×
Ad

ಸಿಬ್ಬಂದಿಗೆ ಕೊರೋನ: ಶಂಕರನಾರಾಯಣ ಠಾಣೆ ಸ್ಯಾನಿಟೈಸ್

Update: 2020-06-01 22:42 IST

ಕುಂದಾಪುರ, ಜೂ.1: ಶಂಕರನಾರಾಯಣ ಪೊಲೀಸ್ ಠಾಣೆಯ ಮಹಿಳಾ ಸಿಬ್ಬಂದಿಯೊಬ್ಬರಿಗೆ ಕೊರೋನ ಪಾಸಿಟಿವ್ ಬಂದಿರುವ ಹಿನ್ನೆಲೆಯಲ್ಲಿ ಇಂದು ಇಡೀ ಠಾಣೆಯನ್ನು ಸ್ಯಾನಟೈಸ್ ಮಾಡಲಾಗಿದೆ.

ಸದ್ಯ ಸಿಬ್ಬಂದಿಯನ್ನು ಕುಂದಾಪುರ ಸರಕಾರಿ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಗಾಗಿ ದಾಖಲಿಸಲಾಗಿದೆ. ಈ ಪ್ರಕರಣ ಸಂಶಯಾಸ್ಮಾದವಾಗಿರು ವುದರಿಂದ ಅವರ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗಾಗಿ ಮತ್ತೊಮ್ಮೆ ಲ್ಯಾಬ್‌ಗೆ ಕಳುಹಿಸಲಾಗಿದೆ. ಈ ಮಧ್ಯೆ ಇಂದು ಬೆಳಗ್ಗೆ ಠಾಣೆ ಯನ್ನು ಸ್ಯಾನಟೈಸ್ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಠಾಣೆಯನ್ನು ತಾತ್ಕಾಲಿಕ ವಾಗಿ ಶಂಕರನಾರಾ ಯಣ ಕಾಲೇಜಿಗೆ ಸ್ಥಳಾಂತರ ಮಾಡಲಾಗಿದೆ.

‘ಸರಕಾರದ ಮಾರ್ಗಸೂಚಿ ಪ್ರಕಾರ 48 ಗಂಟೆಗಳಲ್ಲಿ ಎರಡು ಬಾರಿ ಸ್ಯಾನ ಟೈಸ್ ಮಾಡಬೇಕಾಗುತ್ತದೆ. ಅದರಂತೆ ನಾಳೆ ಸಂಜೆ ಕೂಡ ಸ್ಯಾನಿಟೈಸ್ ಮಾಡ ಲಾಗುವುದು. ಜೂ.3ರಿಂದ ಠಾಣೆ ಮತ್ತೆ ಕಾರ್ಯಾರಂಭ ಮಾಡಲಿದೆ. ಸಿಬ್ಬಂದಿ ಮತ್ತೊಮ್ಮೆ ಕಳುಹಿಸಲಾದ ಸ್ವಾಬ್‌ನ ವರದಿಯು ರಾತ್ರಿ ಅಥವಾ ನಾಳೆ ಬೆಳಗ್ಗೆ ಬರುವ ಸಾಧ್ಯತೆ ಇದೆ’ ಎಂದು ಕುಂದಾಪುರ ಸಹಾಯಕ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News