ಅರ್ಧಕ್ಕೆ ನಿಂತ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ: ಪರ್ಕಳದ ಅಂಗಡಿಗಳಿಗೆ ನುಗ್ಗಿದ ಕೆಸರು ನೀರು

Update: 2020-06-03 13:49 GMT

ಉಡುಪಿ, ಜೂ.3: ಕಳೆದ ಮೂರು ತಿಂಗಳುಗಳಿಂದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಅರ್ಧಕ್ಕೆ ಸ್ಥಗಿತಗೊಂಡ ಪರಿಣಾಮ ಪರ್ಕಳದ ಬಾಬುರಾಯ ಸರ್ಕಲ್ ಬಳಿಯ ಸಿಂಡಿಕೇಟ್ ಬ್ಯಾಂಕಿನ ಎದುರುಗಡೆ ಇರುವ ಅಂಗಡಿಗಳಿಗೆ ಕೆಸರು ನೀರು ನುಗ್ಗಿ ಸ್ಥಳೀಯರು ತೀವ್ರ ತೊಂದರೆ ಅನುಭವಿಸುವಂತಾಗಿದೆ.

ಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ ಇಲ್ಲಿರುವ ಗ್ಯಾರೇಜ್, ವೆಲ್ಡಿಂಗ್ ಶಾಪ್, ಫರ್ನಿಚರ್ ಅಂಗಡಿ, ಕಟ್ಟಿಗೆ ಡಿಪೋ ಮೊದಲಾದ ಅಂಗಡಿಗಳಿಗೆ ಮೊದಲ ಮಳೆಯಿಂದ ಪರ್ಕಳ ಪೇಟೆಯ ನೀರು, ಕಾಮಗಾರಿಯ ಕೆಸರು ನೀರು ನುಗ್ಗಿದೆ. ಇದರಿಂದ ಕಾಮಗಾರಿ ನಡೆಸಲಾದ ನೂತನ ರಸ್ತೆ ಬಿರುಕು ಬಿಟ್ಟಿರು ವುದು ಕಂಡುಬಂದಿದೆ.

ಈ ಕಾಮಗಾರಿ ನಡೆಸುವ ಮೊದಲ ಹಂತದಲ್ಲಿ ಚರಂಡಿ ವ್ಯವಸ್ಥೆ ಮಾಡದೆ, ಕೇವಲ ಕೆಂಪು ಮಣ್ಣ ದಿಣ್ಣೆಗಳನ್ನು ಹಾಕಿ ಒಂದು ಬದಿಯಲ್ಲಿ ಏರಿಕೆ ಪ್ರಮಾಣದ ರಸ್ತೆಯನ್ನು ಮಾಡಿರುವುದೇ ಇದೆಲ್ಲ ಆವಂತರಕ್ಕೆ ಕಾರಣವಾಗಿದೆ. ಇದರಿಂದ ಇದೀಗ ಸಾರ್ವಜನಿಕರು ಹಾಗೂ ವಾಹನ ಚಾಲಕರು, ಅಂಗಡಿ ಮಾಲಿಕರು ಸಂಕಷ್ಟ ಪಡುವ ಸ್ಥಿತಿ ನಿರ್ಮಾಣವಾಗಿದೆ.

ಕಳೆದೆರಡು ತಿಂಗಳಿಂದ ಕೊರೋನ ಭೀತಿಯಿಂದ ಬಂದ್ ಆಗಿರುವ ಅಂಗಡಿ ಮುಂಗಟ್ಟುಗಳು ತೆರೆಯಲು ಈ ಹೆದ್ದಾರಿಯ ಕಾಮಗಾರಿ ತೊಡಕಾಗಿದೆ. ಇದ ರಿಂದ ಆಗಿರುವ ನಷ್ಟಕ್ಕೆ ಪರಿಹಾರವನ್ನು ಸಂಬಂಧಪಟ್ಟ ಇಲಾಖೆ ಹಾಗೂ ಜಿಲ್ಲಾಡಳಿತ ಕೂಡಲೇ ನೀಡುವಂತೆ ಸ್ಥಳೀಯ ಅಂಗಡಿಯ ಮಾಲಕ ಪೆರ್ಡೂರು ಮಟ್ಟಿಬೈಲು ಸುಧಾಕರ್ ಶೆಟ್ಟಿ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News