ನಾಲ್ಕು ತಿಂಗಳಿಂದ ವಿತರಣೆಯಾಗದ ಮಾಸಾಶನ: ಜೆಡಿಎಸ್ ಆರೋಪ

Update: 2020-06-02 17:37 GMT

ಉಡುಪಿ, ಜೂ.2 ಜಿಲ್ಲೆಯಲ್ಲಿ ಸಾಮಾಜಿಕ ಭದ್ರತಾ ಯೋಜನೆಯ ಅನ್ವಯ ಅಂಗವಿಕಲರ, ವೃದ್ಧರ ವಿಧವೆಯರ ವೇತನ ,ಸಂಧ್ಯಾ ಸುರಕ್ಷಾ ಸಹಿತ ಸಾಮಾಜಿಕ ಭದ್ರತಾ ಯೋಜನೆಯಡಿ ನೀಡುವ ಮಾಸಾಶನಗಳು ಹಲವು ಫಲಾನುಭವಿ ಗಳಿಗೆ ಫೆಬ್ರವರಿ ತಿಂಗಳಿನಿಂದ ವಿತರಣೆಯಾಗಿಲ್ಲ ಎಂದು ಉಡುಪಿ ಜಿಲ್ಲಾ ಜೆಡಿಎಸ್ ದೂರಿದೆ.

ಜಿಲ್ಲೆಯಲ್ಲಿ ಸುಮಾರು 1,29,479ಕ್ಕೂ ಅಧಿಕ ಮಂದಿ ಮಾಸಾಶನದಿಂದ ಜೀವನ ನಿರ್ವಹಿಸುತ್ತಿದ್ದು, ಈ ಲಾಕ್‌ಡೌನ್ ಸಂದರ್ಭದಲ್ಲಿ ಕಷ್ಟದ ಬದುಕು ಸಾಗಿಸುತ್ತಿದ್ದಾರೆ. ಆದರೆ ಜನಪ್ರತಿನಿಧಿಗಳ ನಿರ್ಲಕ್ಷ್ಯ ಮತ್ತು ಸರಕಾರದ ವೈಫಲ್ಯ ದಿಂದಾಗಿ ಬಡ ಜನರು ಬವಣೆ ಪಡುವಂತಾಗಿದೆ. ಆದುದರಿಂದ ಮಾಸಾಶನ ಗಳು ಕ್ಲಪ್ತ ಸಮಯದಲ್ಲಿ ಸಿಗುವಂತೆ ಮಾಡಬೇಕು ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ವಿ.ಶೆಟ್ಟಿ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News