ಕಾಸರಗೋಡು: ಇಂದು 9 ಮಂದಿಗೆ ಕೋವಿಡ್ ಪಾಸಿಟಿವ್

Update: 2020-06-02 13:49 GMT

ಕಾಸರಗೋಡು : ಜಿಲ್ಲೆಯಲ್ಲಿ ಮಂಗಳವಾರ 9 ಮಂದಿಗೆ ಕೋವಿಡ್ ಸೋಂಕು ಖಚಿತಗೊಂಡಿದೆ. 7 ಮಂದಿಗೆ ರೋಗಮುಕ್ತಿಯಾಗಿದೆ.

ಸೋಂಕು ತಗುಲಿದವರಲ್ಲಿ ಒಬ್ಬರಿಗೆ ಸಂಪರ್ಕದಿಂದ, ಮಹಾರಾಷ್ಟ್ರ ದಿಂದ ಬಂದ 4 ಮಂದಿ, ವಿದೇಶಗಳಿಂದ ಆಗಮಿಸಿದ 3 ಮಂದಿ, ಚೆನೈ ಯಿಂದ ಬಂದ ಒಬ್ಬರಿಗೆ ಸೋಂಕು ಖಚಿತವಾಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು.

ಮಹಾರಾಷ್ಟ್ರದಿಂದ ಬಂದವರು ಪುತ್ತಿಗೆ ಗ್ರಾಮ ಪಂಚಾಯತ್ ನಿವಾಸಿ 62 ವರ್ಷದ ವ್ಯಕ್ತಿ, ಪಡನ್ನ ಗ್ರಾಮ ಪಂಚಾಯತ್ ನಿವಾಸಿ 60 ವರ್ಷದ ನಿವಾಸಿ, ಕುಂಬಡಾಜೆ ಗ್ರಾಮ ಪಂಚಾಯತ್ ನ 41 ವರ್ಷದ ನಿವಾಸಿ, ಕುಂಬಳೆ ಗ್ರಾಮ ಪಂಚಾಯತ್ ನಿವಾಸಿ 32 ವರ್ಷದ ವ್ಯಕ್ತಿಗೆ ರೋಗ ಖಚಿತವಾಗಿದೆ.

ವಿದೇಶದಿಂದ ಬಂದವರು ಕುವೈತ್ ನಿಂದ ಆಗಮಿಸಿದ್ದ ಕುಂಬಳೆ ಗ್ರಾಮ ಪಂಚಾಯತ್ ನಿವಾಸಿ 43 ವರ್ಷದ ವ್ಯಕ್ತಿ, ಅಜಾನೂನು ನಿವಾಸಿ 47 ವರ್ಷದ ವ್ಯಕ್ತಿ, 7 ವರ್ಷದ ಈತನ ಪುತ್ರನಿಗೆ ರೋಗ ಬಾಧಿಸಿದೆ. ಚೆನ್ನೈಯಿಂದ ಆಗಮಿಸಿದವರು ಚೆನ್ನೈಯಿಂದ ಆಗಮಿಸಿದ್ದ ಪಳ್ಳಿಕ್ಕರೆ ಗ್ರಾಮ ಪಂಚಾಯತ್ ನಿವಾಸಿ 20 ವರ್ಷದ ವ್ಯಕ್ತಿ, ಕಿನಾನೂರು-ಕರಿಂದಳಂ ನಿವಾಸಿ 28 ವರ್ಷದ ವ್ಯಕ್ತಿಗೆ ಸಂಪರ್ಕ ದಿಂದ ರೋಗ ಹರಡಿದೆ.

7 ಮಂದಿಗೆ ರೋಗಮುಕ್ತಿ

ಉಕ್ಕಿನಡ್ಕ ಕಾಸರಗೋಡು ಮೆಡಿಕಲ್ ಕಾಲೇಜಿನಲ್ಲಿ ದಾಖಲಾಗಿದ್ದ ಕೋವಿಡ್ ಸೋಂಕು ಖಚಿತಗೊಂಡಿದ್ದ 7 ಮಂದಿ ರೋಗದಿಂದ ಗುಣಮುಖ ರಾಗಿ ಬಿಡುಗಡೆಗೊಂಡಿದ್ದಾರೆ. ಪೈವಳಿಕೆ ಗ್ರಾಮ ಪಂಚಾಯತ್ ನಿವಾಸಿಗಳಾದ 28, 44, 47 ವರ್ಷದ ವ್ಯಕ್ತಿಗಳು, ಕುಂಬಳೆ ಗ್ರಾಮ ಪಂಚಾಯತ್ ನಿವಾಸಿಗಳಾದ 41, 47, 30 ವರ್ಷದ ವ್ಯಕ್ತಿಗಳು, ಮಂಗಲ್ಪಾಡಿ ನಿವಾಸಿ 32 ವರ್ಷದ ವ್ಯಕ್ತಿ ಗುಣಮುಖರಾದವರು.

ಜಿಲ್ಲೆಯಲ್ಲಿ 3876 ಮಂದಿ ನಿಗಾದಲ್ಲಿದ್ದಾರೆ. ಮನೆಗಳಲ್ಲಿ 3221 ಮಂದಿ, ಆಸ್ಪತ್ರೆಗಳಲ್ಲಿ 655 ಮಂದಿ ನಿಗಾದಲ್ಲಿದ್ದಾರೆ. 13 ಮಂದಿ ಮಂಗಳವಾರ ನೂತನವಾಗಿ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ. 461 ಮಂದಿಯ ಸ್ಯಾಂಪಲ್ ತಪಾಸಣೆ ಫಲಿತಾಂಶ ಲಭಿಸಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News