ಉಡುಪಿಯ ಪೊಲೀಸ್ ವಸತಿಗೃಹ ಸಹಿತ 14 ಪ್ರದೇಶ ಸೀಲ್‌ಡೌನ್

Update: 2020-06-01 17:09 GMT

ಉಡುಪಿ, ಜೂ.1: ಕೊರೋನ ಪಾಸಿಟಿವ್ ಪ್ರಕರಣಕ್ಕೆ ಸಂಬಂಧಿಸಿ ಇಂದು ಉಡುಪಿ ನಗರದಲ್ಲಿರುವ ಪೊಲೀಸ್ ಅಧಿಕಾರಿಗಳ ವಸತಿ ಗೃಹ ಸಹಿತ ಜಿಲ್ಲೆ ಯಾದ್ಯಂತ ಒಟ್ಟು 14 ಪ್ರದೇಶಗಳನ್ನು ಸೀಲ್‌ಡೌನ್ ಮಾಡಲಾಗಿದೆ. ಕಳೆದ ಐದು ದಿನಗಳಲ್ಲಿ ಜಿಲ್ಲೆಯಲ್ಲಿ ಒಟ್ಟು 41 ಗ್ರಾಮಗಳಲ್ಲಿ ಕಂಟೇನ್ಮೆಂಟ್ ವಲಯವನ್ನು ಘೋಷಿಸಲಾಗಿದೆ.

ಉಡುಪಿ ತಾಲೂಕಿನಲ್ಲಿ ಸೋಂಕಿತ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಡಿವೈಎಸ್ಪಿ ವಾಸವಾಗಿರುವ ಉಡುಪಿ ನಗರದ 6 ಮನೆಗಳಿರುವ ಒಂದು ವಸತಿ ಗೃಹವನ್ನು ಕಂಟೇನ್‌ಮೆಂಟ್ ವಲಯವಾಗಿ ಘೋಷಿಸಲಾಗಿದೆ ಅದೇ ರೀತಿ ಪುತ್ತೂರು ಗ್ರಾಮದ ಸುಬ್ರಹ್ಮಣ್ಯ ನಗರದಲ್ಲಿರುವ ಎರಡು ಪ್ರತ್ಯೇಕ ಮನೆಗಳನ್ನು ಕಂಟೇನ್‌ಮೆಂಟ್ ಮತ್ತು ಇಡೀ ಪುತ್ತೂರು ಗ್ರಾಮವನ್ನು ಬಫರ್ ರೆನ್ ಆಗಿ ಘೋಷಣೆ ಮಾಡಲಾಗಿದೆ.

 ಬೈಂದೂರು ತಾಲೂಕಿನ ಕಿರಿಮಂಜೇಶ್ವರ, ಬೀಜೂರು, ಪಡುವರಿ, ಯಡ್ತರೆ ಹಾಗೂ ನಾಡ ಗ್ರಾಮದಲ್ಲಿರುವ ನಿರ್ದಿಷ್ಟ ಪ್ರದೇಶವನ್ನು ಕಂಟೇನ್ ‌ಮೆಂಟ್ ರೆನ್ ಆಗಿ ಘೋಷಿಸಿ, ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ನಾಡ ಗ್ರಾಮದ ಒಂದೇ ಮನೆಯ ನಾಲ್ವರಲ್ಲಿ ಕೊರೋನ ಪಾಸಿಟಿವ್ ಬಂದಿ ರುವ ಬಗ್ಗೆ ವರದಿಯಾಗಿದೆ.

ಕುಂದಾಪುರ ತಾಲೂಕಿನ ಹರ್ಕೂರು ಗ್ರಾಮದ ಒಂದೇ ಮನೆಯಲ್ಲಿ ಐವರಿಗೆ ಕೊರೋನ ಪಾಸಿಟಿವ್ ಬಂದಿರುವುದರಿಂದ ಆ ಪ್ರದೇಶವನ್ನು ಕಂಟೇನ್ ಮೆಂಟ್ ರೆನ್ ಆಗಿ ಮಾಡಲಾಗಿದೆ. ಕುಂದಾಪುರ ಮತ್ತು ಬೈಂದೂರು ತಾಲೂಕಿನಲ್ಲಿ ಒಂದೇ ದಿನ 15 ಪ್ರಕರಣಗಳು ಪತ್ತೆಯಾಗಿವೆ. ಕಳೆದ ಮೂರು ದಿನಗಳಲ್ಲಿ ಈ ಎರಡು ತಾಲೂಕಿನ 12 ಗ್ರಾವುಗಳನ್ನು ಸೀಲ್‌ಡೌನ್ ಮಾಡ ಲಾಗಿದೆ.

ಬ್ರಹ್ಮಾವರ ತಾಲೂಕಿನಲ್ಲಿ ಶಂಕರನಾರಾಯಣ ಪೊಲೀಸ್ ಸಿಬ್ಬಂದಿ ವಾಸ ವಾಗಿರುವ ಕೋಟ ಮತ್ತು ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಸಿಬ್ಬಂದಿ ವಾಸ ವಾಗಿರುವ ಹೇರೂರು ಗ್ರಾಮವನ್ನು ಕಂಟೇನ್‌ಮೆಂಟ್ ರೆನ್ ಆಗಿ ಘೋಷಿಸಲಾಗಿದೆ. ಕಾರ್ಕಳ ತಾಲೂಕಿನ ನಲ್ಲೂರು ಮತ್ತು ಎರ್ಲಪಾಡಿ ಗ್ರಾಮದ ನಿಗದಿತ ಪ್ರದೇಶವನ್ನು ಸೀಲ್‌ಡೌನ್ ಮಾಡಿ, ಸಾರ್ವಜನಿಕರ ಸಂಚಾರ ನಿರ್ಬಂಧಿಸಿ, ಕ್ರಮ ತೆಗೆದುಕೊಳ್ಳಲಾಗಿದೆ.

ಕಾಪು ತಾಲೂಕಿನ ಪಡುಬಿದ್ರಿ ಸಮೀಪದ ಪಡುಹಿತ್ಲು ಮನೆಯಲ್ಲಿದ್ದ ಒಂದೇ ಕುಟುಂಬದ ನಾಲ್ವರಲ್ಲಿ ಕೊರೋನ ಪಾಸಿಟಿವ್ ಧೃಡಪಟ್ಟ ಹಿನ್ನೆಲೆಯಲ್ಲಿ ಆ ಪ್ರದೇಶವನ್ನು ಕಂಟೇನ್‌ಮೆಂಟ್ ವಲಯವನ್ನಾಗಿ ಘೋಷಿಸಲಾಗಿದೆ. ಸ್ಥಳಕ್ಕೆ ಕಾಪು ತಹಶೀಲ್ದಾರ್ ಮಹಮ್ಮದ್ ಇಸ್ಹಾಕ್, ಪಡುಬಿದ್ರಿ ಪಿಎಸ್‌ಐ ಸುಬ್ಬಣ್ಣ, ಪಡುಬಿದ್ರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಬಿ.ಬಿ. ರಾವ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News