ಬಂಟ್ವಾಳ ಪುರಸಭಾ ಮಾಜಿ ಅಧ್ಯಕ್ಷೆ ಯಶೋಧ ನಿಧನ

Update: 2020-06-02 18:05 GMT

ಬಂಟ್ವಾಳ: ಅನಾರೋಗ್ಯದಿಂದ ಬಳಲುತ್ತಿದ್ದ ಬಂಟ್ವಾಳ ಪುರಸಭಾ ಮಾಜಿ ಅಧ್ಯಕ್ಷೆ ಯಶೋಧ ಬಿ‌. ಅವರು ಇಂದು ರಾತ್ರಿ ಮಂಗಳೂರು ಖಾಸಗಿ ಆಸ್ಪತ್ರೆ ಯಲ್ಲಿ ಕೊನೆಯುಸಿರೆಳೆದರು ಎಂದು ಅವರ ಕುಟುಂಬ ಮೂಲಗಳು ತಿಳಿಸಿದ್ದಾರೆ.

ಕಳೆದ ಕೆಲ ವರ್ಷಗಳಿಂದ ಅನಾರೋಗ್ಯ ದಿಂದ ಬಳಲುತ್ತಿದ್ದ ಇವರು ನಿನ್ನೆ ಇವರ ಆರೋಗ್ಯ ದಲ್ಲಿ ಏರುಪೇರು ಉಂಟಾಯಿತು ಎಂಬ ಹಿನ್ನಲೆ ಯಲ್ಲಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ತೀವ್ರನಿಗಾ ಘಟಕದಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ ಅವರು ಚಿಕಿತ್ಸೆಗೆ ಸ್ಪಂದಿಸಿದೆ ಇಂದು ರಾತ್ರಿ ವೇಳೆ ಕೊನೆಯುಸಿರೆಳೆದರು ಎಂದು ತಿಳಿಸಿದ್ದಾರೆ.

ಪುರಸಭಾ ಅಧ್ಯಕ್ಷೆ-ಉಪಾಧ್ಯಕ್ಷೆಯಾಗಿ ಅಧಿಕಾರ ನಡೆಸಿದ ಮಹಿಳಾ ಜನಪ್ರತಿನಿಧಿ ಯಶೋಧ ಬಿ. ಎರಡು ಬಾರಿ ಬಿಜೆಪಿ ಪಕ್ಷದಿಂದ ಚುನಾವಣೆ ಗೆ ಸ್ಪರ್ಧಿಸಿ ಪುರಸಭಾ ಸದಸ್ಯರಾಗಿ ಆಯ್ಕೆಯಾಗಿದ್ದರು. ಪುರಸಭಾ ಸದಸ್ಯರಾಗಿ ಆಯ್ಕೆಯಾದ ಪ್ರಥಮ‌ ಅವಧಿಯಲ್ಲಿ ಇವರು ಪುರಸಭಾ ಉಪಾಧ್ಯಕ್ಷೆಯಾಗಿಯೂ ಎರಡನೇ ಬಾರಿ ಸದಸ್ಯರಾಗಿ ಆಯ್ಕೆಯಾದ ವೇಳೆ ಅಧ್ಯಕ್ಷೆ ಯಾಗಿಯೂ ಪುರಸಭೆಯ ಲ್ಲಿ ಆಡಳಿತ ಮಾಡಿದ ಮಹಿಳಾ ಜನಪ್ರತಿನಿಧಿ.

ಎರಡು ಬಾರಿ ಯೂ ಇವರು ಭಂಡಾರಿ ಬೆಟ್ಟು ಕ್ಷೇತ್ರದಿಂದ ಸ್ಪರ್ಧಿಸಿ ಸದಸ್ಯರಾಗಿ ಚುನಾಯಿತರಾಗಿದ್ದರು. 2001 ರಲ್ಲಿ ಪ್ರಥಮ ಅವಧಿಗೆ ಇವರು ಮಹಿಳಾ ಮೀಸಲಾತಿ ಆಯ್ಕೆಯಾಗಿ ಉಪಾಧ್ಯಕ್ಷೆ ಪಟ್ಟ ಅಲಂಕರಿಸಿದರೆ ಎರಡನೇ ಅವಧಿಯಲ್ಲಿ 2008ರಲ್ಲಿ ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧಿಸಿ ಅಧ್ಯಕ್ಷೆಯಾಗಿ ಮಿಂಚಿದರು. ಜೊತೆಗೆ ಜಿಲ್ಲಾ ಮಹಿಳಾ ಮೋರ್ಚಾದಲ್ಲಿ ಬಂಟ್ವಾಳ ಕ್ಷೇತ್ರ ಬಿಜೆಪಿಯಲ್ಲಿ ಸಕ್ರೀಯ ರಾಗಿದ್ದುಕೊಂಡು ಪಕ್ಷ ಸಂಘಟನೆಯ ಲ್ಲಿ ತನ್ನ ನ್ನು ತಾನು ತೊಡಗಿಸಿಕೊಂಡಿದ್ದರು.

ಇವರು ಸಾಮಾಜಿಕ ಕ್ಷೇತ್ರದಲ್ಲಿ ಮುಂಚೂಣಿಯ ನಾಯಕಿಯಾಗಿದ್ದರು. ಕುಲಾಲ ಸಮುದಾಯದ ಮುಂಚೂಣಿ ನಾಯಕಿಯಾಗಿದ್ದು, ಕುಲಾಲ ಸಂಘಟನೆಯಲ್ಲಿ ವಿವಿಧ ಜವಾಬ್ದಾರಿ ಯನ್ನು ವಹಿಸಿಕೊಂಡು ಸಮರ್ಥವಾಗಿ ನಿರ್ವಹಿಸಿದವರು. ಪುತ್ತೂರು ಕುಂಬಾರರ ಗುಡಿಕೈಗಾರಿಕೆ ಸಂಘ.ನಿ.ಇದರ  ಮಾಜಿ ನಿರ್ದೇಶಕ ರಾಗಿಯೂ ಕೆಲಸ ಮಾಡಿದವರು. 

ಇವರು ಬೊರ್ ವೆಲ್ ಉದ್ಯಮಿ ಕಲ್ಲಡ್ಕ ಕೃಷ್ಣಪ್ಪ ಅವರ  ಪತ್ನಿಯಾಗಿದ್ದಾರೆ. ಇವರು ಓರ್ವ ಮಗ ಮತ್ತು ಮಗಳು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ಬಿಜೆಪಿ ಮಾಜಿ ಪುರಸಭಾ ಅಧ್ಯಕ್ಷೆ ಯಶೋಧ ಅವರ ಸಾವಿಗೆ ಮಂಗಳೂರು ಸಂಸದ, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು, ಬಂಟ್ವಾಳ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ,  ಬಂಟ್ವಾಳ ಬೂಡಾ ಅಧ್ಯಕ್ಷ ದೇವದಾಸ್ ಶೆಟ್ಟಿ, ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ನಾಗರಾಜ ಶೆಟ್ಟಿ ಮತ್ತಿತರ ಗಣ್ಯರು ಸಂತಾಪ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News