ಆಟೋ ರಿಕ್ಷಾ ಮೀಟರ್ ಸತ್ಯಾಪನೆ ಪ್ರಕ್ರಿಯೆ ದರ ಕಡಿಮೆ ಮಾಡಲು ಎಸ್ಡಿಟಿಯುನಿಂದ ಜಿಲ್ಲಾಧಿಕಾರಿಗೆ ಮನವಿ

Update: 2020-06-03 06:57 GMT

ಮಂಗಳೂರು, ಜೂ.3: ಆಟೋ ರಿಕ್ಷಾ ದರ ಪರಿಷ್ಕರಣೆಯ ಮೀಟರ್ ಸತ್ಯಾಪನೆ ಮತ್ತು ತೂಕ ಮಾಪನ ಶಾಸ್ತ್ರ ಇಲಾಖೆಯ ದೃಢೀಕರಣ  ಪ್ರಕ್ರಿಯೆಗೆ ತಾಂತ್ರಿಕ ಡೀಲರ್ ಗಳು ದುಬಾರಿ ವೆಚ್ಚ ಪಡೆಯುತ್ತಿದ್ದಾರೆ. ಈ ಮೊತ್ತವನ್ನು ಕಡಿಮೆ ಮಾಡುವಂತೆ ಎಸ್ಡಿಟಿಯು ಅಧೀನದಲ್ಲಿರುವ  ಸೋಶಿಯಲ್ ಡೆಮಾಕ್ರೆಟಿಕ್ ಆಟೋ ಚಾಲಕರ ಯೂನಿಯನ್ ಮಂಗಳೂರು ನಗರ ಸಮಿತಿಯು ದ.ಕ. ಜಿಲ್ಲಾಧಿಕಾರಿ ಮತ್ತು ಸಾರಿಗೆ ಇಲಾಖೆ ಅಧಿಕಾರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದೆ

 ಪರಿಷ್ಕೃತ ಆಟೋ ರಿಕ್ಷಾ ಪ್ರಯಾಣ ದರಕ್ಕೆ ಅನುಗುಣವಾಗಿ ಆಟೋ ರಿಕ್ಷಾ ಮೀಟರ್ ಅನ್ನು ಸತ್ಯಾಪನೆ ಮಾಡಿ ಸಂಬಂಧಪ್ಪಟ್ಟ ಇಲಾಖೆಯಿಂದ ದೃಢೀಕರಿಸುವ ಪ್ರಕ್ರಿಯೆಗೆ ತಾಂತ್ರಿಕ ಡೀಲರ್ ಗಳು ಪ್ರತೀ ಮೀಟರ ಒಂದಕ್ಕೆ  550 ರೂ. ವೆಚ್ಚ ಪಡೆಯುತ್ತಿದ್ದಾರೆ. ಲಾಕ್ ಡೌನ್ ನಿಂದ ಕಂಗೆಟ್ಟ ಶ್ರಮಿಕ ವರ್ಗ ಆಟೋ ರಿಕ್ಷಾ ಚಾಲಕರಿಗೆ ಸದ್ಯದ ಪರಿಸ್ಥಿತಿಯಲ್ಲಿ ಈ ವೆಚ್ಚ ಭರಿಸುವುದು ಕಷ್ಟಕರವಾಗಿದೆ. ಆದ್ದರಿಂದ   ಸಾರಿಗೆ ಇಲಾಖೆ ಅಧಿಕಾರಿಗಳು ಮತ್ತು ಜಿಲ್ಲಾಧಿಕಾರಿ ರಿಕ್ಷಾ ಚಾಲಕರ ಸಂಕಷ್ಟವನ್ನು ಅರ್ಥ ಮಾಡಿ ಈ ಪ್ರಕ್ರಿಯೆಗೆ ಕನಿಷ್ಠ ದರ ನಿಗದಿಪಡಿಸಲು ಆದೇಶ ಹೊರಡಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಮನವಿ ಸಲ್ಲಿಸಿದ ನಿಯೋಗದಲ್ಲಿ ಎಸ್ಡಿಟಿಯು ಜಿಲ್ಲಾಧ್ಯಕ್ಷ ಖಾದರ್ ಫರಂಗಿಪೇಟೆ, ಜಿಲ್ಲಾ ಸಮಿತಿಐ ಸದಸ್ಯ ನೌಫಲ್ ಕುದ್ರೋಳಿ,  ನಗರ ಸಮಿತಿಯ ಅಧ್ಯಕ್ಷ ಮಜೀದ್ ಉಳ್ಳಾಲ,  ಕಾರ್ಯದರ್ಶಿ ಶರೀಫ್ ಕುತ್ತಾರ್, ಸದಸ್ಯರಾದ ಹರ್ಷದ್ ಕುದ್ರೋಳಿ, ಇಲ್ಯಾಸ್ ಬೆಂಗರೆ  ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News