ವಿದ್ಯುತ್ ಬಿಲ್ ಸರಿಪಡಿಸಲು ಗುರುಪುರ ಗ್ರಾಪಂ ಮನವಿ

Update: 2020-06-02 17:47 GMT

ಗುರುಪುರ, ಜೂ.2: ಲಾಕ್‌ಡೌನ್ ಸಂದರ್ಭದಲ್ಲಿ ಮೆಸ್ಕಾಂ ಸಿಬ್ಬಂದಿಯು ಅಸಮರ್ಪಕ ವಿದ್ಯುತ್ ಮೌಲ್ಯಮಾಪನ ಮಾಡಿರುವುದರಿಂದ ಗ್ರಾಹಕರಿಗೆ ಜೂನ್ ತಿಂಗಳಲ್ಲಿ ಅಧಿಕ ಬಿಲ್ ಬಂದಿದೆ.ಸದ್ಯದ ಪರಿಸ್ಥಿತಿಯಲ್ಲಿ ಬಡ ಮತ್ತು ಮಧ್ಯಮ ವರ್ಗದ ಜನರು ಎದುರಿಸುತ್ತಿರುವ ಕಷ್ಟ-ನಷ್ಟ ಅರಿತು ವಿದ್ಯುತ್ ಬಿಲ್ ಮರುಮೌಲ್ಯಮಾಪನ ಮಾಡುವಂತೆ ಆಗ್ರಹಿಸಿ ಗುರುಪುರ ಗ್ರಾಪಂ ನಿಯೋಗವೊಂದು ಗುರುಪುರ ಕೈಕಂಬದ ಮೆಸ್ಕಾಂ ಅಧಿಕಾರಿಗೆ ಮನವಿ ನೀಡಿತು.

ಮನವಿ ಆಲಿಸಿದ ಮೆಸ್ಕಾಂ ಸಹಾಯಕ ಕಾರ್ಯ ನಿರ್ವಾಹಕ ಅಧಿಕಾರಿಯು ವಿದ್ಯುತ್ ಬಿಲ್ ಸರಿಪಡಿಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭ ಗುರುಪುರ ಗ್ರಾಪಂ ಅಧ್ಯಕ್ಷೆ ರುಕಿಯಾ, ಉಪಾಧ್ಯಕ್ಷ ಜಿ ಎಂ ಉದಯ ಭಟ್, ಸದಸ್ಯರಾದ ಸದಾಶಿವ ಶೆಟ್ಟಿ, ಯಶವಂತ ಶೆಟ್ಟಿ, ಅಹ್ಮದ್ ಬಾವ ಟಿ, ದಾವೂದ್, ಎ ಕೆ ಮುಹಮ್ಮದ್, ರಝಿಯಾ, ಉಮೈಬಾನು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News