ಚೀನಾದಿಂದ ಗಡಿಯಲ್ಲಿ ಭಾರೀ ಸಂಖ್ಯೆಯಲ್ಲಿ ಸೈನಿಕರ ನಿಯೋಜನೆ: ರಾಜನಾಥ ಸಿಂಗ್

Update: 2020-06-02 16:34 GMT

ಹೊಸದಿಲ್ಲಿ, ಜೂ.2: ಚೀನಾ ವಾಸ್ತವ ನಿಯಂತ್ರಣ ರೇಖೆ(ಎಲ್‌ಎಸಿ)ಗೆ ಭಾರೀ ಸಂಖ್ಯೆಯ ಸೈನಿಕರನ್ನು ರವಾನಿಸಿದೆ ಎನ್ನುವುದನ್ನು ಮಂಗಳವಾರ ಇಲ್ಲಿ ಒಪ್ಪಿಕೊಂಡ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು,ರಾಜತಾಂತ್ರಿಕ ಮತ್ತು ಮಿಲಿಟರಿ ಮಟ್ಟದ ಮಾತುಕತೆಗಳ ಮೂಲಕ ಬಿಕ್ಕಟ್ಟನ್ನು ಬಗೆಹರಿಸುವ ಆಶಯವನ್ನು ಭಾರತವು ಹೊಂದಿದೆ ಎಂದು ಹೇಳಿದರು.

 ಜೂ.6ರಂದು ಭಾರತ ಮತ್ತು ಚೀನಾ ಮಿಲಿಟರಿ ನಾಯಕರ ನಡುವೆ ಸಭೆ ನಡೆಯಲಿದೆ ಎಂದ ಅವರು, ಬಿಕ್ಕಟ್ಟು ಶಾಂತಿಯುತವಾಗಿ ಬಗೆಹರಿಯುವ ವಿಶ್ವಾಸವನ್ನು ವ್ಯಕ್ತಪಡಿಸಿದರು.

ಆಂಗ್ಲ ಸುದ್ದಿವಾಹಿನಿಯೊಂದಿಗೆ ಮಾತನಾಡುತ್ತಿದ್ದ ಸಿಂಗ್, 2017ರ 73 ದಿನಗಳ ಡೋಕ್ಲಾಂ ಬಿಕ್ಕಟ್ಟನ್ನು ಪ್ರಸ್ತಾಪಿಸಿ,ಇಂತಹುದು ಈ ಹಿಂದೆಯೂ ನಡದಿತ್ತು ಮತ್ತು ಪರಿಹಾರವನ್ನು ಕಂಡುಕೊಳ್ಳಲಾಗಿತ್ತು ಎಂದರು.

 ಕೊರೋನ ವೈರಸ್ ಪಿಡುಗಿನ ನಡುವೆ ಉತ್ತರ ಲಡಾಖ್‌ನ ಎಲ್‌ಎಸಿಯಲ್ಲಿ ಚೀನಾದ ಕ್ರಮಗಳಿಗೆ ಯಾವುದೇ ಉದ್ದೇಶವನ್ನು ವ್ಯಾಖ್ಯಾನಿಸಲು ನಿರಾಕರಿಸಿದ ಸಿಂಗ್,ಮಾತುಕತೆಗಳು ಈಗಾಗಲೇ ಪ್ರಗತಿಯಲ್ಲಿರುವಾಗ ಊಹಾಪೋಹಗಳು ಅಥವಾ ಶಂಕೆಗಳನ್ನು ವ್ಯಕ್ತಪಡಿಸುವುದು ತಪ್ಪಾಗುತ್ತದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News