×
Ad

ಜೂ.4ರಿಂದ ಕೊರೋನ ವಾರಿಯರ್ಸ್‌ಗಳಿಂದ ‘ಸೆಲ್ಫ್ ಹೋಂ ಕ್ವಾರೆಂಟೇನ್’ ಅಸಹಕಾರ ಚಳುವಳಿ

Update: 2020-06-03 19:13 IST

ಉಡುಪಿ, ಜೂ.3: ಆರೋಗ್ಯ ಇಲಾಖೆ,ರಾಷ್ಟ್ರೀಯ ಆರೋಗ್ಯ ಅಭಿಯಾನ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯ ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರ ಹಲವು ವರ್ಷಗಳ ಬೇಡಿಕೆಗೆ ಈಡೇರಿಸುವಂತೆ ಆಗ್ರಹಿಸಿ ರಾಜ್ಯ ಸಂಘದ ಕರೆಯಂತೆ ಉಡುಪಿ ಜಿಲ್ಲೆಯ ಒಟ್ಟು 450 ನೌಕರರು ಜೂ.4ರಿಂದ ಕೆಲಸ ಬಹಿಷ್ಕರಿಸಿ ಅನಿರ್ಧಿಷ್ಟಾವಧಿ ಮುಷ್ಕರ(ಅಸಹಾಕಾರ ಚಳುವಳಿ) ನಡೆಸಲಿದ್ದಾರೆ.

ಕೊರೋನ ವೈರಸ್‌ನಿಂದ ಹೆಚ್ಚು ಜನ ಸೇರುವುದನ್ನು ನಿಷೇಧಿಸಿ ಸರಕಾರ ಆದೇಶ ಹೊರಡಿಸಿರುವ ಹಿನ್ನಲೆಯಲ್ಲಿ ಜೂ.4ರಿಂದ ಮುಂದಿನ ನಿರ್ಣಯ ತಿಳಿಸುವವರೆಗೆ ತಮ್ಮ ತಮ್ಮ ಮನೆಯಲ್ಲಿಯೇ ಇದ್ದು(ಸೆಲ್ಫ್ ಹೋಂ ಕ್ವಾರೆಂಟೇನ್) ಅಸಹಕಾರ ಚಳುವಳಿ ಮಾಡಲು ಈ ಮೂಲಕ ಸೂಚಿಸಲಾಗಿದೆ ಎಂದು ಉಡುಪಿ ಜಿಲ್ಲಾ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಸಂಘದ ಅಧ್ಯಕ್ಷ ಮಂಜುನಾಥ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇದರಿಂದಾಗಿ ಜಿಲ್ಲೆಯ ಕೋವಿಡ್-19 ಕಂಟ್ರೋಲ್ ರೂಮ್‌ನಿಂದ ಐಸೋಲೆಶೇನ್ ವಾರ್ಡ್‌ವರೆಗಿನ ಎಲ್ಲ ಕಾರ್ಯಗಳಲ್ಲೂ ತೊಡಗಿಸಿಕೊಂಡಿ ರುವ ಈ ನೌಕರರು, ಕರ್ತವ್ಯಕ್ಕೆ ಹಾಜರಾಗದ ಪರಿಣಾಮ ಕೋವಿಡ್-19 ಕಾರ್ಯದಲ್ಲಿ ತೊಡಕಾಗುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News