ಸಂಸದೆ, ಉಸ್ತುವಾರಿ ಸಚಿವ, ಶಾಸಕರ ನಿರ್ಲಕ್ಷದಿಂದ ಕೊರೋನ ಹೆಚ್ಚಳ: ಯುವ ಕಾಂಗ್ರೆಸ್

Update: 2020-06-03 13:45 GMT

ಉಡುಪಿ, ಜೂ.3: ಉಡುಪಿಯಲ್ಲಿ ಕಳೆದ ಒಂದೆರಡು ವಾರದಿಂದ ಗರಿಷ್ಠ ಪ್ರಮಾಣದಲ್ಲಿ ಕೊರೊನಾ ಪಾಸಿಟಿವ್ ಸಂಖ್ಯೆ ಏರಲು ಉಡುಪಿ ಜಿಲ್ಲೆಯ 5 ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು, ಲೋಕಸಭಾ ಸದಸ್ಯರು, ರಾಜ್ಯ ಸರಕಾರ ಮತ್ತು ಕೇಂದ್ರ ಸರಕಾರ ನೇರವಾಗಿ ಹೊಣೆಯಾಗಿದೆ ಎಂದು ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ವಿಶ್ವಾಸ್ ಅಮೀನ್ ಆರೋಪಿಸಿದ್ದಾರೆ.

ಕೊರೋನ ಪರೀಕ್ಷೆಗಾಗಿ ಜಿಲ್ಲೆಯಲ್ಲಿ ಲ್ಯಾಬ್ ತೆರೆಯಲು ಯಾವುದೇ ಒತ್ತಡ ಹೇರುವ ಕೆಲಸವನ್ನು ಶಾಸಕರು, ಸಂಸದರು, ಉಸ್ತುವಾರಿ ಸಚಿವರು ಕೇಂದ್ರದ ಮೇಲೆ ಯಾವುದೇ ಒತ್ತಡ ಹೇರುವ ಕೆಲಸವನ್ನು ಮಾಡಿಲ್ಲ. ಕೊರೋನಾ ಸಮಯದಲ್ಲಿ ಜನತೆಯ ಜೊತೆ ಇರಬೇಕಾಗಿದ್ದ ಇವರು ಜನರ ನೋವಿಗೆ ದನಿಯಾಗುವ ಕೆಲಸ ಮಾಡಿಲ್ಲ ಎಂದು ಅವರು ದೂರಿದ್ದಾರೆ.

ಕೇಂದ್ರ ಸರಕಾರದ ಸೂಚನೆಯಂತೆ ರಾಜ್ಯ ಸರಕಾರದ ಆದೇಶದ ಮೇರೆಗೆ ಜಿಲ್ಲಾಡಳಿತವು 14ದಿನಗಳ ಕ್ವಾರಂಟೈನ್ ಪೂರ್ಣಗೊಳಿಸಿದವರ ಜೊತೆಗೆ 7 ದಿನ ಪೂರೈಸಿದವರ ವರದಿ ಪರೀಶೀಲಿಸದೇ ಮನೆಗೆ ಕಳುಹಿಸಿದ್ದರ ಪರಿಣಾಮ ಜಿಲ್ಲೆಯಾದ್ಯಂತ ಪಾಸಿಟಿವ್ ಹೆಚ್ಚಾಗುತ್ತಿದ್ದು ಇದರಿಂದ ಜಿಲ್ಲೆಯ ಜನತೆ ಕಂಗಾಲಾಗಿದ್ದಾರೆ. ಸರಕಾರ ಪ್ರತಿ ದಿನದ ಪರೀಕ್ಷೆಯ ವರದಿ ಪ್ರತಿ ದಿನ ಸಿಗು ವಂತೆ ಮಾಡಿದ್ದರೇ ಇಷ್ಟೇಲ್ಲಾ ಸಮಸ್ಯೆ ಬರುತ್ತಿರಲಿಲ್ಲ ಎಂದು ಅವರು ಹೇಳಿಕೆ ಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News