಷೇಧಿಸಿ ತಾನು ಹೊರಡಿಸಿದ್ದ ಆದೇಶವನ್ನು ಹಿಂಪಡೆದಿರುವುದಾಗಿ ಕೇಂದ್ರ ಸರಕಾರವು ಸೋಮವಾರ ಸ್ಪಷ್ಟಪಡಿಸಿದೆ. ಈ ಆಮದು ಉತ್ಪನ್ನಗಳ ಪಟ್ಟಿಯಲ್ಲಿ ಭಾರತೀಯ ಕಂಪನಿಗಳು ತಯಾರಿಸುತ್ತಿರುವ ಹಲವಾರು ಉತ್ಪನ್ನಗಳೂ ಸೇರ್ಪಡೆಗೊಂಡಿದ್ದವು.

ಗೃಹ ಸಚಿವಾಲಯದ ಅಧೀನದಲ್ಲಿರುವ ಕೇಂದ್ರೀಯ ಪೊಲೀಸ್ ಕಲ್ಯಾಣ ಭಂಡಾರ ಅಥವಾ ಸೆಂಟ್ರಲ್ ಪೊಲೀಸ್ ಕ್ಯಾಂಟೀನ್ ಮೇ 29ರಂದು ಹೊರಡಿಸಿದ್ದ ಆದೇಶದಲ್ಲಿ 1,026 ಉತ್ಪನ್ನಗಳನ್ನು ಮಾರಾಟದ ಪಟ್ಟಿಯಿಂದ ತೆಗೆಯಲಾಗಿತ್ತು.

ಮುಖ್ಯ ಕಾರ್ಯನಿರ್ವಹಣಾಧಿಕಾರಿಯ ಮಟ್ಟದಲ್ಲಿ ಹೊರಡಿಸಲಾದ ನಿಷೇಧಿತ ಉತ್ಪನ್ನಗಳ ಪಟ್ಟಿಯು ತಪ್ಪುಗಳಿಂದ ಕೂಡಿದ್ದು ಇದನ್ನು ಹಿಂದೆಗೆದುಕೊಳ್ಳಲಾಗಿದೆ ಮತ್ತು ಈ ತಪ್ಪಿಗಾಗಿ ಕ್ರಮವನ್ನು ಆರಂಭಿಸಲಾಗಿದೆ ಎಂದು ಸಿಆರ್‌ಪಿಎಫ್‌ನ ಮಹಾ ನಿರ್ದೇಶಕ ಎ.ಪಿ.ಮಹೇಶ್ವರಿ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News