ಐದು ತಿಂಗಳು ಕೊರೋನ ಜತೆ ಹೋರಾಡಿದ ವೈದ್ಯ ಮೃತ್ಯು

Update: 2020-06-03 04:23 GMT

ವುಹಾನ್, ಜೂ.3: ಕೋವಿಡ್-19 ಸೋಂಕು ತಗುಲಿ ಐದು ತಿಂಗಳ ಕಾಲ ಜೀವನ್ಮರಣ ಹೋರಾಟ ನಡೆಸಿದ ಇಲ್ಲಿನ ವೈದ್ಯ ಕೊನೆಯುಸಿರೆಳೆದಿದ್ದಾರೆ. ಕೊರೋನ ವೈರಸ್ ಚಿಕಿತ್ಸೆ ಪಡೆದ ಇವರ ದೇಹದ ಚರ್ಮ ಕಪ್ಪುಬಣ್ಣಕ್ಕೆ ತಿರುಗಿತ್ತು.

ಡಾ.ಹ್ಯು ವೀಫೆಂಗ್ (42) ಜನವರಿಲ್ಲಿ ಕೋವಿಡ್-19 ಚಿಕಿತ್ಸೆ ನೀಡುತ್ತಿದ್ದ ಸಂದರ್ಭ ಅವರಿಗೆ ಸೋಂಕು ತಗುಲಿತ್ತು. ವೂಹಾನ್ ಆಸ್ಪತ್ರೆಯಲ್ಲಿ ಅವರು ಇಂದು ನಿಧನರಾಗಿದ್ದಾರೆ ಎಂದು ದ ಪೇಪರ್‌ ವೆಬ್‌ಸೈಟ್ ವರದಿ ಮಾಡಿದೆ.

ಕೊರೋನ ವೈರಸ್‌ನಿಂದಾಗಿ ಉಂಟಾದ ಸಂಕೀರ್ಣ ಆರೋಗ್ಯ ಸಮಸ್ಯೆಗಳಿಗೆ ತಿಂಗಳಿಗೂ ಅಧಿಕ ಕಾಲ ಅವರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗಿತ್ತು ಎಂದು ಮೂಲಗಳು ಹೇಳಿವೆ.

ಮೂತ್ರಶಾಸ್ತ್ರ ತಜ್ಞರಾಗಿದ್ದ ಡಾ.ಹ್ಯು, ಮೊಟ್ಟಮೊದಲ ಬಾರಿಗೆ ಕೊರೋನ ವೈರಸ್ ಮಾಹಿತಿ ಬಹಿರಂಗಪಡಿಸಿ, ಪೊಲೀಸರಿಂದ ಬಂಧನಕ್ಕೊಳಗಾಗಿ ಅದೇ ಸೋಂಕಿಗೆ ಬಲಿಯಾದ ಲೀ ವೆನ್ಲಿಯಾಂಗ್ ಅವರ ಸಹೋದ್ಯೋಗಿ. ಇಬ್ಬರೂ ವುಹಾನ್ ಕೇಂದ್ರೀಯ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು.

ಆಸ್ಪತ್ರೆಯಲ್ಲಿ ಕನಿಷ್ಠ ಐದು ಮಂದಿ ವೈದ್ಯರು ಕೋವಿಡ್-19ಗೆ ಬಲಿಯಾಗಿದ್ದಾರೆ. ಚಿಕಿತ್ಸೆ ವೇಳೆ ಹ್ಯು ಅವರಿಗೆ ನೀಡಿದ ಆಂಟಿಬಯಾಟಿಕ್ಸ್‌ನಿಂದಾಗಿ ಅವರ ಚರ್ಮ ಕಪ್ಪುಬಣ್ಣಕ್ಕೆ ತಿರುಗಿತ್ತು ಎಂದು ವಕ್ತಾರರು ಈ ಮೊದಲು ಹೇಳಿದ್ದರು. ಚರ್ಮ ಕಪ್ಪುಬಣ್ಣಕ್ಕೆ ತಿರುಗಿದ್ದ ಸಹೋದ್ಯೋಗಿ ಡಾ.ಯೀ ಫನ್ ಅವರು ಚಿಕಿತ್ಸೆ ಬಳಿಕ ಚೇತರಿಸಿಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News