×
Ad

ಶಂಕರನಾರಾಯಣ ಠಾಣೆ ಸಿಬ್ಬಂದಿಯ ಎರಡನೆ ವರದಿ ನೆಗೆಟಿವ್

Update: 2020-06-02 22:53 IST

ಕುಂದಾಪುರ, ಜೂ. 2: ಶಂಕರನಾರಾಯಣ ಪೊಲೀಸ್ ಠಾಣೆಯ ಮಹಿಳಾ ಸಿಬ್ಬಂದಿಯ ಎರಡನೆ ಕೊರೋನ ಪರೀಕ್ಷಾ ವರದಿಯು ಇಂದು ನೆಗೆಟಿವ್ ಎಂಬುದಾಗಿ ಬಂದಿದೆ.

ಮೊದಲ ವರದಿಯಲ್ಲಿ ಇವರಿಗೆ ಕೊರೋನ ಪಾಸಿಟಿವ್ ಎಂಬುದಾಗಿ ಬಂದಿತ್ತು. ಠಾಣೆಯೊಳಗೆ ಕರ್ತವ್ಯ ನಿರ್ವಹಿಸುವ ಇವರು, ಚೆಕ್‌ಪೋಸ್ಟ್ ಅಥವಾ ಠಾಣೆಯ ಹೊರಗಡೆ ಕರ್ತವ್ಯ ನಿರ್ವಹಿಸದ ಹಿನ್ನೆಲೆಯಲ್ಲಿ ಇದನ್ನು ಸಂಶಾಯಾಸ್ಮದ ಪ್ರಕರಣ ಎಂಬುದಾಗಿ ಪರಿಗಣಿಸಿ ಮತ್ತೊಮ್ಮೆ ಪರೀಕ್ಷೆಗೆ ಕಳುಹಿಸಲಾಗಿತ್ತು.

ಇದೀಗ ನೆಗೆಟಿವ್ ಬಂದಿರುವುದರಿಂದ ಉಡುಪಿ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಇವರನ್ನು ಇಂದು ರಾತ್ರಿ ಬಿಡುಗಡೆ ಮಾಡಲಾ ಗಿದೆ. ಮುಂದೆ ಅವರು ಮತ್ತು ಅವರ ಮನೆಯವರು 14 ದಿನಗಳ ಕಾಲ ಹೋಮ್ ಕ್ವಾರಂಟೇನ್‌ನಲ್ಲಿ ಇರಲಿದ್ದಾರೆ. ಈ ಮಧ್ಯೆ ಪೊಲೀಸ್ ಠಾಣೆ ಯನ್ನು ತಾತ್ಕಾಲಿಕ ವಾಗಿ ಸ್ಥಳಾಂತರ ಮಾಡಿ, ಸ್ಯಾನಿಟೈಸ್ ಮಾಡಲಾಗಿದೆ. ನಾಳೆಯಿಂದ ಠಾಣೆ ಮತ್ತೆ ಕಾರ್ಯಾರಂಭ ಮಾಡಲಿದೆ ಎಂದು ಕುಂದಾಪುರ ಸಹಾಯಕ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್ ತಿಳಿಸಿದ್ದಾರೆ.

ಹೆಬ್ರಿ ಪೊಲೀಸರು ಕರ್ತವ್ಯಕ್ಕೆ ಹಾಜರು

14 ದಿನಗಳ ಕ್ವಾರಂಟೇನ್ ಅವಧಿ ಮುಗಿದ ಹಿನ್ನೆಲೆಯಲ್ಲಿ ಹೆಬ್ರಿ ಎಸ್ಸೈ ಸೇರಿದಂತೆ ಎಲ್ಲ 30 ಮಂದಿ ಪೊಲೀಸರು ಜೂ.3ರಿಂದ ಠಾಣೆಗೆ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ.

ಅಜೆಕಾರು ಠಾಣೆಯ ಎಎಸ್ಸೈಗೆ ಪಾಸಿಟಿವ್ ಬಂದಿರುವ ಹಿನ್ನೆಲೆಯಲ್ಲಿ ಮತ್ತು ಅವರು ಹೆಬ್ರಿಯ ಪೊಲೀಸರು ಕರ್ತವ್ಯ ನಿರ್ವಹಿಸಿದ ಸೋಮೇಶ್ವರ ಚೆಕ್‌ಪೋಸ್ಟ್‌ನಲ್ಲಿ ಕರ್ತವ್ಯ ನಿರ್ವಹಿಸಿರುವುದರಿಂದ ಹೆಬ್ರಿ ಠಾಣೆಯ ಎಲ್ಲ ಪೊಲೀಸರನ್ನು 14 ದಿನಗಳ ಕಾಲ ಕ್ವಾರಂಟೇನ್‌ನಲ್ಲಿ ಇರಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News