×
Ad

ರೋಶನಿ ನಿಲಯದಲ್ಲಿ ಡಾ.ಒಲಿಂಡಾ ಅಂತ್ಯಸಂಸ್ಕಾರ

Update: 2020-06-01 22:37 IST

ಮಂಗಳೂರು, ಜೂ.1: ರೋಶನಿ ನಿಲಯದ ಸ್ಕೂಲ್ ಆಫ್ ಸೋಶಿಯಲ್ ವರ್ಕ್ಸ್‌ನ ಮಾಜಿ ಪ್ರಾಂಶುಪಾಲೆ, ಸಮಾಜ ಸೇವಕಿ ಡಾ.ಒಲಿಂಡಾ ಪಿರೇರ ಅಂತ್ಯಸಂಸ್ಕಾರವು ರೋಶನಿ ನಿಲಯದ ದಫನ್ ಭೂಮಿಯಲ್ಲಿ ಸೋಮವಾರ ಮಧ್ಯಾಹ್ನ ನೆರವೇರಿತು.

ರೋಶನಿ ನಿಲಯದ ಸಭಾಂಗಣದಲ್ಲಿ ಮೇ 31ರಂದು ಸಂಜೆ 7ರವರೆಗೆ ಮೃತರ ಅಂತಿಮ ದರ್ಶನಕ್ಕಾಗಿ ಅವಕಾಶ ಕಲ್ಪಿಸಲಾಗಿತ್ತು. ಅಲ್ಲದೆ, ಮರುದಿನವಾದ ಸೋಮವಾರವೂ ಮಧ್ಯಾಹ್ನದವರೆಗೆ ಗಣ್ಯರು ಅಂತಿಮದರ್ಶನ ಪಡೆದರು. ಈ ಸಂದರ್ಭ ಶಾಸಕ ಯು.ಟಿ. ಖಾದರ್, ಮಾಜಿ ಶಾಸಕ ಜೆ.ಆರ್. ಲೋಬೊ, ಸ್ಥಳೀಯ ಮನಪಾ ಸದಸ್ಯರು, ರೋಶನಿ ನಿಲಯ ಸಂಸ್ಥೆಯ ಮುಖ್ಯಸ್ಥರು ಮತ್ತಿತರ ಗಣ್ಯರು ಅಂತಿಮ ದರ್ಶನ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News