ಪರ್ಕಳ: ದ್ವಿಚಕ್ರ ಸವಾರರಿಗೆ ಮಾರಕವಾದ ರಾ.ಹೆದ್ದಾರಿ ಕಾಮಗಾರಿ

Update: 2020-06-02 14:39 GMT

ಪರ್ಕಳ, ಜೂ.2: ಉಡುಪಿಯಿಂದ ಪರ್ಕಳವರೆಗಿನ ರಾಷ್ಟ್ರೀಯ ಹೆದ್ದಾರಿ 169ಎಯ ಚತುಷ್ಪಥ ಕಾಮಗಾರಿ ಕುಂಟುತ್ತಾ ಸಾಗಿದ್ದು, ಅಲ್ಲಲ್ಲಿ ವಿವಿಧ ರೀತಿಯ ಅನಾಹುತಗಳಿಗೆ ಎಡೆ ಮಾಡಿಕೊಡುತ್ತಿದೆ. ಮಣಿಪಾಲದಲ್ಲಿ ಹೆದ್ದಾರಿ ಬದಿಯಲ್ಲಿ ತೋಡಿರುವ ಕಾಲುವೆಯು ತೆರೆದುಕೊಂಡೇ ಇದ್ದು ಮಳೆಗಾಲದಲ್ಲಿ ಜೀವ ಬಲಿಗಾಗಿ ಕಾಯುವಂತಿದೆ.

ಇನ್ನು ಪರ್ಕಳದಲ್ಲಿ ಕೆನರಾ (ಸಿಂಡಿಕೇಟ್) ಬ್ಯಾಂಕ್‌ನ ಮುಂಭಾಗದ ಇಳಿಜಾರಿನ ಆರಂಭದಲ್ಲಿ ಹಾಗೂ ತಿರುವಿನಲ್ಲಿ ಸುಮಾರು ನೂರೈವತ್ತು ಮೀಟರ್ ಉದ್ದದ ರಸ್ತೆಯ ಒಂದು ಪಕ್ಕವನ್ನು ಮಣ್ಣು ತುಂಬಿಸಿ ಎತ್ತರಿಸಲಾಗಿದೆ. ಹಳೆಯ ಟಾರ್ ರಸ್ತೆಯ ಅವಶೇಷ ಮಾತ್ರ ಈಗ ಉಳಿದಿದ್ದು, ಉಳಿದ ಭಾಗವು ಮಣ್ಣಿನ ಕೊಚ್ಚೆಯಿಂದ ಕೂಡಿದೆ.

ಈಗ ಸುರಿಯುತ್ತಿರುವ ಮಳೆಯಲ್ಲಿ ಮಣಿಪಾಲದ ಕಡೆ ಸಾಗುವ ವಾಹನ ಸವಾರರು ಮಣ್ಣಿನ ಕೆಸರು ಕೊಚ್ಚೆಯಲ್ಲಿ ಸಾಗುವುದು ಅನಿವಾರ್ಯ ವಾಗಿದ್ದು, ಕೆಳಹಂತದಲ್ಲಿ ಮುಖ್ಯ ರಸ್ತೆಗೆ ಏರಬೇಕಾಗಿರುತ್ತದೆ. ಈ ಕೂಡು ಸ್ಥಳದ ಅಂಚು ಹೊಂಡ ಮತ್ತು ಕೆಸರುಮಯವಾಗಿದ್ದು, ಎಷ್ಟೇ ಎಚ್ಚರಿಕೆಯಿಂದ ಬಂದರೂ ದ್ವಿಚಕ್ರ ಸವಾರರು ರಸ್ತೆಗೆ ಅ್ಪಳಿಸಿ ಬೀಳಲೇಬೇಕಾದ ಪರಿಸ್ಥಿತಿ ಇದೆ.

ಈಗ ಸುರಿಯುತ್ತಿರುವ ಮಳೆಯಲ್ಲಿ ಮಣಿಪಾಲದ ಕಡೆ ಸಾಗುವ ವಾಹನ ಸವಾರರು ಮಣ್ಣಿನ ಕೆಸರು ಕೊಚ್ಚೆಯಲ್ಲಿ ಸಾಗುವುದು ಅನಿವಾರ್ಯ ವಾಗಿದ್ದು, ಕೆಳಹಂತದಲ್ಲಿ ಮುಖ್ಯ ರಸ್ತೆಗೆ ಏರಬೇಕಾಗಿರುತ್ತದೆ. ಈ ಕೂಡು ಸ್ಥಳದ ಅಂಚು ಹೊಂಡ ಮತ್ತು ಕೆಸರುಮಯವಾಗಿದ್ದು, ಎಷ್ಟೇ ಎಚ್ಚರಿಕೆ ಯಿಂದ ಬಂದರೂ ದ್ವಿಚಕ್ರ ಸವಾರರು ರಸ್ತೆಗೆ ಅಪ್ಪಳಿಸಿ ಬೀಳಲೇಬೇಕಾದ ಪರಿಸ್ಥಿತಿ ಇದೆ. ನಿನ್ನೆ ಸಂಜೆ ಸುರಿದ ಭಾರೀ ಮಳೆಯ ಕಾರಣ ನೂರಾರು ದ್ವಿಚಕ್ರ ಸವಾರರು ಸರತಿ ಸಾಲಿನಲ್ಲಿ ಎಂಬಂತೆ ರಸ್ತೆಗೆ ಜಾರಿ ಬಿದ್ದು, ಕೈಕಾಲು, ಬೆನ್ನಿಗೆ ಗಾಯ ಮಾಡಿಕೊಂಡಿದ್ದಾರೆ.

ಅನಿವಾರ್ಯವಾಗಿ ಮೈತುಂಬಾ ಕೆಸರುಮಣ್ಣು, ನೋವನ್ನು ಮೆತ್ತಿಸಿಕೊಂಡು ಮುಂದೆ ಸಾಗಿದ್ದಾರೆ. ಸವಾರರೆಲ್ಲ ಹೆಲ್ಮೆಟ್‌ಧಾರಿಗಳಾಗಿದ್ದರಿಂದ ಯಾರೊಬ್ಬರ ಜೀವಹಾನಿ ಸಂಭಸಿಲ್ಲ. ಇಲ್ಲಿ ಅಟೋರಿಕ್ಷಾ, ಕಾರು ಮುಂತಾದ ವಾಹನಗಳೂ ರಸ್ತೆಗೇರಲು ಪ್ರಯಾಸ ಪಡಬೇಕಾದ ಸ್ಥಿತಿ ಇದೆ.

ಮುಂದಿನ ದಿನಗಳಲ್ಲಿ ಮುಂಗಾರು ಪ್ರಬಲವಾಗುವ ಸಂದರ್ಭದಲ್ಲಿ ಈ ಜಾಗ ಇನ್ನಷ್ಟು ಅನಾಹುತಗಳಿಗೆ ಕಾರಣವಾಗಲಿದ್ದು, ಎತ್ತರಿಸಿದ ಮಣ್ಣಿನ ರಾಶಿ ರಸ್ತೆಯಲ್ಲಿ ಕೊಚ್ಚಿಕೊಂಡು ಹೋಗುವ ಸ್ಥಿತಿಯೂ ಇದೆ. ಇಲ್ಲಿ ಡಾಮರು ಹಾಕಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಈ ವಿಷಯವನ್ನು ರಾಷ್ಟ್ರೀಯ ಹೆದ್ದಾರಿಯ ಅಧಿಕಾರಿಗಳ ಗಮನಕ್ಕೆ ತಂದಾಗ, ಇಂದು ಮಳೆಬಿಟ್ಟ ಕಾರಣ ತೇಪೆ ಹೆಚ್ಚುವ ರೀತಿ ದುರಸ್ಥಿ ಮಾಡಿ ದ್ದಾರೆ. ಆದರೆ ಮತ್ತೆ ಮಳೆಸುರಿದರೆ ನಿನ್ನೆಯ ಸ್ಥಿತಿ ಮರುಕಳಿಸಬಹುದು. ಹೀಗಾಗಿ ಮಳೆಗಾಲದಲ್ಲಿ ಸುಗಮ ಸಂಚಾರಕ್ಕೆ ಕೂಡಲೇ ಶಾಶ್ವತ ಪರಿಹಾರ ನೀಡಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News