ವಿಶ್ವ ತಂಬಾಕು ರಹಿತ ದಿನ-2020 : ‘ತಂಬಾಕು ನಿಮ್ಮ ಬದುಕನ್ನು ದಹಿಸದಿರಲಿ’

Update: 2020-06-02 14:10 GMT

ಉಡುಪಿ, ಜೂ.2: ವಿಶ್ವ ತಂಬಾಕು ರಹಿತ ದಿನದ ಅಂಗವಾಗಿ ಮಣಿಪಾಲ ಕೆಎಂಸಿಯ ಸಮುದಾಯ ವೈದ್ಯಕೀಯ ವಿಭಾಗದ ಆಶ್ರಯದಲ್ಲಿ ಕಲಾವಿದ ಶ್ರೀನಾಥ್ ಮಣಿಪಾಲ್ ಇವರು ಜನರಲ್ಲಿ ತಂಬಾಕಿನ ಬಗ್ಗೆಜಾಗೃತಿ ಮೂಡಿಸುವ ವಿಶಿಷ್ಟ ಕಲಾಕೃತಿಯನ್ನು ರಚಿಸಿ ಪ್ರದರ್ಶನಕಿಟ್ಟಿದ್ದಾರೆ.

ಸಮುದಾಯ ವೈದ್ಯಕೀಯ ವಿಭಾಗದ ಮುಖ್ಯಸ್ಥೆ ಡಾ.ಸುಮ ನಾಯರ್ ಈ ಕಲಾಕೃತಿಯನ್ನು ಕೆಎಂಸಿ ಆವರಣದಲ್ಲಿ ಸುರಕ್ಷತಾ ಅಂತರದೊಂದಿಗೆ ಅನಾವರಣ ಗೊಳಿಸಿದರು. ಈ ಸಂದರ್ಭದಲ್ಲಿ ಡಾ.ವೀಣಾ ಕಾಮತ್, ಡಾ.ಮುರಲಿಧರ್ ಕುಲಕರ್ಣಿ, ಡಾ. ರಂಜಿತಾ ಶೆಟ್ಟಿ, ಡಾ.ಚೈತ್ರಾ ರಾವ್, ಡಾ.ಸ್ನೇಹ ಡಿ. ಮಲ್ಯ, ಡಾ.ಈಶ್ವರಿ ಮುಂತಾದವರು ಉಪಸ್ಥಿತರಿದ್ದರು.

ಈ ಕಲಾಕೃತಿಯಲ್ಲಿ ಯುವ ಜನತೆ ತಂಬಾಕಿನ ಚಟಕ್ಕೆ ಯಾವ ರೀತಿ ಬಲಿಯಾಗುತ್ತಿದ್ದಾರೆ ಎಂದು ವಿಶಿಷ್ಟವಾಗಿ ಬಿಂಬಿಸಲಾಗಿದೆ. ಕಲಾಕೃತಿಯು ಸಾರ್ವಜನಿಕರ ವೀಕ್ಷಣೆಗೆ ಲಭ್ಯವಿದ್ದು, ಸುರಕ್ಷತಾ ಅಂತರವನ್ನು ಕಾಪಾಡಿಕೊಂಡು ಇದನ್ನು ವೀಕ್ಷಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News