ಜೂ.4: ಮಂಗಳೂರಿನ ವಿವಿಧೆಡೆ ವಿದ್ಯುತ್ ನಿಲುಗಡೆ

Update: 2020-06-02 17:52 GMT

ಮಂಗಳೂರು, ಜೂ.1: ನಗರದ ವಿವಿಧ ಫೀಡರ್‌ಗಳಲ್ಲಿ ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿದ್ದರಿಂದ ಜೂ.4ರಂದು ಬೆಳಗ್ಗೆ 10ರಿಂದ ಸಂಜೆ 3 ಗಂಟೆವರೆಗೆ ವಿದ್ಯುತ್ ನಿಲುಗಡೆಯಾಗಲಿದ್ದು, ಸಾರ್ವಜನಿಕರು ಸಹಕರಿಸಲು ಕೋರಲಾಗಿದೆ.

ಜೂ.4ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 1 ಘಂಟೆಯವರೆಗೆ 33 ಕೆವಿ ಕಾಟಿಪಳ್ಳ/ ಮುಲ್ಕಿ ಅಧಿಕ ಒತ್ತಡ ಮಾರ್ಗದಲ್ಲಿ ನಿರ್ವಹಣಾ ಕಾಮಗಾರಿ (ಮುಂಗಾರು ಪೂರ್ವ ನಿರ್ವಹಣಾ ಕಾಮಗಾರಿ) ಹಮ್ಮಿಕೊಳ್ಳಲಾಗಿದೆ. ಇದರಿಂದ ಮುಲ್ಕಿ, ಕಿನ್ನಿಗೋಳಿ, ಹಳೆಯಂಗಡಿ, ಚೇಳ್ಯಾರು, ಎಂಆರ್‌ಪಿಎಲ್ ಕಾಲನಿ, ಕೊಲ್ನಾಡು, ಕೈಗಾರಿಕಾ ಪ್ರದೇಶ, ಗೋಳಿಜೋರ, ಎಸ್ಕೋಡಿ, ಪಕ್ಷಿಕೆರೆ, ಶಿಮಂತೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ನಿಲುಗಡೆಯಾಗಲಿದೆ.

ಅಂದು ಬೆಳಗ್ಗೆ 10ರಿಂದ ಮಧ್ಯಾಹ್ನ 3 ಘಂಟೆಯವರೆಗೆ 11 ಕೆವಿ ತಡಂಬೈಲ್ ಮತ್ತು ಕುತ್ತೆತ್ತೂರು ಫೀಡರ್‌ಗಳಲ್ಲಿ ನಿರ್ವಹಣಾ ಹಮ್ಮಿಕೊಂಡಿದ್ದು, ತಡಂಬೈಲ್, ಮುಂಚೂರು, ಮುಕ್ಕ, ಸಸಿಹಿತ್ಲು, ಕತ್ತೆತ್ತೂರು, ರಾಜೀವನಗರ, ಆದರ್ಶನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ನಿಲುಗಡೆಯಾಗಲಿದೆ ಎಂದು ಮೆಸ್ಕಾಂ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News